APPU BIRTHDAY GIFT: ಅಪ್ಪು ಬರ್ತ್ ಡೆಗೆ ಸ್ಪೆಷಲ್ ಗಿಫ್ಟ್…! ರಸ್ತೆಗೆ ಪುನೀತ್ ರಾಜ್ ಕುಮಾರ್ ಹೆಸರು: ಬಿಬಿಎಂಪಿ ಐತಿಹಾಸಿಕ ತೀರ್ಮಾನ

ಬೆಂಗಳೂರು : ಇನ್ನೇನು ಕೆಲವೇ ದಿನಗಳಲ್ಲಿ ಅಂದರೆ ಮಾರ್ಚ್ 17 ಅಪ್ಪುವಿನ ಬರ್ತ್ ಡೇ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಹುಟ್ಟುಹಬ್ಬಕ್ಕೆ ಬಿಬಿಎಂಪಿ ಐತಿಹಾಸಿಕ‌ ತೀರ್ಮಾನವೊಂದನ್ನು ಕೈಗೊಂಡು, ಬರ್ತ್ ಡೇ ತಿಂಗಳಲ್ಲೇ ಅಪ್ಪುಗೆ ಸ್ಪೆಷಲ್ ಉಡುಗೊರೆ ನೀಡಿದೆ.
ನಾಯಂಡಹಳ್ಳಿ ಜಂಕ್ಷನ್ ನಿಂದ ಬನ್ನೇರು ಘಟ್ಟಾ ರಸ್ತೆಯ ವೆಗಾಸಿಟಿ ಮಾಲ್ ಜಂಕ್ಷನ್ ವರೆಗಿನ 12 ಕಿಮೀ ರಸ್ತೆಗೆ ಪುನೀತ್ ಹೆಸರನ್ನಿಡಲಾಗಿದೆ. ಬನಶಂಕರಿ, ಕದಿರೇನಹಳ್ಳಿ, ಸಾರಕ್ಕಿ ಸಿಗ್ನಲ್, ಜೆಪಿ ನಗರದಿಂದ ಹಾದುಹೋಗುವ ಬನ್ನೇರುಘಟ್ಟ ರಸ್ತೆಗೆ ಡಾ. ಪುನೀತ್ ರಾಜ್ ಕುಮಾರ್ ರಸ್ತೆ ಎಂದು ನಾಮಕರಣ ಮಾಡಲಾಗಿದೆ.
2 ಲೋಕಸಭಾ, 6 ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಈ ರಸ್ತೆಗೆ ಪುನೀತ್ ಹೆಸರನ್ನು ಬಿಬಿಎಂಪಿ ಆಡಳಿತಾಧಿಕಾರಿ ವತಿಯಿಂದ ಗ್ರೀನ್ ಸಿಗ್ನಲ್ ನೀಡಿದ್ದು, ಸುಮಾರು 730 ಜನರು ಪುನೀತ್ ಹೆಸರಿಡಲು ಸಹಿ ಸಂಗ್ರಹದಲ್ಲಿ ಪಾಲ್ಗೊಂಡಿದ್ದರು.

ಬನಶಂಕರಿ 2 ನೇ ಹಂತ, ಬನಶಂಕರಿ 3 ನೇ ಹಂತದ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ, ಮಧುಗಿರಿ ನಿವಾಸಿಗಳ ಸಂಘ, ಗುರುರಾಜ ಬಡಾವಣೆ ಸಂಘ, ಜೆ ಪಿ ನಗರ ನಿವಾಸಿಗಳ ಸಂಘ ಒಟ್ಟು 9 ಸಂಘಗಳಿಂದಲೂ ಬರೋಬ್ಬರಿ 1800 ಜನರು ಪುನೀತ್ ಹೆಸರಿಡಲು ಸಹಿ ಹಾಕಿದ್ದಾರೆ.

ಮಾರ್ಚ್ 30 ರಂದು ಪುನೀತ್ ರಾಜ್ ಕುಮಾರ್ ಎಂದು ರಸ್ತೆಗೆ ನಾಮಕರಣ ಮಾಡಲಾಗುವುದು ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ. ಅಂದೇ ಈ ರಸ್ತೆಯ ಎಲ್ಲ ಬೋರ್ಡ್ ಗಳು ಬದಲಾವಣೆಯಾಗಲಿವೆ, ಅಂದೇ ಕಮರ್ಷಿಯಲ್ ಅಂಗಡಿಗಳ ಬೋರ್ಡ್ ಸಹ ಒಂದೇ ದಿನದಲ್ಲಿ ಪುನೀತ್ ರಸ್ತೆ ಅಂತ ಬದಲಾಯಿಸಲು ಸೂಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

More News