ಸಂಬಂಧಿಕರ ಮದುವೆಯಲ್ಲಿ ರಾಧಿಕಾ ಪಂಡಿತ್ & ಫ್ಯಾಮಿಲಿ ಮಿಂಚಿಂಗ್..

ಸ್ಯಾಂಡಲ್ ವುಡ್ ರಾಕಿಂಗ್ ಸ್ಟಾರ್ ಯಶ್ ಜತೆ ಸಂಬಂಧಿಕರ ಮದುವೆ ಸಮಾರಂಭದಲ್ಲಿ ಭಾಗವಹಿಸಿರುವ ಫೋಟೋಗಳನ್ನ ನಟಿ ರಾಧಿಕಾ ಪಂಡಿತ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಈ ಮದುವೆ ಸಮಾರಂಭದಲ್ಲಿ ನಟಿ ರಾಧಿಕಾ ಹಾಗೂ ಯಶ್ ದಂಪತಿ ಜೊತೆ ಮಕ್ಕಳಾದ ಯಥರ್ವ್ ಮತ್ತು ಆಯ್ರಾ ಕೂಡ ಪಾಲ್ಗೊಂಡಿದ್ದರು.

ತಮ್ಮ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ನಟಿ ರಾಧಿಕಾ ಪಂಡಿತ್ ಈ ಫೋಟೋಗಳನ್ನು ಶೇರ್ ಮಾಡಿದ್ದಾರೆ.

ನಟಿ ರಾಧಿಕಾ ಪಂಡಿತ್ ಹಳದಿ ಬಣ್ಣದ ಸೀರೆಯಲ್ಲಿ ಮಿಂಚಿದರೆ, ರಾಕಿಂಗ್ ಸ್ಟಾರ್ ಯಶ್ ಕಪ್ಪು ಬಣ್ಣದ ಕುರ್ತಾ ಧರಿಸಿದ್ದಾರೆ.

ಆಯ್ರಾ ಹಾಗೂ ಯಥರ್ವ್ ಕೂಡ ಹಳದಿ ಬಣ್ಣದ ಬಟ್ಟೆ ತೊಟ್ಟು ಗಮನ ಸೆಳೆದಿದ್ದಾರೆ. ಯಶ್ ಮತ್ತು ರಾಧಿಕಾ ಅಭಿಮಾನಿಗಳು ಈ ಚಿತ್ರಗಳಿಗೆ ಲೈಕ್ ಮತ್ತು ಕಾಮೆಂಟ್ ಹಾಕುತ್ತಿದ್ದಾರೆ.

More News