Syed Azeempeer Khadri: ಕೊಟ್ಟ ಮಾತಿಗೆ ತಪ್ಪದ ಖಾದ್ರಿ: ಫಠಾಣ್ ಶಾಸಕನಾಗಿ ಮಾಡಿ ಸಿಎಂ ಗೆ ಉಡುಗೊರೆ

ಶಿಗ್ಗಾಂವ: ಶಿಗ್ಗಾವ್ ಸವಣೂರು ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾಸಿರ್ ಅಹಮದ್ ಖಾನ್ ಪಠಾಣ್ ಗೆಲುವಿನಲ್ಲಿ ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ ಸಾಕಷ್ಟು ಶ್ರಮವನ್ನು ವಹಿಸಿದ್ದು ಈ ಗೆಲುವು ಕದ್ರಿ ಅವರಿಗೆ ಅಗ್ನಿ ಪರೀಕ್ಷೆಯಾಗಿ ಮಾರ್ಪಟ್ಟಿತ್ತು 1994 ರಿಂದ ಈ ಕ್ಷೇತ್ರದಲ್ಲಿ ಸಕ್ರಿಯ ರಾಜಕಾರಣದ ಜೊತೆಗೆ ತನ್ನದೇ ಹಿಡಿತ ಸಾಧಿಸಿದ್ದ ಅಜ್ಜಂಪಿರ್ ಖಾದ್ರಿ ಈ ಗೆಲುವಿನೊಂದಿಗೆ ಈ ಕ್ಷೇತ್ರದ ಜನರ ಮನಸ್ಸಿನಲ್ಲಿ ಶಾಸಕನ ಸ್ಥಾನಕ್ಕಿಂತ ಹೆಚ್ಚಿನ ಪ್ರೀತಿಗೆ ಪಾತ್ರ ಆಗಿದ್ದು ಯಾವುದೇ ಹಿಂಜರಿಕೆ ಇಲ್ಲದೆ ತಾನೇ ಅಭ್ಯರ್ಥಿ ಅಂತ ಕ್ಷೇತ್ರದ ತುಂಬಾ ಓಡಾಟ ನಡೆಸಿ ಪಠಾಣ್ ಗೆಲುವಿನ ಹಿಂದೆ ತನ್ನನ್ನು ತಾನು ತೊಡಿಸಿಕೊಂಡಿದ್ದು ಈ ಗೆಲುವಿನ ಅಂತರ ನೋಡಿದರೆ ಸಾಮಾನ್ಯ ಕಾರ್ಯಕರ್ತನು ಕೂಡ ಖಾದ್ರಿ ಅವರ ತ್ಯಾಗದ ಹಿಂದೆ ಪಠಾಣ್ ಗೆಲುವು ಇದೆ ಅನ್ನುವುದನ್ನು ಅಲ್ಲ ಗೆಳೆಯಂತಿಲ್ಲ…..

