STOCK MARKET: ದೇಶಿಯ ಷೇರುಪೇಟೆ ಮೇಲೆ ರಷ್ಯಾ-ಉಕ್ರೇನ್ ಬಿಕ್ಕಟ್ಟಿನ ಹೊಡೆತ

ಮುಂಬೈ: ಉಕ್ರೇನ್ ವಿರುದ್ಧ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮಿಲಿಟರಿ ಕಾರ್ಯಾಚರಣೆ ಘೋಷಿಸಿದ ಬೆನ್ನಲ್ಲೇ ಭಾರತದ ಷೇರು ಮಾರುಕಟ್ಟೆಯಲ್ಲಿ ಭಾರಿ ಕುಸಿತ ಕಂಡುಬಂದಿದೆ.
ಮುಂಬೈ ಷೇರು ಸೂಚ್ಯಂಕ 1,457 ಅಂಶಗಳಷ್ಟು ಕುಸಿದಿದ್ದು, 55,774 ಅಂಶಗಳಲ್ಲಿ ವಹಿವಾಟು ಆರಂಭಿಸಿತು. ನಿಫ್ಟಿ 391 ಅಂಶ ಕುಸಿತ ಕಂಡು, 16,671 ಅಂಶಗಳಲ್ಲಿ ವಹಿವಾಟು ಆರಂಭಿಸಿತು. ಆರಂಭದಲ್ಲೇ ಸೆನ್ಸೆಕ್ಸ್ ಮತ್ತು ನಿಫ್ಟಿಯ ಎಲ್ಲಾ ಷೇರುಗಳು ಕೆಂಪು ಬಣ್ಣದಲ್ಲಿ ವಹಿವಾಟು ಆರಂಭಿಸಿದವು.

ರಷ್ಯಾ-ಉಕ್ರೇನ್ ನಡುವೆ ಯುದ್ಧೋನ್ಮಾದ ಏರ್ಪಟ್ಟಿರುವ ಹಿನ್ನೆಲೆಯಲ್ಲಿ ಸತತ ಏಳನೇ ದಿನವೂ ಸೆನ್ಸೆಕ್ಸ್ ಮತ್ತು ನಿಫ್ಟಿ ಕುಸಿತ ಕಂಡಿವೆ. ವರ್ಷದ ಆರಂಭಕ್ಕೆ ಹೋಲಿಸಿದರೆ ಸೆನ್ಸೆಕ್ಸ್ ಶೇಕಡಾ 5.01ರಷ್ಟು ಮತ್ತು ನಿಫ್ಟಿ ಶೇಕಡಾ 4.29 ರಷ್ಟು ಕುಸಿತ ದಾಖಲಿಸಿವೆ.

ಇಂಡಸ್‌ಲ್ಯಾಂಡ್ ಬ್ಯಾಂಕ್ ಷೇರುಗಳು ಶೇಕಡಾ 4.85 ರಷ್ಟು ಕುಸಿದಿದ್ದು, ಟೆಕ್ ಮಹೀಂದ್ರಾ ಐಟಿ ಷೇರುಗಳು ಶೇಕಡಾ 4.92 ರಷ್ಟು ಇಳಿಕೆ ಕಂಡಿದೆ. ಹಾಗೆಯೇ ಭಾರ್ತಿ ಏರ್‌ಟೆಲ್ ಷೇರುಗಳು ಶೇಕಡಾ 4.39ರಷ್ಟು ಇಳಿಮುಖ ಕಂಡಿವೆ.

More News