K Sudhakar On BY Vijayendra: ವಿಜಯೇಂದ್ರ ವಿರುದ್ಧ‌ ಸಂಸದ ಡಾ.ಕೆ.ಸುಧಾಕರ್ ಸ್ಪೋಟಕ ದಾಳಿ

ಬೆಂಗಳೂರು : ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧ ಪಕ್ಷದ ಅಸಮಾಧಾನ ಗರಿಗೆದರಿದೆ. ಚಿಕ್ಕಬಳ್ಳಾಪುರದ ಸಂಸದ ಮತ್ತು ಮಾಜಿ ಸಚಿವ ಡಾ. ಕೆ. ಸುಧಾಕರ್,ಬಿ.ವೈ ವಿಜಯೇಂದ್ರ ಅವರನ್ನು ಟೀಕಿಸಿದ್ದು, “ನಾನು ಪಕ್ಷ ಬಿಡುವ ವಿಚಾರದಲ್ಲಿ ಗೊಂದಲದಲ್ಲಿದ್ದೇನೆ, ರಾಷ್ಟ್ರೀಯ ನಾಯಕರ ಜೊತೆ ಚರ್ಚೆ ಮಾಡಿದ ನಂತರ ತೀರ್ಮಾನ ಮಾಡುತ್ತೇನೆ” ಎಂದಿದ್ದಾರೆ.

“ರಾಜಕೀಯದಲ್ಲಿ ಏನಾಬೇಕಾದರೂ‌ ನಡೆಯಬಹುದು:

“ನಾನು ರಾಷ್ಟ್ರೀಯ ನಾಯಕರ ಜೊತೆಗೆ ಮಾತಾಡಬೇಕು, ಪಕ್ಷ ಬಿಡೋ ವಿಚಾರವನ್ನು ಈಗಲೇ ನಿರ್ಧರಿಸಲು ಸಾಧ್ಯವಿಲ್ಲ.ರಾಜಕೀಯದಲ್ಲಿ ಯಾವಾಗ ಏನಾಗುತ್ತದೋ ಗೊತ್ತಿಲ್ಲ, ಏನಾದರೂ ಸಂಭವಿಸಬಹುದು!”, ಎಂದರು.

ಅನುಭವದ ಕೊರತೆ, MLA ಗಳ ಬೆಂಬಲ 100% ನಮಗೆ :

“ವಿಜಯೇಂದ್ರ ಅವರು ಸಣ್ಣ ವಯಸ್ಸಿನಲ್ಲಿ ರಾಜ್ಯಾಧ್ಯಕ್ಷರಾಗಿದ್ದಾರೆ, ಒಂದು ವರ್ಷದಲ್ಲಿ ಅನುಭವ ಪಡೆಯುತ್ತಾರೆ ಎಂದೆನಿಸಿತ್ತು,ಆದರೆ ಬದಲಾವಣೆ ಕಂಡು ಬಂದಿಲ್ಲ.ಪಕ್ಷದಲ್ಲಿ ಪ್ರಜಾಪ್ರಭುತ್ವವಿಲ್ಲ, ನೇಮಕಾತಿಗಳನ್ನು ಏಕಚಕ್ರಾಧಿಪತ್ಯದಂತೆ ಮಾಡಲಾಗಿದೆ!,100% ಶಾಸಕರು ನಮ್ಮ ಬೆಂಬಲದಲ್ಲಿದ್ದಾರೆ,ಆದರೂ ನಾಯಕತ್ವ ತೀರ್ಮಾನಗಳು ಆಂತರಿಕ ಪ್ರಜಾಪ್ರಭುತ್ವ ದೊಂದಿಗೆ ನಡೆಯುತ್ತಿಲ್ಲ.”

ಯಡಿಯೂರಪ್ಪಗಿಂತ ವಿಜಯೇಂದ್ರ ದೊಡ್ಡವರು.?

“ಬಿಜೆಪಿ ಅಧಿಕಾರಕ್ಕೆ ಬಂದರೆ ಒಳ್ಳೆಯದು,ಆದರೆ ಪಕ್ಷದೊಳಗಿನ ಪ್ರಜಾಪ್ರಭುತ್ವ ಹೇಗಿದೆ?”ಈ ಎಲ್ಲ ವಿಚಾರವನ್ನು ಯಡಿಯೂರಪ್ಪ ಅವರ ಗಮನಕ್ಕೆ ತಂದಿಲ್ಲ! ಬ್ಲಡ್ ಈಸ್ ಥಿಕ್! ಅವರ ಮಗನನ್ನು ಪೂರ್ತಿಯಾಗಿ ರಕ್ಷಣೆ ನೀಡಲಾಗುತ್ತಿದೆ!ಇವರು ಯಡಿಯೂರಪ್ಪನ ವರಿಗಿಂತಲೂ ಮೇಲಾ?”, ಎಂದು ಸುಧಾಕರ್ ಪ್ರಶ್ನಿಸಿದರು.

ಹೈಕಮಾಂಡ್ ಭೇಟಿಯ ನಂತರ ಅಂತಿಮ ನಿರ್ಧಾರ:

“ನಾನು ದೆಹಲಿಗೆ ಹೋಗಿ ಅಮಿತ್ ಶಾ,ಜೆ.ಪಿ.ನಡ್ಡಾ ಸೇರಿದಂತೆ ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡುತ್ತೇನೆ.”ಪಕ್ಷದಲ್ಲಿ ನಡೆಯುತ್ತಿರುವ ಅಸಮಾಧಾನ, ನಾಯಕತ್ವದ ಸಮಸ್ಯೆಗಳನ್ನು ಮುಂಚೂಣಿಗೆ ತರುತ್ತೇನೆ.”
ಈ ನಿರ್ಧಾರ ನಂತರ, ನನ್ನ ಭವಿಷ್ಯದ ಬಗ್ಗೆ ಸ್ಪಷ್ಟವಾಗಿ ಹೇಳಬಹುದು.”

ಇನ್ನು ಸುಮ್ಮನೆ ಇರಲ್ಲ…!:

ಇಷ್ಟು ದಿನ ಸಹಿಸಿಕೊಂಡೆ, ಆದರೆ ಇನ್ನು ಮುಂದೆ ಯುದ್ಧ!,ವಿಜಯೇಂದ್ರ ಅವರ ಧೋರಣೆಗೆ ನನ್ನ ತೀವ್ರ ವಿರೋಧ! ಇದೇ,ಇವರ ಅಹಂಕಾರಕ್ಕೆ ಕಡಿವಾಣ ಹಾಕಬೇಕು, ಇಲ್ಲವಾದರೆ ಅವರನ್ನು ಬದಲಾಯಿಸಬೇಕು! ಎಂದರು.

More News

You cannot copy content of this page