ಉಡುಪಿ: ಪವರ್ ಮಿನಿಸ್ಟರ್ ಸುನಿಲ್ ಕುಮಾರ್ ಅವರು ಮಸ್ತ್ ಮಸ್ತ್ ಡ್ಯಾನ್ಸ್ ಮಾಡಿ ನೆರೆದಿದ್ದ ಭಕ್ತಾಧಿಗಳನ್ನು ಚಕಿತಗೊಳಿಸಿದರು. ಕಾರ್ಕಳದಲ್ಲಿ ನಡೆದ ಉತ್ಸವದಲ್ಲಿ ಸಚಿವ ಸುನೀಲ್ ಕುಮಾರ್ ಸ್ಟೆಪ್ ಹಾಕಿದರು.
ಕಾರ್ಕಳ ತಾಲೂಕಿನ ಗಾಂಧಿ ಮೈದಾನದಲ್ಲಿ ನಡೆದ ಕಾರ್ಕಳ ಉತ್ಸವವನ್ನು ಕಾರ್ಕಳ ಉತ್ಸವ ಸಮಿತಿ ಆಯೋಜಿಸಿತ್ತು. ನೆರೆದಿದ್ದ ಜನರ ಕೈ ಕೈ ಹಿಡಿದು ಸಚಿವರು ಡ್ಯಾನ್ಸ್ ಮಾಡಿದರು.
ಕಳೆದ ಹತ್ತು ದಿನಗಳಿಂದ ಕಾರ್ಕಳ ಉತ್ಸವ ಆರಂಭವಾಗಿತ್ತು. ಈ ಖುಷಿಯಲ್ಲಿ ನೃತ್ಯ ಸುನಿಲ್ ಕುಮಾರ್ ನೃತ್ಯ ಮಾಡಿದರು. ಕಳೆದ ಒಂದು ತಿಂಗಳಲ್ಲಿ ಕಾರ್ಕಳ ಉತ್ಸವಕ್ಕೆ ನಿರಂತರ ಶ್ರಮಪಟ್ಟ ಕಾರ್ಯಕರ್ತರ ಜೊತೆ ಸಚಿವರು ಕುಣಿದರು.
ಉತ್ಸವದ ಜೊತೆಗೆ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಜಯಭೇರಿ ಹಿನ್ನಲೆಯಲ್ಲಿಯೂ ಸಚಿವ ಸುನಿಲ್ ಕುಮಾರ್ ಅವರಲ್ಲಿ ಜೋಷ್ ಹೆಚ್ಚಾಗಿತ್ತು. ಈ ಹಿನ್ನೆಲೆಯಲ್ಲಿ ಅವರು ಪ್ರಕೃತಿಯ ವೈಭವ ಎಂಬ ಹಾಡಿಗೆ ಹೆಜ್ಜೆ ಹಾಕಿದರು. ಸಚಿವರ ಈ ಸಖತ್ ಸ್ಟೆಪ್ ಇದೀಗ ಸಾಕಷ್ಟು ವೈರಲ್ ಆಗಿದೆ.