ಸಿಎಂ ಎದುರು ಮಾತುಕೊಟ್ಟಿದ್ದ ಖಾದ್ರಿ

ಸಿಎಂ ಸಿದ್ದರಾಮಯ್ಯ ಅವರು ಈ ಉಪ ಚುನಾವಣೆಯಲ್ಲಿ 7 ಬಹಿರಂಗ ಸಭೆ ಮಾಡಿದ್ದು ಇದರಲ್ಲಿ ಸಿದ್ದರಾಮಯ್ಯ ಬಿಟ್ಟರೆ ಖಾದ್ರಿ ಅವರ ಅಬ್ಬರದ ಭಾಷಣ ಇಲ್ಲಿಯ ಜನರಿಗೆ ಹತ್ತಿರವಾಗಿದ್ದವು ,ಪ್ರತಿ ಜಿಲ್ಲಾ ಪಂಚಾಯತ್ ಮಟ್ಟದ ಸಭೆಯಲ್ಲಿ ಅಲ್ಲಿಯ ಸಮಸ್ಯೆ ಹಾಗು ಎದುರಾಳಿ ಯಾವ ರೀತಿ ದಾಳ ಉರಿಳಿಸುತ್ತಾರೆ ಅನ್ನೊ ನೈಜ ಪರಿಸ್ಥಿತಿಯನ್ನ ಜನರ ಮುಂದೆ ತಿಳಿಸಿದಾಗ ಎಷ್ಟೋ ಬಾರಿ ಸಿಎಂ ಕೂಡಾ ಖಾದ್ರಿ ಹೆಸರು ಉಲ್ಲೆಖಿಸಿ ಆ ಆಮಿಷಗಳಿಗೆ ಒಳಗಾಗದೆ ಕಾಂಗ್ರೆಸ್ ಬೆಂಬಲಿಸಲು ಮನವಿ ಮಾಡಿದ್ದರು ,

ಖಾದ್ರಿ ಗ್ರಾಮ ಮಟ್ಟದ ಸಭೆಯಲ್ಲಿ ಜನರಿಗೆ ಸಿದ್ದರಾಮಯ್ಯ ಅವರಿಗೆ ಮಾತು ಕೊಟ್ಟಿರುವೆ ಫಠಾಣ್ ಅವರನ್ನ ಗೆಲ್ಲಿಸಿ ನಿಮಗೆ ಉಡುಗೊರೆ ಯಾಗಿ ನಿಮ್ಮ ಮುಂದೆ ಬರುವೆ ಅನ್ನೊ ಮಾತು ಸಾಕಷ್ಟು ಜನರ ಮನ ಮುಟ್ಟಿತ್ತು….

ಖಾದ್ರಿ ಕೋಟ್
ಪಠಾಣ್ ಗೆಲುವಿನಲ್ಲಿ ನನ್ನ ಗೆಲವನ್ನು ಕಂಡಿರುವೆ ನನ್ನ ತಾಯಿಯ ಮೇಲೆ ಮೂಡಾ ಹಗರಣ ತಳಕು ಹಾಕಿದ್ದ ಬಿಜೆಪಿಗೆ ತಕ್ಕ ಪಾಠವನ್ನು ಶಿಗ್ಗಾಂವ ಮುಖಾಂತರ ಕಳಿಸಿದ್ದೇವೆ ಸಿದ್ದರಾಮಯ್ಯ ನನಗೆ ಗುರು ಅವರ ಮಾತನ್ನು ನನ್ನ ದೇಹದಲ್ಲಿ ಉಸಿರು ಇರುವ ತನಕ ಮೀರಲ್ಲ, ಕೊಟ್ಟ ಮಾತನ್ನ ಉಳಿಸಿಕೊಂಡ ಆತ್ಮ ತೃಪ್ತಿ ನನಗೆ ಇದೆ ನಾನು ಹಣಬಲದ ಮೇಲೆ ರಾಜಕಾರಣ ಮಾಡಿದವನ್ನಲ್ಲ ಮುಂದೆನು ಮಾಡಲ್ಲ ಆತ್ಮಶುದ್ದಿಯಾಗಿದ್ದರೆ ದೇವರು ಯಾವತ್ತು ಕೈ ಬಿಡಲ್ಲ ಅನ್ನೊ ವಿಶ್ವಾಸದಲ್ಲಿ ಮುಂದೆ ಸಾಗುವೆ…….

