LIVE VISUALS OF STONE QUARRY COLLAPSE: ಕ್ವಾರಿ ಗುಡ್ಡ ಕುಸಿತ ರಕ್ಷಣಾ ಕಾರ್ಯ ತೀವ್ರ: 100 ಮಂದಿ ರಕ್ಷಣಾ ತಂಡದಿಂದ ಹರಸಾಹಸ

ಚಾಮರಾಜನಗರ: ಇಲ್ಲಿನ ಗುಂಡ್ಲುಪೇಟೆಯ ಮಡಹಳ್ಳಿ ಬಿಳಿಕಲ್ಲು ಕ್ವಾರಿ ಗುಡ್ಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ NDRF, STRF ಹಾಗೂ ಅಗ್ನಿಶಾಮಕ ಸಿಬ್ಬಂದಿ ಜಂಟಿ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದಾರೆ.
25 ಮಂದಿ ಎನ್‌ಡಿಆರ್‌ಎಫ್, 25 ಮಂದಿ ಎಸ್‌ಟಿ‌ಆರ್‌ಎಫ್, 50 ಮಂದಿ ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದ್ದು ಕಲ್ಲುಗಳನ್ನು ಸರಿಸಲು ಹರಸಾಹಸವನ್ನೇ ಪಡುತ್ತಿದ್ದಾರೆ.
ಇನ್ನು, ಬಿಳಿಕಲ್ಲು ಕ್ವಾರಿ ಪ್ರದೇಶದ ರಕ್ಷಣಾ ಕಾರ್ಯಾಚರಣೆ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ವಿ‌. ಸೋಮಣ್ಣ ಭೇಟಿ ನೀಡಲಿದ್ದು, ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳ ಆರೋಗ್ಯ ವಿಚಾರಣೆ ನಡೆಸಲಿದ್ದಾರೆ.

ಬಂಡೆಗಳಲ್ಲಿ ಸುಲಿಕಿದ್ದ ಇಬ್ಬರ ಮೃತದೇಹವನ್ನು ಹೊರತೆಗೆಯಲಾಗಿತ್ತು, ಇಂದು ಮತ್ತೊಬ್ಬ ಕಾರ್ಮಿಕನ ಮಡತದೇಹವನ್ನು ಹೊರತೆಗೆಯಲಾಗಿದೆ.

ಹತ್ತಕ್ಕೂ ಹೆಚ್ಚು ಕಾರ್ಮಿಕರು ಗಂಭೀರ ಪ್ರಮಾಣದಲ್ಲಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕಲ್ಲುಗಣಿಗಾರಿಕೆಯನ್ನು ಕೇರಳದ ಪ್ರಭಾವಿಗಳು ಹಾಗೂ ಸ್ಥಳೀಯ ರಾಜಕಾರಣಿಗಳು ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

More News