HUBBALLI: ಬೆಳ್ಳಂ ಬೆಳಗ್ಗೆ ಗುಂಡಿನ ಸದ್ದು, ದರೋಡೆಕೋರನ​ ಮೇಲೆ ಫೈರಿಂಗ್​

ಹುಬ್ಬಳ್ಳಿ: ಮನೆ ಕಳವು ಪ್ರಕರಣದ ಆರೋಪಿ, ನೆಟೋರಿಯಸ್ ಪಾಲಾ ವೆಂಕಟೇಶ್ವರರಾವ್ ಎರಡೂ ಕಾಲಿಗೆ ಪೋಲೀಸರು ಶನಿವಾರ ಬೆಳಗ್ಗೆ ಗುಂಡು ಹೊಡೆದಿದ್ದಾರೆ.
ಧಾರವಾಡದ ನವಲೂರಿನ ಮನೆಯೊಂದಕ್ಕೆ ಕನ್ನ ಹಾಕಿದ್ದ ಭೂಪ, ನಟೋರಿಯಸ್ ಪಾಲಾನನ್ನ ಬಂಧಿಸಿ ಹೆಚ್ಚಿನ ವಿಚಾರಣೆ ಕರೆದುಕೊಂಡು ಹೋದಾಗ ಪೊಲೀಸರ ಮೇಲೆ ದಾಳಿ ಮಾಡಿದ್ದಾನೆ. ಆರೋಪಿ ದಾಳಿ ಮಾಡಿದ ಹಿನ್ನೆಲೆಯಲ್ಲಿ ಪಿಎಸ್ ಸೇರಿ ಇಬ್ಬರು ಸಿಬ್ಬಂದಿಗೆ ಗಾಯಗಳಾಗಿದ್ದು ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 80 ಕ್ಕೂ ಹೆಚ್ಚು ಕಳ್ಳತನದಲ್ಲಿ ಭಾಗಿಯಾಗಿದ್ದ ನಟೋರಿಯಸ್ ಪಾಲಾ ವೆಂಕಟೇಶ್ವರ‌ರಾವ್ ಮೂಲತಃ ಆಂದ್ರಪ್ರದೇಶದವ. ಸುಮಾರು ಐದು ರಾಜ್ಯಗಳ ಪೊಲೀಸರ ಬೇಕಾಗಿದ್ದ ಪಾಲಾ ಈಗ ಪೊಲೀಸರ ಹಾಗೂ ಆಸ್ಪತ್ರೆ ಸೆರೆಯಲ್ಲಿ ಇದ್ದಾನೆ.
ಮನೆ ಕಳವು ಪ್ರಕರಣದ ಆರೋಪಿ, ನೆಟೋರಿಯಸ್ ಪಾಲಾ ವೆಂಕಟೇಶ್ವರರಾವ್ ಹಾಗೂ
ಕಿಮ್ಸ್ ಆಸ್ಪತ್ರೆಯಲ್ಲಿ ಹಾಗೂ ಗಾಯಾಳು ಪೊಲೀಸ್ ಸಿಬ್ಬಂದಿ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದು ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ಶಶಿಕುಮಾರ್ ಭೇಟಿ ನೀಡಿ ಆರೋಗ್ಯ ವಿಚಾರಣೆ ಮಾಡಿ ಘಟನೆ ಕುರಿತು ಮಾಹಿತಿ ನೀಡಿದರು.

More News

You cannot copy content of this page