ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನಗಳ ಸಂಸ್ಥೆ (ನಿಮ್ಹಾನ್ಸ್) 2025ರ ಜನವರಿ 3ರಂದು ತನ್ನ ಸುವರ್ಣ ಮಹೋತ್ಸವವನ್ನು ಸಮಾವೇಶ ಸಭಾಂಗಣದಲ್ಲಿ ಆಚರಿಸಿಕೊಳ್ಳಲು ಸಕಲ ರೀತಿಯಲ್ಲಿ ಸಜ್ಜು
ನಿಮ್ಹಾನ್ಸ್ ಐದು ದಶಕಗಳ ಗಮನಾರ್ಹ ಸೇವೆಯನ್ನು ಸ್ಮರಿಸುತ್ತಿರುವುದರಿಂದ, ಇದು ಸಂಸ್ಥೆಯ ಬದ್ಧತೆ, ನಾವೀನ್ಯತೆ ಮತ್ತು ಶ್ರೇಷ್ಠತೆಯ ದೃಢವಾದ ಅನ್ವೇಷಣೆಯಿಂದ ಕೂಡಿರುವ ಅದರ ಪಯಣವನ್ನು ಪ್ರತಿಬಿಂಬಿಸುತ್ತದೆ.
ಭಾರತದ ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮು ಅವರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಲಿದ್ದಾರೆ. ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ, ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಹಾಗೂ ಬಿಜೆಪಿ ಅಧ್ಯಕ್ಷರಾದ ಜಗತ್ ಪ್ರಕಾಶ್ ನಡ್ಡಾ, ನಿಮ್ಹಾನ್ಸ್; ಕರ್ನಾಟಕ ಸರ್ಕಾರದ ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಸಚಿವ ಹಾಗೂ ನಿಮ್ಹಾನ್ಸ್ ನ ಉಪಾಧ್ಯಕ್ಷರಾದ ಡಾ.ಶರಣ್ ಪ್ರಕಾಶ್ ಪಾಟೀಲ್ ಮತ್ತು ಲೋಕಸಭಾ ಸದಸ್ಯರಾದ ಪಿ.ಸಿ.ಮೋಹನ್,ತೇಜಸ್ವಿ ಸೂರ್ಯ, ಡಾ.ಸಿ.ಎನ್. ಮಂಜುನಾಥ್ ಮತ್ತು ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಘನ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿದೆ.
ಸುವರ್ಣ ಮಹೋತ್ಸವ ಆಚರಣೆಯ ಭಾಗವಾಗಿ ಇದೇ ವೇಳೆ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನದಲ್ಲಿ ಅತ್ಯಾಧುನಿಕ ಆರೈಕೆಯನ್ನು ನೀಡುವ ನಿಮ್ಹಾನ್ಸ್‌ನ ಉದ್ದೇಶಕ್ಕಾಗಿ ವಿವಿಧ ಹೊಸ ಸೌಲಭ್ಯಗಳನ್ನು ಉದ್ಘಾಟಿಸಲಾಗುವುದು.
ವಿಶೇಷ ಮನೋಶಾಸ್ತ್ರ ಬ್ಲಾಕ್
ಮನೋವೈದ್ಯಕೀಯ ಸ್ಪೆಷಾಲಿಟಿ ಬ್ಲಾಕ್ ಮಾನಸಿಕ ಆರೋಗ್ಯದ ಹಲವಾರು ವಿಶೇಷ ಕ್ಷೇತ್ರಗಳಲ್ಲಿ ಆರೈಕೆ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿಗೆ ಹೆಚ್ಚಿನ ನೆರವು ನೀಡುತ್ತದೆ. ಇದರಲ್ಲಿ, ಜೆರಿಯಾಟ್ರಿಕ್ ಸೈಕಿಯಾಟ್ರಿ ಮತ್ತು ಪೆರಿನಾಟಲ್ ಸೈಕಿಯಾಟ್ರಿಯಿಂದ ತೀವ್ರ ಮಾನಸಿಕ ಅಸ್ವಸ್ಥತೆ ಹೊಂದಿರುವ ವ್ಯಕ್ತಿಗಳಿಗೆ ಚಿಕಿತ್ಸೆ ಮತ್ತು ಆತ್ಮಹತ್ಯೆ ತಡೆ ಸೌಲಭ್ಯಗಳನ್ನು ಹೊಂದಿವೆ. ಈ ಕೇಂದ್ರವನ್ನು ಸೂಕ್ತವಾದ, ಬಹುಶಿಸ್ತೀಯ ಮತ್ತು ಸಮಗ್ರ ಆರೈಕೆಯನ್ನು ಒದಗಿಸಲು ಅನುವಾಗುವಂತೆ ವಿನ್ಯಾಸಗೊಳಿಸಲಾಗಿದ್ದು, ರೋಗಿಗಳ ಶೀಘ್ರ ಚೇತರಿಕೆ ಮತ್ತು ಪುನರ್ವಸತಿಯನ್ನು ಬೆಂಬಲಿಸುತ್ತದೆ ಮತ್ತು ಮಾನಸಿಕ ಆರೋಗ್ಯದ ಈ ಪ್ರಮುಖ ವಿಶೇಷ ಮತ್ತು ಉದಯೋನ್ಮುಖ ಕ್ಷೇತ್ರಗಳಲ್ಲಿ ಭಾರತದಾದ್ಯಂತ ವೃತ್ತಿಪರರ ಸಾಮರ್ಥ್ಯವೃದ್ಧಿಗೆ ನೆರವಾಗುತ್ತದೆ.
