Minister Eshwarappa: ಕೇಸರಿ ಬಾವುಟ ವಿವಾದ : ಸಚಿವ ಕೆ ಎಸ್ ಈಶ್ವರಪ್ಪ ಮನೆಗೆ ಮುತ್ತಿಗೆಗೆ ಯತ್ನ

ಬೆಂಗಳೂರು: ಕೆಪಿಸಿಸಿ ಬೆಂಗಳೂರು ಪ್ರಚಾರ ಸಮಿತಿ ಉಸ್ತುವಾರಿ ವಿ. ಮನೋಹರ್ ನೇತೃತ್ವದಲ್ಲಿ ಪ್ರತಿಭಟನಾಕಾರರು ಸಚಿವ ಕೆ ಎಸ್ ಈಶ್ವರಪ್ಪ ಹೇಳಿಕೆ ಖಂಡಿಸಿ, ಮನೆಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದ್ದು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಶೇಷಾದ್ರಿಪುರಂನ ಸಚಿವ ಕೆ ಎಸ್ ಈಶ್ವರಪ್ಪ ಮನೆಯ ಬಳಿ ಒಂದು ಕೆ ಎಸ್ ಆರ್ ಪಿ ತುಕಡಿ ನಿಯೋಜನೆ ಮಾಡಲಾಗಿದ್ದು, ಮನೆಗೆ ಮುತ್ತಿಗೆ ಹಾಕಲು ಬಂದ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದರು. ಸಚಿವ ಮನೆಗೆ ಮುತ್ತಿಗೆ ಹಾಕುವ ಮುನ್ನ ಮಾತನ್ನಾಡಿದ ಮನೋಹರ್, ಸಚಿವ ಕೆಎಸ್ ಈಶ್ವರಪ್ಪ ದೇಶದ್ರೋಹಿ, ಕೂಡಲೇ ಅವರನ್ನು ಮಂತ್ರಿಮಂಡಲದಿಂದ ವಜಾಗೊಳಿಸಿ ದೇಶದ್ರೋಹ ಪ್ರಕರಣ ದಾಖಲಿಸಬೇಕು ಹಾಗೂ ಬಂಧಿಸಬೇಕು ಎಂದು ಒತ್ತಾಯಿಸಿದರು.

ಇದೇ ಸಂದರ್ಭದಲ್ಲಿ ಸ್ಪೀಕರ್ ಕಾಗೇರಿ ತರಾಟೆಗೆ ತೆಗೆದುಕೊಂಡ ಇವರು, ಇವರು ಗೌರವ ಸ್ಥಾನದಲ್ಲಿದ್ದಾರೆ. ಅವರು ನಿನ್ನೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಗೆ “ಏ ಏ” ಎಂದು ಬಳಸಿದ್ದು ಸರಿ ಅಲ್ಲ ಎಂದು ಸ್ಪಷ್ಟಪಡಿಸಬೇಕೆಂದು ಆಗ್ರಹಿಸಿದರು.

ಕುಮಾರಸ್ವಾಮಿ ಒಬ್ಬ ಸಮಯಸಾಧಕ ರಾಜಕಾರಣಿ, ನಾಟಕದ ಇತಿಹಾಸದಲ್ಲಿ ಕುಮಾರಸ್ವಾಮಿ ಅಂತ ಲಜ್ಜೆಗೆಟ್ಟ ರಾಜಕಾರಣಿ ಮತ್ತೊಬ್ಬ ಇಲ್ಲ.

ಇವತ್ತು ಬಿಜೆಪಿ ಪಕ್ಷದೊಂದಿಗೆ ಶಾಮೀಲಾಗಿರುವ ಅಂತ ಕುಮಾರಸ್ವಾಮಿ ಕೆಪಿಸಿಸಿ ಅಧ್ಯಕ್ಷರ ಬಗ್ಗೆ ಮಾತನಾಡಿದ್ದಾರೆ, ಇವರಿಗೆ ನೈತಿಕತೆ ಇದ್ದರೆ ಜೆಡಿಎಸ್ ವಿಸರ್ಜನೆ ಮಾಡಬೇಕು ಎಂದರು.

More News