ಮಾಘ ಮಾಸ ಕೃಷ್ಣ ಪಕ್ಷದ ಚತುರ್ದಶಿಯಂದು ಆಚರಿಸಲ್ಪಡುವ ಸಂಭ್ರಮದ ಮಹಾಶಿವರಾತ್ರಿ ಶಿವ ಪರಮೇಶ್ವರನ ಆರಾಧನೆಗೆ ಅತ್ಯಂತ ಪ್ರಶಸ್ತವಾದ ದಿನ. ನಾಳೆ ಶಿವನ ಪೂಜೆ ಪುನಸ್ಕಾರ ನಡೆಸಿ ಮಹಾಶಿವರಾತ್ರಿಯನ್ನು ಭಕ್ತಿ ಭಾವದಿಂದ ಆಚರಣೆ ಮಾಡಲಾಗುತ್ತಿದೆ.
ಕೈಲಾಸ ವಾಸಿ ಶಿವನನ್ನು ಭಕ್ತಿ ಭಾವದಿಂದ ಮಹಾಶಿವರಾತ್ರಿಯ ದಿನದಿಂದು ಪೂಜಿಸಿದರೆ, ನಮ್ಮ ಜನ್ಮಾಂತರಗಳ ದೋಷಗಳು ನಿವಾರಣೆಯಾಗಲಿವೆ ಎನ್ನುವುದು ಶಿವಪುರಾಣದಲ್ಲಿ ಉಲ್ಲೇಖಿಸಲಾಗಿದೆ.
ಮಹಾದೇವ ಶಿವ ಮತ್ತು ಪಾರ್ವತಿ ಮದುವೆಯಾಗಿರುವ ಈ ದಿನವನ್ನು ಶಿವ ಮತ್ತು ಶಕ್ತಿಗಳಿಗೆ ಸಮರ್ಪಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಈ ದಿನ ಸನಾತನ ಧರ್ಮದಲ್ಲಿ ಅತ್ಯಂತ ವಿಶೇಷ ಮತ್ತು ಮಹತ್ವವನ್ನುು ಪಡೆದುಕೊಂಡಿದೆ.
ಶಿವಲಿಂಗಕ್ಕೆ ವಿಶೇಷವಾದ ಅಭಿಷೇಕಗಳನ್ನು ಮಾಡಲಾಗುತ್ತದೆ ಹಾಗೂ ರಾತ್ರಿ ಶಿವ ಜಾಗರಣೆಯನ್ನು ಮಾಡಲಾಗುತ್ತಿದೆ. ಮಹಾಶಿವರಾತ್ರಿಯ ದಿನ ಶಿವನನ್ನು ವಿಶಿಷ್ಟವಾಗಿ ಪೂಜಿಸುವುದರಿಂದ ಹತ್ತು ಹಲವು ಪ್ರಯೋಜನಗಳನ್ನು ಪಡೆಯಬಹುದಾಗಿದೆ.
ಜಲಾಭಿಷೇಕ, ಮಹಾಶಿವರಾತ್ರಿಯ ದಿನದಂದು ಭಕ್ತರು ಏಂ ನಮ: ಶಿವಾಯ ಮಂತ್ರವನ್ನು ಜಪಿಸುವುದು ಶುಭ ಸಂಕೇತ. ಪಂಚಾಮೃತ ಅಭಿಷೇಕ, ಮಹಾಶಿವರಾತ್ರಿಯ ದಿನ ಪಂಚಾಮೃತದಿಂದ ಶಿವಲಿಂಗವನ್ನು ಅಭಿಷೇಕ ಮಾಡುವುದರಿಂದ ನೀರೀಕ್ಷಿತ ಫಲಿತಾಂಶವನ್ನು ಪಡೆಯಬಹುದು, ಗಂಗಾಜಲ ಅಭಿಷೇಕ ಮಹಾಶಿವರಾತ್ರಿಯ ದಿನದಂದು ಶಿವಲಿಂಗಕ್ಕೆ ಎಲ್ಲಾ ತೀರ್ಥಯಾತ್ರೆಗಳಿಂದ ತಂದ ಗಂಗಾ ಜಲ ನೀರಿನಿಂದ ಅಭಿಷೇಕ ಮಾಡುವುದರಿಂದ ಮೋಕ್ಷ ಪಡೆಯಬಹುದು.

ಸಾಸಿವೇ ಎಣ್ಣೆ ಅಭಿಷೇಕ, ಗುಪ್ತ ಶತ್ರುಗಳಿಂದ ತೊಂದರೆ ಅನುಭವಿಸುತ್ತಿದ್ದರೆ ಅಂತಹವರು ಶಿವರಾತ್ರಿಯ ದಿನ ಶಿವಲಿಂಗಕ್ಕೆ ಸಾಸಿವೆ ಎಣ್ಣೆಯಿಂದ ಅಭಿಷೇಕ ಮಾಡುವುದು ಒಳಿತು. ಜೇನುತುಪ್ಪದ ಅಭಿಷೇಕ, ಮೊಸರಿನ ಅಭಿಷೇಕ ಹಾಗೂ ಹಾಲಿನ ಅಭಿಷೇಕಗಳನ್ನು ಮಾಡಲಾಗುತ್ತಿದೆ.