ಶಿಗ್ಗಾಂವ ಹೊಸ ಶಾಸಕನ ಜೊತೆ ಉತ್ತರ ಕರ್ನಾಟಕದ ಅಲ್ಪಸಂಖ್ಯಾತ ನಾಯಕನ ಉದಯ
ಖಾದ್ರಿ ತನ್ನ ತ್ಯಾಗದಿಂದ ಶಾಸಕನಾಗುವ ಕನಸು ನುಚ್ಚು ನೂರು ಆಗಿದೆ ಆದರೆ ಶಾಸಕನ ಸ್ಥಾನಕ್ಕಿಂತ ಹೆಚ್ಚಿನ ಸ್ಥಾನ ಸಿಕ್ಕಿದ್ದು ಉತ್ತರ ಕರ್ನಾಟಕದ ಅಲ್ಪಸಂಖ್ಯಾತ ನಾಯಕ ಇವರು ಕೂಡಾ ಅನ್ನೊ ಮಾತು ಕಾಂಗ್ರೆಸ್ ಅಂಗಳದಲ್ಲಿ ತಾನಾಗಿಯೆ ಮುನ್ನಲೆಗೆ ಬಂದಿದೆ….

ಹುಲಗೂರ ನಿಂದ ವಿಜಯಪುರದ ತನಕ ಖಾದ್ರಿ ನಂಟು

ಈ ಭಾಗದ ಭಾವೈಕ್ಯ ಕ್ಷೇತ್ರದಲ್ಲಿ ಒಂದಾದ ಹಜರತ್ ಶಾ ಖಾದ್ರಿ ದರ್ಗಾದ ಮನೆತನದ ಕೂಡಿಯಾಗಿರುವ ಅಜ್ಜಂಫಿರ್ ಖಾದ್ರಿ ಕೊಟ್ಟ ಮಾತಿಗೆ ತಪ್ಪಲ್ಲ ಅನ್ನೊ ಸಂದೇಶ ಈ ಗೆಲುವಿನ ಮುಖಾಂತರ ಹೈ ಕಮಾಂಡಗೆ ತೊರಿಸಿದ್ದಾರೆ…

ಉತ್ತರ ಕರ್ನಾಟಕದ ಲಕ್ಷಾಂತರ ಭಕ್ತರ ಕೇಂದ್ರ ಬಿಂದು ಆಗಿರುವ ಹುಲಗೂರ ದರ್ಗಾದ ವಿಷೇಶ ಏನೆಂದರೆ ಹಿಂದು ಮುಸ್ಲಿಂ ಎಲ್ಲರ ಜೊತೆ ಖಾದ್ರಿ ಅವರ ಒಡನಾಟ ಜಾಸ್ತಿ ಇದೆ ಈ ಭಾಗದ ಒಬ್ಬ ಸರ್ವಜನಾಂಗದ ನಾಯಕರ ಸಾಲಿನಲ್ಲಿ ಈ ಚುನಾವಣೆಯಲ್ಲಿ ಖಾದ್ರಿ ಸಾಬಿತು ಮಾಡಿದ್ದಾರೆ…

ಈ ಭಾಗದ ಅಲ್ಪಸಂಖ್ಯಾತ ನಾಯಕರ ಕೊರತೆಯನ್ನ ಖಾದ್ರಿ ಅವರು ತೊರಿಸಿದ ಶಕ್ತಿಯಿಂದ ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ನಲ್ಲಿ ದೊಡ್ಡ ಹುದ್ದೆ ಸಿಗುವ ಎಲ್ಲ ಲಕ್ಷಣಗಳು ಕಾಣುತ್ತಿವೆ..

ಮುಂಬರುವ ಪೆಬ್ರವರಿ ತಿಂಗಳಲ್ಲಿ ತನ್ನ ತ್ಯಾಗಕ್ಕೆ ಎಂಎಲ್ಸಿ ಸ್ಥಾನ ಕೊಡಲು ಹೈ ಕಮಾಂಡ್ ಗ್ರಿನ್ ಸಿಗ್ನಲ್ ಕೊಡಲು ತಯಾರಾಗಿದೆ ಅನ್ನೊ ಮಾತು ಕಾಂಗ್ರೆಸ್ ನಾಯಕರಲ್ಲಿ ಕೇಳಿ ಬರ್ತಿದೆ…

