ಕ್ರಿಕೆಟ್ ದಿಗ್ಗಜ ಟೀಮ್ ಇಂಡಿಯಾದ ಮಾಜಿ ಕ್ಯಾಪ್ಟನ್ ವಿರಾಟ್ ಕೊಯ್ಲಿ ತಮ್ಮ ಅಭಿಮಾನಿಗಳಿಗೆ ಸಂತೋಷ ಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಿನ್ನೆ ಕ್ರಿಕೆಟ್ ಅಭಿಮಾನಿಗಳಿಗೆ ವಿಶೇಷವಾದ ದಿನವಾಗಿತ್ತು. ಭಾರತ ಮತ್ತು ಶ್ರೀಲಂಕಾ ನಡುವಿನ ಡೇ ಅಂಡ್ ನೈಟ್ ಟೆಸ್ಟ್ ಪಂದ್ಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರಂಭವಾಗಿರುವುದು ಒಂದು ಕಡೆಯಾದರೆ, ಇನ್ನೊಂದೆಡೆ ರಾಯಲ್ ಚಾಲಂಜರ್ಸ್ ಬೆಂಗಳೂರು ತಂಡದ ನೂತನ ಕಪ್ತಾನನಾಗಿ ಘೋಷಣೆ ಮಾಡಿದ ದಿನವಾಗಿತ್ತು.
ಆರ್ ಸಿ ಬಿಯ ನಾಯಕತ್ವವನ್ನು ವಿರಾಟ್ ಕೊಯ್ಲಿ ತ್ಯೆಜಿಸಿದ ನಂತರ ನೂತನ ಸಾರಥಿ ಯಾರು ಎಂಬುದು ಬಹಳಷ್ಟು ಚರ್ಚೆ ನಡೆದಿತ್ತು. ಈ ಚರ್ಚೆ ನಿನ್ನೆ ಅಂತ್ಯ ಹಾಡಲಾಗಿದ್ದು, ಫಾಫ್ ಡುಪ್ಲೆಸಿಸ್ ಯನ್ನು ಆರ್ ಸಿ ಬಿಯ ನೂತನ ಸಾರಥಿಯನ್ನಾಗಿ ಆಯ್ಕೆ ಮಾಡುವುದರ ಮೂಲಕ ಎಲ್ಲಾ ಉಹೂಪೋಹಗಳಿಗೆ ಇತಿಶ್ರೀ ಹಾಡಲಾಗಿತ್ತು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಒಂದೆಡೆ ಭಾರತ ಶ್ರೀಲಂಕಾ ನಡುವಿನ ಟೆಸ್ಟ್ ಪಂದ್ಯ ನಡೆಯುತ್ತಿದ್ದರೆ ಇನ್ನೊಂದೆಡೆ ಆರ್ ಸಿ ಬಿ, ಆರ್ ಸಿ ಬಿ ಕೂಗು ಜತೆಗೆ ವಿರಾಟ್ ವಿರಾಟ್ ಎಂಬ ಕೂಗು ಕೇಳಿಸುತ್ತಿತ್ತು. ಇದಕ್ಕೆ ಪ್ರತಿಯಾಗಿ ವಿರಾಟ್ ಕೊಯ್ಲಿ ಆರ್ ಸಿಬಿ ಅಭಿಮಾನಿಗಳ ಜತೆ ಕೆಲವು ಸನ್ನೆಗಳನ್ನು ಮಾಡುವುದರ ಮೂಲಕ ಎಂಟರಟೈನ್ ಮಾಡಿದರು.

ಇನ್ನೊಂದೆ ಎಡಿಬಿ, ಎಡಿಬಿ ಎಂಬ ಕೂಗು ಕೇಳಿಬರುತ್ತಿದ್ದಂತೆಯೇ ತಕ್ಷಣ ಡಿವಿಲಿಯರ್ಸ್ ಅವರ ಬ್ಯಾಟಿಂಗ್ ಶೈಲಿಯನ್ನು ಅನುಕರಣೆ ಮಾಡಿದರು. ಇವೆಲ್ಲದರ ನಡುವೆ ಪ್ರತಿಯೊಬ್ಬರ ಕಣ್ಣಿಗೆ ಬಿದ್ದಿದ್ದು ವಿರಾಟ್ ಧರಿಸಿದ್ದ ಟೀಮ್ ಇಂಡಿಯಾ ಜರ್ಸಿ ಒಳಗೆ ತೊಟ್ಟಿದ್ದ ಕೆಂಪು ಬಣ್ಣ ಆರ್ ಸಿಬಿ ಜರ್ಸಿ ಹೋಲುವಂತಹ ಟೀ ಶರ್ಟ್.

ಪಂದ್ಯದ ಬಿಡುವಿನ ವೇಳೆ ಮೈದಾನದಲ್ಲಿ ಕೊಯ್ಲಿ ತಾವು ತೊಟ್ಟಿದ್ದ ಜರ್ಸಿಯ ತುಣುಕನ್ನು ತೋರಿಸಿದರು. ಈ ವೀಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಅವರ ಮತ್ತು ಆರ್ ಸಿಬಿ ಅಭಿಮಾನಿಗಳ ಸಂತಸ ಇದರಿಂದ ಇನ್ನಷ್ಟು ಇಮ್ಮಡಿಗೊಂಡಿತ್ತು.
ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಹಾಗು ಸ್ಫೋಟಕ ಆರಂಭಿಕ ಆಟಗಾರ ಫಾಫ್ ಡು ಪ್ಲೆಸಸ್ ಅವರನ್ನು ಆರ್ ಸಿಬಿಯ ನೂತನ ನಾಯಕನನ್ನಾಗಿ ನಿನ್ನೆ ನಡೆದ 12th ಆರ್ಮಿ ಕಾರ್ಯಕ್ರಮದಲ್ಲಿ ಘೋಷಣೆ ಮಾಡಲಾಗಿತ್ತು. ಇದಕ್ಕೂ ಮೊದಲು ದಿನೇಶ್ ಕಾರ್ತೀಕ್, ಗ್ಲೆನ್ ಮ್ಯಾಕ್ಸ್ ವೆಲ್ ಹೆಸರುಗಳು ನಾಯಕ ಸ್ಥಾನಕ್ಕೆ ಕೇಳಿಬಂದಿತ್ತು. ಹಲವು ವರ್ಷಗಳ ಕಾಲ ಆರ್ ಸಿಬಿ ಆಟಗಾರನಾಗಿದ್ದ ಎಬಿ ಡಿವಿಲಿಯರ್ಸ್ ಈ ಬಾರಿ ಮೆಂಟರ್ ಆಗಿ ತಂಡದ ಜತೆಯಲ್ಲಿದ್ದು ತಂಡಕ್ಕೆ ಮಾರ್ಗದರ್ಶನ ಮಾಡಲಿದ್ದಾರೆ.




