ತಾಲಿಬಾನ್ ಗಂಡಾಂತರ : ಕಾಬೂಲ್ ಏರ್ ಪೋರ್ಟ್ ಬಂದ್..

ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್ ವಿಮಾನ ನಿಲ್ದಾಣಕ್ಕೆ ಮತ್ತೆ ದಾಳಿ ಭೀತಿ ಎದುರಾಗಿದೆ.  ಕಾಬೂಲ್ ವಿಮಾನ ನಿಲ್ದಾಣದ ಪ್ರವೇಶಕ್ಕೆ ತಾಲಿಬಾನ್ ನಿರ್ಬಂಧ ಹೇರಿದೆ. ಅಪ್ಘಾನಿಸ್ತಾನದಿಂದ ನ್ಯಾಟೋ ಪಡೆಯ ಅಂತಿಮ ಹಂತದ ಜನರನ್ನು ಸ್ಥಳಾಂತರಿಸುವ ವಿಮಾನ ತೆರಳುತ್ತಿದ್ದಂತೆ ತಾಲಿಬಾನಿಗಳು ಏರ್ ಪೋರ್ಟ್ ಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್ ಗಳನ್ನ ಹಾಕುವ ಮೂಲಕ ನಿರ್ಬಂಧ ಹೇರಿದೆ. ಆಫ್ಘನ್ ನ ವಿಮಾನ ನಿಲ್ದಾಣಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಚೆಕ್ ಪಾಯಿಂಟ್ ಗಳನ್ನು ಹಾಕಲಾಗಿದೆ.

ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಅಟ್ಟಹಾಸ ಮೆರೆ ಮೀರಿದ್ದು, ಅಲ್ಲಿನ ಪ್ರಜೆಗಳು ಪ್ರಾಣವನ್ನು ಕೈಯಲ್ಲಿಡಿದು ದಿನ ದೂಡುವಂತಾಗಿದೆ. ಆಫ್ಘನ್ ತೊರೆಯಲು ಭಾರಿ ಸಂಖ್ಯೆಯಲ್ಲಿ ಜನ ಮುಂದಾಗುತ್ತಿದ್ದು, ಇದನ್ನು ತಡೆಯುವ ನಿಟ್ಟಿನಲ್ಲಿ ಸದ್ಯ ತಾಲಿಬಾನ್ ಉಗ್ರರು ಏರ್ ಪೋರ್ಟ್ ಗೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಬಂದ್ ಮಾಡಿದ್ದಾರೆ.

ಈ ಮಧ್ಯೆ, ಆಗಸ್ಟ್ 31ರೊಳಗೆ ಅಫ್ಘಾನಿಸ್ತಾನದಿಂದ ಸ್ಥಳಾಂತರ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ತಾಲಿಬಾನಿಗಳು ಅಮೆರಿಕ ಹಾಗೂ ಬ್ರಿಟನ್ ಗೆ ಅಂತಿಮ ಗಡುವು ನೀಡಿದ್ದಾರೆ. ತಾಲಿಬಾನ್ ಉಗ್ರರ ವಿರುದ್ಧ ಮಂಡಿಯೂರಿರುವ ಅಮೆರಿಕ ಹಾಗೂ ಬ್ರಿಟನ್ ತನ್ನ ಸೇನಾಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳುತ್ತಿವೆ.

More News