SHIVAMOGGA HARSHA MURDER CASE: ಶಿವಮೊಗ್ಗ ಹರ್ಷ ಕೊಲೆ ಪ್ರಕರಣ: ಮೂವರು ಪೊಲೀಸ್ ವಶಕ್ಕೆ : ಗೃಹ ಸಚಿವ ಆರಗ ಜ್ಞಾನೇಂದ್ರ

ಶಿವಮೊಗ್ಗ : ಭಜರಂಗದಳದ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗ್ಲೆ ಕೆಲವರನ್ನ ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಶಿವಮೊಗ್ಗದಲ್ಲಿ ಇಂದು ಹರ್ಷ ಮನೆಗೆ ಭೇಟಿ ನೀಡಿ, ಅವರ ಪೋಷಕರಿಗೆ ಸಾಂತ್ವಾನ ಹೇಳಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯದಲ್ಲೆ ವಿಚಾರಣಾ ವರದಿ ಬರಲಿದೆ, ಇದಾದ ಬಳಿಕ ಈ ಘಟನೆ ಹಿಂದೆ ಯಾರಿದ್ದಾರೆ ಎನ್ನುವುದು ಸ್ಪಷ್ಟವಾಗುತ್ತೆ ಎಂದು ತಿಳಿಸಿದ್ದಾರೆ.
ನನ್ನ ಮಗನನ್ನ ವಾಪಸ್ಸು ತರಲು ಆಗಲ್ಲ, ಆತನ‌‌ ಸಾವಿಗೆ ನ್ಯಾಯ ಕೊಡಿಸಿ ಎಂದು ಆತನ ಪೋಷಕರು ಇದೇ ಸಂದರ್ಭದಲ್ಲಿ ಕೋರಿಕೊಂಡಿದ್ದಾರೆ ಎಂದು ಹೇಳಿದ ಗೃಹ ಸಚಿವರು, ನಮ್ಮ ಸರ್ಕಾರ ಖಂಡಿತ ನ್ಯಾಯ ಕೊಡಿಸುವ ಭರವಸೆ ಅವರಿಗೆ ನೀಡಿದ್ದೇನೆ ಎಂದು ತಿಳಿಸಿದರು.
ಘಟನೆ ಸಂಬಂಧ ಈಗಾಗಲೇ ಮೂವರನ್ನು‌ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ, ಇನ್ನು ಹಲವರನ್ನ ವಶಕ್ಕೆ ಪಡೆಯಲಾಗುತ್ತಿದೆ, ಯಾವ ಘಟನೆಯನ್ನು ಮುಂದುವರೆಯಲು ಬಿಡಲ್ಲ. 1,200 ಪೊಲೀಸರನ್ನ ನಿಯೋಜಿಸಲಾಗಿದೆ, ಬೆಂಗಳೂರಿಂದಲೂ ಪೊಲೀಸ್ ಪಡೆಗಳನ್ನು ತರಿಸಲಾಗಿದೆ ಎಂದು ತಿಳಿಸಿದರು.
ಮೇಲ್ನೋಟಕ್ಕೆ ಐವರು ಪ್ರಕರಣದಲ್ಲಿ ಇದ್ದಾರೆ. ಇನ್ನೂ ಹೆಚ್ಚಿನವರು ಇದರ ಹಿಂದೆ ಇದ್ದಾರೆ ಎನ್ನುವ ಸಂಶಯ ಮೂಡಿದೆ, ಎಲ್ಲರನ್ನೂ ಪತ್ತೆ ಹಚ್ಚೊ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದ ಆರಗ ಜ್ಞಾನೇಂದ್ರ, ಶಿವಮೊಗ್ಗದಲ್ಲಿ ಯಾರು ಭಾವುಕರಾಗಬೇಡಿ, ತಾಂತಿ‌ ಸುವ್ಯವಸ್ಥೆ ಕಾಪಾಡಬೇಕು ಎಂದು ಮನವಿ ಮಾಡಿದರು.

ಸದ್ಯ ಶಿವಮೊಗ್ಗದಲ್ಲಿ ಪರಿಸ್ಥಿತಿ ಹತೋಟಿಯಲ್ಲಿದ್ದು, ಸಂಘಟನೆಗಳನ್ನ ಬ್ಯಾನ್ ಮಾಡೋ ಬಗ್ಗೆ ಚಿಂತನೆ ನಡೆದಿದೆ. ಸದ್ಯದಲ್ಲೆ ಅದರ ಬಗ್ಗೆ ನಿರ್ಣಯ ಕೈಗೊಳ್ಳಾಗುವುದು ಎಂದು ಹೇಳಿದರು, ಸದ್ಯ ಶಿವಮೊಗ್ಗ ನಗರದಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ ಎಂದು ತಿಳಿಸಿದರು.
ಬಂದಿತರಲ್ಲಿ ಇಬ್ಬರು ಬೆಂಗಳೂರಿನ ಜೆಜೆ ನಗರದ ನಿವಾಸಿ ಗಳಾಗಿದ್ದು, ಇನ್ನೊಬ್ಬ ಶಿವಮೊಗ್ಗದವರಾಗಿದ್ದಾರೆ ಎಂದು ಗೃಹ ಸಚಿವರು ತಿಳಿಸಿದ್ದಾರೆ.

More News