Hubli Cylinder Blast Case: ಹುಬ್ಬಳ್ಳಿ ಸಿಲಿಂಡರ್​ ಬ್ಲಾಸ್ಟ್​ ಪ್ರಕರಣ: ಮತ್ತೋರ್ವ ಅಯ್ಯಪ್ಪ ಮಾಲಾಧಾರಿ ಸಾವು

ಹುಬ್ಬಳ್ಳಿ: ಸಿಲಿಂಡರ್ ಸ್ಫೋಟಗೊಂಡು ತೀರ್ವವಾಗಿ ಗಾಯಗೊಂಡು ಕಿಮ್ಸ್​ಗೆ ದಾಖಲಾಗಿದ್ದ ಮತ್ತೊಬ್ಬ ಅಯ್ಯಪ್ಪ ಮಾಲಾಧಾರಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟಿದ್ದಾರೆ. ಶಂಕರ ಬಸವರಾಜ ಉರವಿ( 29) ಮೃತ ಅಯ್ಯಪ್ಪ ಸ್ವಾಮಿ ಮಾಲಾಧಾರಿ ಆಗಿದ್ದು ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಿಗ್ಗೆ ಸಾವನ್ನಪ್ಪಿದ್ದಾರೆ.
ಮೃತರ ಸಂಖ್ಯೆ ಐದಕ್ಕೆ ಏರಿಕೆಯಾಗಿದ್ದು
ಡಿಸೆಂಬರ್​ 22ರಂದು ಸಾಯಿನಗರದ ಈಶ್ವರ ದೇವಸ್ಥಾನದಲ್ಲಿ ಸಿಲಿಂಡರ್ ಸ್ಫೋಟಗೊಂಡು 9 ಜನ ಅಯ್ಯಪ್ಪ ಮಾಲಾಧಿಕಾರಿಗಳು ಗಾಯಗೊಂಡಿದ್ದರು. 9 ಜನರನ್ನು ಕಿಮ್ಸ್​ಗೆ ದಾಖಲಾಖಲಿಸಲಾಗಿತ್ತು. ಈಗವರೆಗೆ ನಾಲ್ವರು ಮೃತಪಟ್ಟಿದ್ದು, ನಾಲ್ವರಿಗೆ ಜನರಿಗೆ ಚಿಕಿತ್ಸೆ ಮುಂದುವರೆದಿದೆ.
ಹುಬ್ಬಳ್ಳಿಯ ಉಣಕಲ್ ಸಮೀಪ ಇರುವ ಅಚ್ಚವ್ಚನ ಕಾಲೋನಿಯಲ್ಲಿ ಡಿಸೆಂಬರ್​ 22 ರಂದು ಬೆಳಗಿನ ಜಾವ ಸಿಲಿಂಡರ್ ಸ್ಪೋಟಗೊಂಡು 9 ಜನ ಮಾಲಾಧಾರಿಗಳು ಗಾಯಗೊಂಡಿದ್ದ ಗಾಯಾಳುಗಳಿಗೆ ವಿಶೇಷ ವಾರ್ಡ್‌ ಮಾಡಿ ತಜ್ಞ ವೈದ್ಯರ ತಂಡದಿಂದ ಚಿಕಿತ್ಸೆ ಕೊಡಿಸಲಾಗುತಿತ್ತು.
ಹುಬ್ಬಳ್ಳಿ ಹಾಗೂ ಬೆಂಗಳೂರಿನಿಂದ ತಜ್ಞ ವೈದ್ಯರು ಚಿಕಿತ್ಸೆ ನೀಡುತ್ತಿದ್ದು ಈಗಾಗಲೇ ನಾಲ್ವರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದರು. ಇಂದು ಬೆಳಗಿನ ಓರ್ವ ಅಯ್ಯಪ್ಪ ಮಾಲಧಾರಿ ಸಾವಿಗೀಡಾಗಿದ್ದು ಮೃತ ಮಾಲಾಧಾರಿ ಶಂಕರ ಬಸವರಾಜ ಉರವಿ ಕಿಮ್ಸ್ ಆಸ್ಪತ್ರೆಯಲ್ಲಿಯೇ ವಾರ್ಡ್ ಭಾಯ್ ಆಗಿ ಕೆಲಸ ಮಾಡುತಿದ್ದ. ಮೃತನ ಸಾಕಿದ ತಾಯಿಯ ಆಕ್ರಂದನ ಮುಗಿಲು ಮುಟ್ಟಿದೆ.

More News

You cannot copy content of this page