ಕೇಂದ್ರೀಯ ಪ್ರಯೋಗಾಲಯ ಸಂಕೀರ್ಣ:
ಕೇಂದ್ರೀಯ ಪ್ರಯೋಗಾಲಯ ಸಂಕೀರ್ಣವು ಒಂದೇ ಸೂರಿನಡಿ ಐದು ಅಗತ್ಯ ಪ್ರಯೋಗಾಲಯ ಸೇವೆಗಳನ್ನು ಒದಗಿಸುತ್ತದೆ
ಅವುಗಳೆಂದರೆ
ನ್ಯೂರೋಪಾಥಾಲಜಿ, ನ್ಯೂರೋಕೆಮಿಸ್ಟ್ರಿ,ಕ್ಲಿನಿಕಲ್ ಪಥಾಲಜಿ ಮತ್ತು ಹೆಮಟಾಲಜಿ, ನ್ಯೂರೋಮೈಕ್ರೊಬಯಾಲಜಿ ಮತ್ತು ನ್ಯೂರೋವೈರಾಲಜಿ.
ಈ ಸಮಗ್ರ ಸೌಲಭ್ಯವು ದೇಶದಾದ್ಯಂತ ಸಂಕೀರ್ಣ ನರವೈಜ್ಞಾನಿಕ ಮತ್ತು ನರಶಸ್ತ್ರಚಿಕಿತ್ಸೆಯ ಪರಿಸ್ಥಿತಿ ಎದುರಿಸುತ್ತಿರುವ ರೋಗಿಗಳಿಗೆ ಉತ್ತಮ-ಗುಣಮಟ್ಟದ, ನಿಖರವಾದ ಆರೈಕೆಯನ್ನು ಖಾತ್ರಿಪಡಿಸುವಲ್ಲಿ ಪ್ರಮುಖ ಹೆಜ್ಜೆಯಾಗಿದ್ದು, ಇದು ರೋಗಪತ್ತೆಯಲ್ಲಿ ಉತ್ಕೃಷ್ಟತೆ ಸಾಧಿಸಲು ದಾರಿ ಮಾಡಿಕೊಡುತ್ತದೆ ಮತ್ತು ಜಾಗತಿಕವಾಗಿ ಇಂತಹ ಅಸ್ವಸ್ಥತೆಗಳಿಗೆ ಚಿಕಿತ್ಸೆಗಳಲ್ಲಿ ಕ್ರಾಂತಿಯನ್ನುಂಟುಮಾಡುವ ಸಂಶೋಧನೆಗಳನ್ನು ಉತ್ತೇಜಿಸುತ್ತದೆ.
ಭೀಮಾ ಹಾಸ್ಟೆಲ್:
ನಿಮ್ಹಾನ್ಸ್‌ನಲ್ಲಿ ಹೆಚ್ಚುತ್ತಿರುವ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಅವರಿಗೆ ಅನುಕೂಲಕರ ಜೀವನ ವಾತಾವರಣ ಸೃಷ್ಟಿಸುವ ರೀತಿಯಲ್ಲಿ ಭೀಮಾ ವಿದ್ಯಾರ್ಥಿ ನಿಲಯವನ್ನು ವಿನ್ಯಾಸಗೊಳಿಸಲಾಗಿದೆ.
ಈ ಸೌಕರ್ಯದಲ್ಲಿ ತಳಮಹಡಿ,ನೆಲ ಮಹಡಿ ಮತ್ತು ಆರು ಮೇಲಿನ ಮಹಡಿಗಳಿದ್ದು,ಎಲ್ಲವೂ ಆಧುನಿಕ ಸೌಕರ್ಯಗಳನ್ನು ಒಳಗೊಂಡಿವೆ.
ರಾಷ್ಟ್ರಪತಿಗಳು
ಅತ್ಯಾಧುನಿಕ ರೋಗಪತ್ತೆ ಸೌಲಭ್ಯಗಳಾದ – ಸುಧಾರಿತ 3ಟಿ ಎಂ ಆರ್ ಐ ಸ್ಕ್ಯಾನರ್ ಮತ್ತು ಡಿಎಸ್ಎ ವ್ಯವಸ್ಥೆಯನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ.
