ರಾಜ್ಯ ಬಜೆಟ್ ನಲ್ಲಿ ಮೇಕೆದಾಟು ಸೇರಿ ಇತರೆ ನೀರಾವರಿ ಯೋಜನೆಗಳಿಗೆ ಅನುದಾನ: ಸಚಿವ ಕಾರಜೋಳ

ಬೆಂಗಳೂರು: ಅತ್ತ ಕಾಂಗ್ರೆಸ್ ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಪಾದಯಾತ್ರೆ ಮಾಡುತ್ತಿದ್ದರೆ, ಇತ್ತ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಮೇಕೆದಾಟು ಅಣೆಕಟ್ಟು ನಿರ್ಮಾಣ ಹಾಗೂ ಇತರೆ ನೀರಾವರಿ ಯೋಜನೆಗಳಿಗೆ ಬಜೆಟ್ ನಲ್ಲಿ ಯಾರೂ ಊಹಿಸದೇ ಇರುವ ರೀತಿಯಲ್ಲಿ ಅನುದಾನ ಈ ಬಜೆಟ್ ನಲ್ಲಿ ಸಿಗಲಿದೆ ಎಂಬ ಸುಳಿವು ನೀಡಿದರು.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಜೆಟ್ ಇನ್ನು ಎರಡು ದಿನಗಳು ಬಾಕಿ ಉಳಿದಿದೆ. ಹೀಗಾಗಿ ಬಜೆಟ್ ಬಗ್ಗೆ ವಿಸ್ತೃತವಾಗಿ ಮಾತನ್ನಾಡಲು ಆಗುವುದಿಲ್ಲ. ಮುಖ್ಯಮಂತ್ರಿ ಬೊಮ್ಮಾಯಿ ಕೂಡ ಇದರ ಬಗ್ಗೆ ಸಕಾರಾತ್ಮಕವಾಗಿ ಸ್ಪಂದನೆ ಮಾಡಿದ್ದಾರೆ ಎಂದು ತಿಳಿಸಿದರು.
ಕಾಂಗ್ರೆಸ್ ವಾರಸುದಾರರಿಲ್ಲದ ಮನೆ
ಅನುಭವ ಇದೆ ಅವರಿಗೆ ಸ್ವಾತಂತ್ರ್ಯ ಬಂದ ನಂತರ ದೇಶದ ಉದ್ದಗಲಕ್ಕೂ ಸರ್ಕಾರ ಮಾಡಿದರು. ಸುರ್ಜೆವಾಲ ಅವರನ್ನು ಕೇಳುತ್ತೇನೆ ಸರ್ವೋಚ್ಚ ನ್ಯಾಯಾಲಯದ ವಿರುದ್ಧನ ಅಥವಾ ನಿಮ್ಮ ಪಕ್ಷದ ನಾಯಕತ್ವ. ಸದ್ಯ ಕಾಂಗ್ರೆಸ್ ಪಕ್ಷ ವಾರಸುದಾರರಿಲ್ಲದ ಮನೆ ರೀತಿ ಆಗಿದೆ ಎಂದು ವ್ಯಂಗ್ಯ ಮಾಡಿದರು.
11 ತಾರೀಖಿನಂದು ನಮ್ಮ ACS ಸಭೆ ಮಾಡಿದ್ದಾರೆ
ಕೇಂದ್ರ ಜಲಮಂತ್ರಾಲಯಕ್ಕೆ ಪತ್ರ ಬರೆದಿದ್ದೇವೆ. ನಾವು ಎಲ್ಲಾ ಪ್ರಯತ್ನ ಮಾಡುತ್ತಿದ್ದೇವೆ,ಮೊದಲು ಮೇಕೆದಾಟು, ಎರಡನೇ, ಕೃಷ್ಣೆ ಇದೆಲ್ಲಾ ಕೋರ್ಟ್ ನಲ್ಲಿ ಇದೆ.

ನಮ್ಮ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ,ಕಾವೇರಿ ನೀರಾವರಿ ನಿಗಮದ ಎಂಡಿ, ಮತ್ತು ಎಸಿಎಸ್ ಜೊತೆಗೆ ಸಭೆ ಮಾಡಿದ್ದೇವೆ,ಈ ಯೋಜನೆಯಲ್ಲಿ ನಮ್ಮ ಪಾಲಿನ ನೀರನ್ನು ಹೇಳದೆ ನಾವು ಒಪ್ಪಿಗೆ ಸೂಚನೆ ನೀಡಲ್ಲ ಎಂದಿದ್ದೇವೆ.ಲೀಗಾಲ್ ಆಗಿ ಜೊತೆಗೆ ಅಧಿಕಾರಿಗಳ ಜೊತೆಗೆ ಸಭೆ ಮಾಡಿದ್ದೇವೆ.ನಮ್ಮ ಮತ್ತು ಬೊಮ್ಮಾಯಿ ಆದ್ಯತೆ ನೀರಾವರಿ ಯೋಜನೆಗೆ ಹೆಚ್ಚು ಹೊತ್ತು ನೀಡುತ್ತೇವೆ,

ನೀರಾವರಿ ಯೋಜನೆಗೆ ಹಣ ಸಿಗಲಿಲ್ಲ ಅಂದ್ರೆ ಸಾಲ ಆದ್ರು ತಂದು ಮಾಡುತ್ತೇವೆ ಎಂದಿದ್ವಿ .ಕರೋನ ಸಂಧರ್ಭದಲ್ಲಿ ನಿರೀಕ್ಷೆಯಂತೆ ನಾವು ಹಣ ನೀಡಲು ಆಗಿಲ್ಲ ಅದನ್ನು ನಾನು ಒಪ್ಪಿಕೊಳ್ಳುತ್ತೇನೆ ಎಂದರು.

More News