Chaina App Ban: ಮೂರನೇ ಬಾರಿ ಚೀನಾದ ೫೪ ಆಪ್‌ಗಳನ್ನು ಬ್ಯಾನ್ ಮಾಡಿದ ಕೇಂದ್ರ ಸರ್ಕಾರ!?

ನವದೆಹಲಿ: ಭಾರತದ ಭದ್ರತೆಗೆ ಅಪಾಯವನ್ನು ಉಂಟು ಮಾಡುವ ೫೪ ಚೀನಿ ಅಪ್ಲಿಕೇಶನ್‌ಗಳನ್ನು ಭಾರತ ಸರ್ಕಾರ ನಿಷೇಧಿಸಲು ಹೊಸ ಆದೇಶ ಹೊರಡಿಸಿದೆ.
ಈ ಹಿಂದೆ ೨ ಬಾರಿ ಚೀನಾ ಆಪ್‌ಗಳನ್ನು ನಿಷೇಧಿಸಿದ್ದ ಕೇಂದ್ರ ಸರ್ಕಾರ ಇದೀಗ ಮೂರನೇ ಬಾರಿಗೆ ಚೀನಾ ಮೂಲದ ೫೪ ಆಪ್‌ಗಳನ್ನು ನಿಷೇಧಿಸಿದೆ ಎಂದು ತಿಳಿದುಬಂದಿದೆ. ಮೂಲಗಳ ಪ್ರಕಾರ ಈ ೫೪ ಚೈನೀಸ್ ಅಪ್ಲಿಕೇಶನ್‌ಗಳಲ್ಲಿ ಬ್ಯೂಟಿ ಕ್ಯಾಮೆರಾ ಸೇರಿವೆ ಎನ್ನಲಾಗಿದೆ.
ಜೊತೆಗೆ ಸ್ವೀಟ್ ಸೆಲ್ಫಿ ಎಚ್‌ಡಿ, ಬ್ಯೂಟಿ ಕ್ಯಾಮೆರಾ – ಸೆಲ್ಫಿ ಕ್ಯಾಮೆರಾ, ಈಕ್ವಲೈಜರ್ ಮತ್ತು ಬಾಸ್ ಬೂಸ್ಟರ್, ಕ್ಯಾಮ್ ಕಾರ್ಡ್ ಫಾರ್ ಸೇಲ್ಸ್ ಫೋರ್ಸ್ ಎಂಟ್, ಐಸೋಲ್ಯಾಂಡ್ ೨, ಆಶಸ್ ಆಫ್ ಟೈಮ್ ಲೈಟ್, ವಿವಾ ವಿಡಿಯೋ ಎಡಿಟರ್, ಟೆನ್ಸೆಂಟ್ ಕ್ರೈವರ್, ಒನ್ಮಿಯೊಜಿ ಅರೆನಾ, ಆಪ್‌ಮಿಯೊ ಚೆಸ್, ಡ್ಯುಯಲ್ ಸ್ಪೇಸ್ ಲೈಟ್ ಸೇರಿದಂತೆ ಒಟ್ಟು ೫೪ ಆಪ್‌ಗಳನ್ನು ನಿಷೇಧದ ಪಟ್ಟಿಗೆ ಸೇರಿಸಲಾಗಿದೆ.
ಕಳೆದ ವರ್ಷ ಜೂನ್‌ನಲ್ಲಿ ದೇಶದ ಸಾರ್ವಭೌಮತೆ ಮತ್ತು ಭದ್ರತೆಗೆ ಅಪಾಯವನ್ನು ಉಂಟು ಮಾಡುವ ಹಾಗೂ ವ್ಯಾಪಕವಾಗಿ ಬಳಸಲಾಗುವ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಗಳಾದ ಟಿಕ್ ಟಾಕ್, ವಿ ಚಾಟ್ ಮತ್ತು ಹೆಲೊ ೫೯ ಚೀನಿ ಮೊಬೈಲ್ ಅಪ್ಲಿಕೇಶನ್‌ಗಳನ್ನು ಭಾರತ ಸರ್ಕಾರ ನಿಷೇದಿತ್ತು.

ಕಳೆದ ವರ್ಷ ಜೂನ್ ೨೯ರ ಆದೇಶದಲ್ಲಿ ನಿಷೇಧಿಸಲಾದ ಹೆಚ್ಚಿನ ಅಪ್ಲಿಕೇಶನ್‌ಗಳು ಬಳಕೆದಾರರ ಡೇಟಾವನ್ನು ಸಂಗ್ರಹಿಸುತ್ತಿವೆ ಮತ್ತು ಆ ಮಾಹಿತಿಗಳನ್ನು ಹೊರಗೆ ಕಳುಹಿಸುತ್ತಿವೆ ಎಂಬ ಗುಪ್ತಚರ ಏಜೆನ್ಸಿಗಳ ಸೂಚನೆ ಮೇರೆಗೆ ನಿಷೇಧಿಸಲಾಗಿತ್ತು.

ಚೀನಾದೊಂದಿಗಿನ ಗಡಿ ಉದ್ವಿಗ್ನತೆಯ ನಡುವೆ ಪೂರ್ವ ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ನಡೆದ ಹಿಂಸಾತ್ಮಕ ಘರ್ಷಣೆಯ ಸಂದರ್ಭದಲ್ಲಿ ೨೦ ಭಾರತೀಯ ಸೈನಿಕರು ಮತ್ತು ಅನಿರ್ದಿಷ್ಟ ಸಂಖ್ಯೆಯ ಚೀನಾ ಸೈನಿಕರು ಸಾವನ್ನಪ್ಪಿದ ನಂತರ ಈ ಕ್ರಮ ಕೈಗೊಳ್ಳಲಾಗಿತ್ತು.

More News