Day and night Protest: ರಾಷ್ಟ್ರ ಧ್ವಜ ಅಪಮಾನ: ಈಶ್ವರಪ್ಪ ವಿರುದ್ಧ ಕ್ರಮ ಕೈಗೊಳ್ಳುವರೆಗೂ ಧರಣಿ: ಸಿದ್ದರಾಮಯ್ಯ

ಬೆಂಗಳೂರು : ರಾಜ್ಯ ಸರ್ಕಾರ ಸದನವನ್ನು ಮೊಟಕುಗೊಳಿಸಿದ್ರೂ ಹಗಲು ಮತ್ತು ರಾತ್ರಿ ಧರಣಿ ಮುಂದುವರೆಸಲಾಗುವುದು ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.
ವಿಧಾನ ಸಭೆಯಲ್ಲಿ ನಿನ್ನೆಯಿಂದ ಅಹೋರಾತ್ರಿ ಧರಣಿ ಮಾಡುತ್ತಿರುವ ಕಾಂಗ್ರೆಸ್ ಶಾಸಕರು, ಈಶ್ವರಪ್ಪ ರಾಷ್ಟ್ರ ಧ್ವಜಕ್ಕೆ ಅಪಮಾನ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಈ ವಿಚಾರವನ್ನು ತಾರ್ಕಿಕ ಅಂತ್ಯದವರೆಗೂ ಧರಣಿ ನಡೆಸುತ್ತೇವೆ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಸಚಿವ ಈಶ್ವರಪ್ಪ ಅವರನ್ನ ಸಚಿವ ಸ್ಥಾನದಿಂದ ವಜಾ ಮಾಡಬೇಕು, ಅವರು, ರಾಷ್ಟ್ರಧ್ವಜಕ್ಕೆ ಅಪಮಾನ‌ ಮಾಡಿದ್ದಾರೆ, ಜನಸಮಾನ್ಯ ಈ ರೀತಿಯಲ್ಲಿ ಅಪಮಾನ ಮಾಡಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು, ಆದರೆ ಇವರ ವಿರುದ್ಧ ಯಾಕಿಲ್ಲ ಎಂದು ಪ್ರಶ್ನಿಸಿದ್ದಾರೆ.
ರಾಜ್ಯಪಾಲರು ಈಶ್ವರಪ್ಪ ಅವರನ್ನು ವಜಾ ಮಾಡಬೇಕು, RSS ಹಿಡನ್ ಅಜೆಂಡಾವನ್ನ ಈಶ್ವರಪ್ಪ ಮೂಲಕ ಹೇಳಿಸಿದ್ದಾರೆ ಎಂದು ಆರೋಪಿಸಿದ ಸಿದ್ದರಾಮಯ್ಯ, ಈಶ್ವರಪ್ಪ ಮೇಲೆ ಇನ್ನೂ ಕೇಸ್ ದಾಖಲು ಮಾಡಿಲ್ಲ, ತ್ರಿವರ್ಣ ಧ್ವಜಕ್ಕೆ ಬಿಜೆಪಿಯವರು ಮೊದಲಿಂದಲು ಗೌರವ ಕೊಟ್ಟಿಲ್ಲ, ಸಂವಿಧಾನದ ಮೇಲೆ ಬಿಜೆಪಿಗೆ ಗೌರವವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು.

ರಾಷ್ಟ್ರಧ್ವಜ ನಮ್ಮ ಸ್ವಾತಂತ್ರ್ಯದ ಸಂಕೇತ, ಧ್ವಜ ಹಿಡಿದಾಗ ಹೋರಾಟದ ಕಿಚ್ಚು ಬರುತ್ತೆ, ಯಾರೇ ಧ್ವಜದ ಬಗ್ಗೆ ಅಪಮಾನ ಮಾಡಿದ್ರೂ ಕೇಸ್ ಹಾಕಬೇಕು, ದೇಶದ್ರೋಹದ ಕೇಸ್ ದಾಖಲಿಸಬೇಕು ಎಂದು ಆಗ್ರಹಿಸಿದರು.
ಈಶ್ವರಪ್ಪ ಮಾಡಿರೋದು ಅಕ್ಷಮ್ಯ ಅಪರಾಧ, ಯಾವಾಗಲೂ ನ್ಯಾಷನಲ್ ಪ್ಲಾಗ್ ಹಾರಾಡಬೇಕು, ಒಬ್ಬ ಮಂತ್ರಿಯಾಗಿ ಈಶ್ವರಪ್ಪ ಹೇಳುವುದು ತಪ್ಪ ಎಂದು ಹೇಳಿದ ಸಿದ್ದರಾಮಯ್ಯ, ಬಿಜೆಪಿ ರಾಷ್ಟ್ರಧ್ವಜಕ್ಕೆ ಗೌರವ ಕೊಡಲ್ಲ ಎಂದರು.

More News