ಉತ್ತರ ಕರ್ನಾಟಕ ಭಾಗದಲ್ಲಿ ಅಲ್ಪಸಂಖ್ಯಾತ ನಾಯಕರ ಕೊರತೆಯನ್ನು
ಈ ಗೆಲುವಿನ ಮುಖಾಂತರ ನಾನು ಕೂಡಾ ಅಲ್ಪಸಂಖ್ಯಾತ ಪ್ರಬಲ ನಾಯಕ ಅನ್ನೊವದನ್ನ ಕೆಲಸದ ಮುಖಾಂತರ ಖಾದ್ರಿ ಅವರು ತೊರಿಸಿದ್ದು ಕಾಂಗ್ರೆಸ್ ನಾಯಕರು ಮುಂದಿನ ದಿನಗಳಲ್ಲಿ ಖಾದ್ರಿ ಅವರಿಗೆ ವಿಸ್ವಾಸಕ್ಕೆ ತೆಗೆದು ಕೊಳ್ಳದಿದ್ದರೆ ದೊಡ್ಡ ಹೊಡೆತ ಬಿಳುವದು ಗ್ಯಾರಂಟಿ…

30 ವರ್ಷದ ರಾಜಕೀಯ ಜೀವನದ ಏರುಪೇರು

1994 ಜನತಾ ಪರಿವಾರದ ದಿಂದ ಮೊದಲು ಶಾಸಕನಾದ ಖಾದ್ರಿ ನಂತರದ ರಾಜಕೀಯ ಜೀವನದಲ್ಲಿ ಕಂಡುದ್ದು ಸಾಲು ಸಾಲು ಸೋಲು ,ಗೆಲ್ಲುವ ಎಲ್ಲ ಲಕ್ಷಣಗಳ ಇದ್ದರು ತನ್ನ ಎದುರಾಳಿಯಾಗಿ ಬಂದಿದ್ದು ಮಾಜಿ ಸಿಎಂ ಬೊಮ್ಮಾಯಿ ,

ಹಳ್ಳಿಯಿಂದ ರಾಜಕೀಯ ಜೀವನ ಸಾಗಿಸಿದ್ದ ಖಾದ್ರಿ ದುಡ್ಡಿನಿಂದ ಅಷ್ಟೇನು ಶ್ರೀಮಂತನಲ್ಲ ಇಂದು ಕೂಡಾ ಸಣ್ಣ ಕಿರಾಣಿ ಅಂಗಡಿಯಲ್ಲಿ ಕಾರ್ಯಕರ್ತರ ಜೊತೆ ಚಹಾ ಹಾಗು ಮಂಡಕ್ಕಿ ಸವೇದು ಓಡಾಟ ಮಾಡುವ ಜಾಯಮಾನ …..

ಮಾಜಿ ಸಿಎಂ ಮಗನ ಹಣದ ಎದುರು ಸೊತಿದ್ದ ಖಾದ್ರಿ ಮುಂದೆ ಅವರು ಸಿಎಂ ಆಗಿ ರಾಜ್ಯ ಆಳಿದ ನಂತರ ಅದೇ ಸಿಎಂ ಮಾಜಿ ಆದ ನಂತರ ಅವನ ಮಗನನ್ನು ಸೋಲಿಸಿ ಫಠಾಣ್ ಗೆಲುವಿನ ಹಿಂದೆ ಶ್ರಮಿಸಿ ಇತಿಹಾಸ ಬರೆದಿರುವ ಖಾದ್ರಿ ಮುಂದಿನ ಸ್ಥಾನ ಮಾನದ ಲೆಕ್ಕ ಮುಂಬರು ದಿನಗಳಲ್ಲಿ ಕಾಂಗ್ರೆಸ್ ತೆಗೆದುಕೊಳ್ಳುವ ನಿರ್ಧಾರದ ಮೇಲೆ ನಿಂತಿದೆ.

More News

You cannot copy content of this page