ಮುಂದಿನ ತಲೆಮಾರಿನ 3ಟಿ ಎಂ ಆರ್ ಐ ಸ್ಕ್ಯಾನರ್:
ಹೊಸ 3ಟಿ ಮ್ಯಾಗ್ನೆಟಿಕ್ ರೆಸೋನೆನ್ಸ್ ಇಮೇಜಿಂಗ್ (ಎಂಆರ್ ಐ)ಸ್ಕ್ಯಾನರ್ ಇಮೇಜಿಂಗ್ ತಂತ್ರಜ್ಞಾನ ನಿಮ್ಹಾನ್ಸ್ ನ ತಾಂತ್ರಿಕ ಉತ್ತುಂಗವನ್ನು ಪ್ರತಿನಿಧಿಸುತ್ತದೆ. ಈ ವ್ಯವಸ್ಥೆಯು ಭಾರತದಲ್ಲಿ ಕ್ಲಿನಿಕಲ್ ಬಳಕೆಗೆ ಲಭ್ಯವಿರುವ ಅತ್ಯಾಧುನಿಕ ತಂತ್ರಜ್ಞಾನವಾಗಿದೆ.
ಸುಧಾರಿತ ಗ್ರೇಡಿಯಂಟ್ ಸಿಸ್ಟಮ್,ಹೆಚ್ಚಿನ ಸ್ಲಿವ್ ರೇಟ್ಸ್ ಮತ್ತು ಕೃತಕ ಬುದ್ಧಿಮತ್ತೆ (AI) ಆಧಾರಿತ ಪುನರ್ ನಿರ್ಮಾಣ ವೇದಿಕೆಯಂತಹ ಸುಧಾರಿತ ತಂತ್ರಜ್ಞಾನಗಳನ್ನು ಒಳಗೊಂಡಿರುವ ಈ ಯಂತ್ರವು ಉತ್ತಮ ಇಮೇಜಿಂಗ್ ಗುಣಮಟ್ಟವನ್ನು ಉಳಿಸಿಕೊಂಡು ವೇಗವಾಗಿ ಸ್ಕ್ಯಾನ್ ಫಲಿತಾಂಶವನ್ನು ಖಾತ್ರಿಪಡಿಸುತ್ತದೆ.
ಅತ್ಯಾಧುನಿಕ ಡಿ ಎಸ್ ಎ ವ್ಯವಸ್ಥೆ
ಹೊಸದಾಗಿ ಅಳವಡಿಸಲಾದ ಬೈಪ್ಲೇನ್ ಡಿಜಿಟಲ್ ಸಬ್‌ಟ್ರಾಕ್ಷನ್ ಆಂಜಿಯೋಗ್ರಫಿ (ಡಿಎಸ್‌ಎ) ವ್ಯವಸ್ಥೆಯು ಮೆದುಳಿನ ಅಸ್ವಸ್ಥತೆಗಳ ತೀವ್ರತೆಯನ್ನು ಪತ್ತೆಹಚ್ಚಲು ಮತ್ತು ನಿರ್ವಹಿಸಲು ಅಮೂಲ್ಯ ಸಾಧನವಾಗಿದೆ.
ಮೆದುಳಿಗೆ ಪೋಷಕಾಂಶಗಳನ್ನು ಪೂರೈಸುವ ರಕ್ತನಾಳಗಳ ಬಗ್ಗೆ ವಿವರವಾದ ಒಳನೋಟ ನೀಡುವ ಸಾಮರ್ಥ್ಯದ ಇದು,
ಕ್ಲಿನಿಕ್‌ಗಳು ಸಂಕೀರ್ಣ ನರವೈಜ್ಞಾನಿಕ ಪರಿಸ್ಥಿತಿಗಳನ್ನು ನಿಖರತೆಯೊಂದಿಗೆ ಪರಿಹರಿಸಲು ಸಹಾಯ ಮಾಡುತ್ತದೆ. ಕೋನ್ ಬೀಮ್ ಸಿಟಿ ಮತ್ತು 3ಡಿ ರೊಟೇಶನಲ್ ಆಂಜಿಯೋಗ್ರಫಿ ಸೇರಿ ಇತ್ತೀಚಿನ ಸುಧಾರಿತ ತಂತ್ರಜ್ಞಾನಗಳ ಅಳವಡಿಸಿಕೆಯಿಂದ ಸಜ್ಜಾಗಿರುವ ಇದು ಅಸಾಧಾರಣ ದೃಶ್ಯಗಳನ್ನು ಒದಗಿಸುತ್ತದೆ.
ಜತೆಗೆ ಪರಿಣಾಮಕಾರಿ ರೋಗಪತ್ತೆ ಮತ್ತು ಚಿಕಿತ್ಸೆಯ ಯೋಜನೆಗೆ ನಿರ್ಣಾಯಕವಾಗಿದೆ.