ನವದೆಹಲಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಟ್ವಿಟ್ಟರ್ ಖಾತೆ ಹ್ಯಾಕ್ ಆಗಿದೆ. ನಡ್ಡಾ ಅವರ ಟ್ವಿಟ್ಟರ್ ಖಾತೆಯಲ್ಲಿ ಹ್ಯಾಕರ್ ಗಳು ಉಕ್ರೇನ್ ಹಾಗೂ ರಷ್ಯಾ ಬೆಂಬಲಿಸಿ ಕ್ರಿಪ್ಟೋ ಕರೆನ್ಸಿ ದೇಣಿಗೆ ನೀಡುವಂತೆ ಕೇಳುವ ಸಂದೇಶಗಳನ್ನು ಪ್ರಕಟಿಸಿದ್ದಾರೆ.
ಉಕ್ರೇನ್ ಜನರಿಗೆ ಬೆಂಬಲ ಸೂಚಿಸಿ ಪೋಸ್ಟ್ ಹಾಕಲಾಗಿದೆ. ಕ್ರಿಪ್ಟೋ ಕರೆನ್ಸಿ ಮೂಲಕ ದೇಣಿಗೆ ಸ್ವೀಕರಿಸಲಾಗುತ್ತಿದೆ. ಬಿಟ್ ಕಾಯಿನ್ ಮತ್ತು ಎಥೆರಿಯಮ್ ನಿಂದ ದೇಣಿಗೆ ನೀಡಬಹುದು’ ಎಂದು ಟ್ವೀಟ್ ಮಾಡಲಾಗಿದೆ.

ಉಕ್ರೇನ್ ಪರವಾದ ಟ್ವೀಟ್ ಗಳನ್ನು ಐದು ನಿಮಿಷದಲ್ಲಿ ಡಿಲಿಟ್ ಮಾಡಿರುವ ಹ್ಯಾಕರ್‌ಗಳು ರಷ್ಯಾದ ಹೆಸರಲ್ಲೂ ಪೋಸ್ಟ್ ಪ್ರಕಟಿಸಿದ್ದಾರೆ.




