ಇಡಿ ವಿಚಾರಣೆ ಭೀತಿ : ಕಂದಾಯ ಸಚಿವ ಆರ್.ಅಶೋಕ್ ಭೇಟಿ ಮಾಡಿ ಚೆರ್ಚಿಸಿದ ಶಾಸಕ ಬಿ.ಜೆಡ್.ಜಮೀರ್ ಅಹಮದ್

ಬೆಂಗಳೂರು : ಐಎಂಎ ಪ್ರಕರಣದಲ್ಲಿ ದಾಳಿಗೊಳಗಾಗಿ ಸಂಕಷ್ಟಕ್ಕೆ ಸಿಲುಕಿರುವ ಮಾಜಿ ಸಚಿವ ಜಮೀರ್ ಅಹ್ಮದ್ ಇಂದು ಕಂದಾಯ ಸಚಿವ ಆರ್.ಅಶೋಕ್ ಭೇಟಿ ಮಾಡಿ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದ್ದಾರೆ.

ಪದ್ಮನಾಭನಗರದಲ್ಲಿರುವ ಸಚಿವ ಆರ್.ಅಶೋಕ್ ಕಚೇರಿಯಲ್ಲಿ ಅವರನ್ನು ಭೇಟಿ ಮಾಡಿದ ಜಮೀರ್ ಅಹ್ಮದ್ ಇಡಿ ಪ್ರಕರಣದಿಂದ ಹೊರಬರಲು ಸಹಕಾರ ಕೇಳಿದ್ದಾರೆ ಎನ್ನಲಾಗಿದೆ.ಆರ್.ಅಶೋಕ್ ಮೂಲಕ ಬಿಜೆಪಿ ವರಿಷ್ಠರ ಮೇಲೆ ಒತ್ತಡ? ತಂದು ಇಡಿ ವಿಚಾರಣೆ ಯಿಂದ  ಪಾರಾಗುವ ಬಗ್ಗೆ ಚರ್ಚೆ ನಡೆಸಲಾಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.

ಐಎಂಎ ಪ್ರಕರಣದಲ್ಲಿ ಇಡಿ ದಾಳಿಗೆ ಒಳಗಾಗಿ ಆಸ್ತಿ ಜಪ್ತಿಗೊಳಗಾಗಿರು ವ ಮತ್ತೋರ್ವ ಆರೋಪಿ ರೋಷನ್ ಬೇಗ್ ಕೂಡ ಇತ್ತೀಚಗೆ ಸಚಿವ ಆರ್.ಅಶೋಕ್ ವಿಧಾನ ಸೌಧದಲ್ಲಿ ಭೇಟಿ ಮಾಡಿ ಚೆರ್ಚೆ ನಡೆಸಿದ್ದರು. ಈಗ ಜಮೀರ್ ಅಹಮದ್ ಭೇಟಿ ಮಾಡಿ ಚರ್ಚಿಸಿರುವುದು ನಾನಾ ಅನು ಮಾನಗಳನ್ನು ಹುಟ್ಟು ಹಾಕಿದೆ.ಆರ್.ಅಶೋಕ್ ಸಹಕಾರ ಪಡೆದು ದಾಖಲೆಗಳನ್ನು ಸರಿಪಡಿಸಿ ಕೊಳ್ಳುವುದು ಅಥವಾ ಇಡಿ ತನಿಖೆಯಿಂದ ತಪ್ಪಿಸಿಕೊಳ್ಳುವ ದಾರಿ ಹುಡುಕಾಟದಲ್ಲಿ ಸರ್ಕಾರದ ಕಂದಾಯ ಸಚಿವರ ಸಹಕಾರವನ್ನು ಪಡೆಯುವ ಪ್ರಯತ್ನ ನಡೆಸಿದ್ದಾರೆಂಬ ಮಾತುಗಳು ಕೇಳಿ ಬಂದಿದೆ.

ಐಎಂಎ ಪ್ರಕರಣದ ಪ್ರಮುಖ ಆರೋಪಿ ಮನ್ಸೂರ್ ಖಾನ್ ಗೆ ರಿಚ್ಮಂಡ್ ಟೌನ್ ಬಳಿಯ ಆಸ್ತಿ ಯನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಿದ್ದರು.ಈ ಸಂಬಂಧ ಆಗಸ್ಟ್ 5ರಂದು ಜಮೀರ್ ನಿವಾಸ,ಕಚೇರಿಗಳ ಮೇಲೆ ಇಡಿ ದಾಳಿ ನಡೆಸಿ ಕಡತಗಳು,ದಾಖಲೆಗಳು ಆಸ್ತಿಯನ್ನು ಜಾಲಾಡಿತು.


ಜಮೀರ್ ಅಹ್ಮದ್ ರಿಚ್ಮಂಡ್ ಟೌನ್ ನಲ್ಲಿರುವ 14,924 ಚದರಡಿ ನಿವೇಶ ನವನ್ನು 9.38 ಕೋಟಿಗೆ ಐಎಂಎ ಮಾಲೀಕ ಮನ್ಸೂರ್ ಖಾನ್ ಗೆ ಮಾರಾಟ ಮಾಡಿದ್ದರು.ಜೊತೆಗೆ 80 ಕೋಟಿ ಹಣವನ್ನ ಹವಾಲ ಹಣ ಪಡೆದಿದ್ದಾರೆ ಎಂಬ ಆರೋಪ ಜಮೀರ್ ಮೇಲಿತ್ತು‌.2014 ರಲ್ಲಿ ಆಸ್ತಿಯ ವಿಚಾರವಾಗಿ ವ್ಯಾಜ್ಯ ಕೋರ್ಟ್ ನಲ್ಲಿತ್ತು.ಆದರೂ ಕೂಡ ಜಮೀರ್ ಅಹ್ಮದ್​ ಆಸ್ತಿ ಪರಭಾರೆ ಮಾಡಿದ್ದರು.2018ರಲ್ಲಿ ಚುನಾವಣ ಪ್ರಮಾಣ ಪತ್ರದಲ್ಲಿ ತಪ್ಪು ಮಾಹಿತಿ ನೀಡಿದ್ದರು.ಚೆಲುವರಾಯ ಸ್ವಾಮಿ ಬಳಿ 40 ಲಕ್ಷ ಹಣ ಸಾಲ ಪಡೆದಿದ್ದಾಗ ತಪ್ಪು ಮಾಹಿತಿ ನೀಡಿದ್ದು ತನಿಖೆ ವೇಳೆ ಬೆಳಕಿದೆ ಬಂದಿದ್ದನ್ನು ನಾವಿಲ್ಲಿ ಸ್ಮರಿಸಬಹುದು.


More News

You cannot copy content of this page