RADIO JOCKEY RACHANA: ಹೃದಯಾಘಾತದಿಂದ ಇಹಲೋಕ ತ್ಯಜಿಸಿದ ಮಾತಿನ ಮಲ್ಲಿ ಆರ್‌ಜೆ ರಚನಾ

ಬೆಂಗಳೂರು: ಖಾಸಗಿ ರೆಡಿಯೋ ವಾಹಿನಿಯಲ್ಲಿ ಹಲವಾರು ವರ್ಷಗಳಿಂದ ರೆಡಿಯೋ ಜಾಕಿ ಆಗಿ ಕೆಲಸ ಮಾಡಿದ್ದ ರಚನಾ (೩೯ ವರ್ಷ) ಹೃದಯಾಘಾತದಿಂದ ಅಸುನೀಗಿದ್ದಾರೆ.
ತಮ್ಮ ಮಾತಿನ ಮೂಲಕವೇ ಜನರ ಮನಸ್ಸು ಗೆದ್ದಿದ್ದ ಮುದ್ದು ಮುಖದ ಚೆಲುವೆ ರಚನಾ ಅವರಿಗೆ ಇಂದು ಮಧ್ಯಾಹ್ನ ೧೨ ಗಂಟೆ ಸುಮಾರಿಗೆ ಹೃದಯಾಘಾತ ಆಗಿದೆ ಎಂದು ತಿಳಿದುಬಂದಿದೆ.
ಕಳೆದ ಕೆಲ ವರ್ಷಗಳಿಂದ ರೆಡಿಯೋ ಜಾಕಿ ಕೆಲಸವನ್ನು ಬಿಟ್ಟು ರಚನಾ ಮನೆಯಲ್ಲೇ ಇದ್ದರು ಎನ್ನಲಾಗಿದೆ. ರೆಡಿಯೋ ಜಾಕಿ ಕೆಲಸ ಬಿಟ್ಟ ಬಳಿಕ ರಚನಾ ಎಲ್ಲರಿಂದಲೂ ದೂರ ಇದ್ದರು. ಸ್ನೇಹಿತರ ಕರೆಗೂ ಸರಿಯಾಗಿ ಸ್ಪಂದಿಸುತ್ತಿರಲಿಲ್ಲ ಎಂದು ತಿಳಿದು ಬಂದಿದೆ. ಡಿಪ್ರೆಷನ್, ಸ್ಟ್ರೆಸ್‌ನಿಂದ ಹೃದಯಾಘಾತ ಆಗಿದೆ ಎಂದು ಹೇಳಲಾಗುತ್ತಿದೆ.

ಹಸನ್ಮುಖಿಯಾಗಿದ್ದ ರಚನಾ ಸದಾ ಫಿಟ್ ನೆಸ್ ಕಡೆಗೆ ಹೆಚ್ಚು ಗಮನ ಕೊಡುತ್ತಿದ್ದರು. ಸೊಪ್ಪು, ಹಣ್ಣು, ತರಕಾರಿಗಳನ್ನೆ ಹೆಚ್ಚಾಗಿ ಸೇವಿಸುತ್ತಿದ್ದ ರಚನಾ ಫಿಟ್ ಅಂಡ್ ಫೈನ್ ಆಗಿದ್ದರು. ಕಳೆದ ಕೆಲ ತಿಂಗಳುಗಳಿಂದ ಡಿಪ್ರೆಷನ್‌ನಲ್ಲಿದ್ದರು ಎಂದು ಹೇಳಲಾಗುತ್ತಿದೆ. ಆದರೆ, ಆ ಡಿಪ್ರೆಷನ್ ಕಾರಣ ಏನು ಎಂಬುದು ಇನ್ನೂ ತಿಳಿದುಬಂದಿಲ್ಲ.

ಹಲವು ವರ್ಷಗಳ ಕಾಲ ರೆಡಿಯೋ ಜಾಕಿ ಆಗಿ ಕೆಲಸ ಮಾಡಿದ್ದ ರಚನಾ, ನಟ ರಕ್ಷಿತ್ ಶೆಟ್ಟಿ ಅಭಿನಯದ `ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ’ ಚಿತ್ರದಲ್ಲೂ ಅಭಿನಯಿಸಿದ್ದರು. ತಮ್ಮ ಚಟಪಟ ಮಾತಿನಿಂದಲೇ ಜನರ ಮನ ಗೆದ್ದಿದ್ದ ರಚನಾ ಈ ರೀತಿ ಹೃದಯಾಘಾತದಿಂದ ಸಾವನ್ನಪ್ಪಿರುವುದು ನಿಜಕ್ಕೂ ದುರಂತ.

More News