R ASHOK: ಆಸ್ಪತ್ರೆಗಳು ಸಾವಿನ ಕೇಂದ್ರಗಳಾಗಿವೆ : ಆರ್ ಅಶೋಕ್ ವಾಗ್ದಾಳಿ

ಬೆಂಗಳೂರು: ರಾಜ್ಯದಲ್ಲಿ ಆಸ್ಪತ್ರೆಗಳು ಬಾಣಂತಿಯರ ಸಾವಿನ ಕೇಂದ್ರಗಳಾಗಿವೆ. ಬಾಣಂತಿಯರ ಮರಣ ಮೃದಂಗ ನಿಂತಿಲ್ಲ ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ವಾಗ್ದಾಳಿ ನಡೆಸಿದರು.

ವಿಧಾನಸೌಧದಲ್ಲಿ ಗುರುವಾರ ಮಾತನಾಡಿದ ಅವರು, ಬಾಣಂತಿಯರ ಸಾವಿಗೆ ನೇರ ಕಾರಣ ಸರ್ಕಾರ.‌ ಇದು ಸವಾಲ್ಲ,
ಸರ್ಕಾರಿ ಪ್ರಾಯೋಜಿತ ಕೊಲೆ ಎಂದು ಕಿಡಿಕಾರಿದರು.

ಕಳಪೆ ಗುಣಮಟ್ಟದ ಔಷದಿ ಈ ಸಾವಿಗೆ ಕಾರಣ. 736 ಸಾವು ಇಲ್ಲಿ ತನಕ ಆಗಿದೆ. ಬಾಣಂತಿಯರಿಗೆ ಈ ಸರ್ಕಾರ ಬದುಕಿನ ಗ್ಯಾರಂಟಿ ಕೊಡಬೇಕು.‌ನಿಮ್ಮ ಪಂಚ ಗ್ಯಾರಂಟಿಗಿಂದ ಬದುಕುವ ಗ್ಯಾರಂಟಿ ‌ಬೇಕು. ಆರೋಗ್ಯ ಸಚಿವರು ರಾಜೀನಾಮೆ ಕೊಡಬೇಕು, ಪ್ರಕರಣ ನ್ಯಾಯಾಂಗ ತನಿಖೆಗೆ ಕೊಡಬೇಕು ಎಂದು ಆಗ್ರಹಿಸಿದರು.

ಬಾಣಂತಿಯರ ಸಾವು ಪ್ರಕರಣ ನ್ಯಾಯಾಂಗ ತನಿಖೆಗೆ ವಹಿಸಬೇಕಿತ್ತು. ಈ ಬಗ್ಗೆ ನಮಗೆ ಇನ್ನೂ ಯಾವುದೇ ಮಾಹಿತಿ ಕೊಟ್ಟಿಲ್ಲ ಸರ್ಕಾರ. ಬಾಣಂತಿಯರ ಡೆತ್ ಆಡಿಟ್ ರಿಪೊರ್ಟ್ ಸಹ ಸರ್ಕಾರ ಮಾಡಿಲ್ಲ. ಕಂಪೆನಿ ವಿರುದ್ಧ ಕ್ರಿಮಿನಲ್ ಕೇಸ್ ಹಾಕಿರುವ ಬಗ್ಗೆಯೂ ಸರ್ಕಾರ ಸ್ಪಷ್ಟತೆ ಕೊಟ್ಟಿಲ್ಲ. ಅಧಿವೇಶನದಲ್ಲಿ ಸರ್ಕಾರ ಭರವಸೆ ಕೊಟ್ಟ ನಂತರವೂ ಬಾಣಂತಿಯರ ಸಾವು ಮುಂದುವರೆದಿದೆ ಎಂದು ದೂರಿದರು.

ಡ್ರಗ್ ಕಂಪೆನಿ ವಿರುದ್ಧ ದೆಹಲಿಗೆ ಹೋಗಿ ದೂರು ಕೊಡೋದಾಗಿ ಹೇಳಿ ಇನ್ನೂ ಕೊಟ್ಟಿಲ್ಲ. ಅಧಿವೇಶನದಲ್ಲಿ ಉತ್ತರ ಕೊಡೋಕ್ಕಷ್ಟೇ ಸರ್ಕಾರ ಸೀಮಿತ ಆಗಿತ್ತು. ಅದು ಬಿಟ್ಟು ಸರ್ಕಾರ ಏನೂ ಮಾಡಿಲ್ಲ ಎಂದು ಕಿಡಿಕಾರಿದರು.

ನಿಮ್ಮ ಎರಡು ಸಾವಿರ ಬೇಡ ಮಿಸ್ಟರ್ ಸಿದ್ದರಾಮಯ್ಯ ಎಂದ ಅವರು, ಬಾಣಂತಿಯರ ಸಾವು ನಿಲ್ಲಿಸಲು ಔಷದಿ ವಿತರಣೆ ಮಾಡೋದು ಸರ್ಕಾರ ಅಲ್ಲ, ಬದಲಾಗಿ ಮೆಡಿಕಲ್ ಮಾಫಿಯಾ ಎಂದು ಆರ್ ಅಶೋಕ್ ಕಿಡಿಕಾರಿದರು.

More News

You cannot copy content of this page