ಬೆಂಗಳೂರು : ನಾನು ತಾಜ್ ವೆಸ್ಟೆಂಡ್ ಹೋಟೆಲ್ ನಲ್ಲಿ ರಾಸಲೀಲೆ ನಡೆಸಲು ಹೋಗುತ್ತಿರಲಿಲ್ಲ, ಸರ್ಕಾರಿ ಬಂಗಲೆ ಇರಲಿಲ್ಲ, ಹಾಗಾಗಿ ರೆಸ್ಟ್ ಮಾಡಲು ಹೋಗುತ್ತಿದ್ದೆ ಎಂದು ಎಂಎಲ್ ಸಿ ಸಿ.ಪಿ ಯೋಗೇಶ್ವರ್ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಕಿಡಿಕಾರಿದರು.
ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಲೂ ತಾಜ್ ವೆಸ್ಟ್ ಹೋಟೆಲ್ ಗೆ ಹೋಗುತ್ತೇನೆ, ನನ್ನದು ತೆರೆದ ಪುಸ್ತಕ ಎಂದು ಸ್ಪಷ್ಟಪಡಿಸಿದರು. ಈಗಲೂ ನನ್ನ ಜತೆ ನನ್ನ ಪಿಎ ಇರುತ್ತಾರೆ, ಅಂದು ಸಾ.ರಾ ಮಹೇಶ್ ಇರುತ್ತಿದ್ದರು ಎಂದು ತಿಳಿಸಿದರು.
ಚನ್ನಪಟ್ಟಣದಲ್ಲಿ ಮುಗಿದ ಅಧ್ಯಾಯ ಎಂದು ಯೋಗಿಶ್ವರ್ ಹೇಳುತ್ತಿದ್ದಾರೆ, ಚನ್ನಪಟ್ಟಣದಲ್ಲಿ ಕೆಲಸವೇ ಅಗಿಲ್ಲ ಅಂತ ಹೇಳಿದ್ದಾರೆ, ಚನ್ನಪಟ್ಟಣಕ್ಕೆ ಬರಲಿ, ಬಸ್ ಸ್ಟಾಂಡ್ ನಂದಾ ಕರ್ಮಕಾಂಡ. ಖಾಸಗಿ ಬಸ್ ನಿಲ್ದಾಣಕ್ಕೆ 30ಕೋಟಿ ಪ್ರಾಜೆಕ್ಟ್ ಮಾಡಿ ಎಸ್ಟಿಮೇಟ್ ಮಾಡಿದರು. ಅವನ್ಯಾರೋ ಕಂಟ್ರಾಕ್ಟರ್ ಕೈಯಲ್ಲಿ ಗುಂಡಿ ಹೊಡೆಸಿದ್ದಾನೆ. ಅದಕ್ಕೆ ನಾನು ಹಣ ಕೊಡಿಸಬೇಕಾ ಎಂದು ಏಕವಚನದಲ್ಲಿ ಯೋಗೇಶ್ವರ್ ವಿರುದ್ಧ ಕಿಡಿಕಾರಿದರು.
‘ಬಸ್ ಸ್ಟ್ಯಾಂಡ್ ಗೆ ತಗಡು ಹೊಡೆಸಿ ಇಟ್ಟಿದ್ದಾನೆ. ಅಂಬೇಡ್ಕರ್ ಭವನ ಗುಂಡಿ ಆಗೆದು, ನೀರು ನಿಂತಿದೆ, ಅದನ್ನ ನಾನು ಹೋಗಿ ಕ್ಲೀನ್ ಮಾಡಿಸಬೇಕು. ನಾನು ಕಣ್ಣೀರು ಹಾಕ್ಕೊಂಡ್ ಹೋಗಿಲ್ಲ. ಸಿಎಂ ಆಗಿದ್ದು ಚನ್ನಪಟ್ಟಣಕ್ಕೆ ಅಲ್ಲ, ಇಡೀ ರಾಜ್ಯಕ್ಕೆ. ಕರ್ನಾಟಕ ರಾಜ್ಯದ ಸಮಸ್ಯೆ ಬಗೆಹರಿಸಲು. ಚನ್ನಪಟ್ಟಣಕ್ಕೆ ಶಾಸಕನಾಗಿ ಏನು ಕೆಲಸ ಮಾಡಿಸಬೇಕೋ ಎಲ್ಲಾ ಮಾಡಿದೆ. ಇವನು ಸರ್ಟಿಫಿಕೇಟ್ ಕೊಡೋದಲ್ಲ, ಆರಿಸರೋ ಜನರು’ ಎಂದು ಕುಮಾರಸ್ವಾಮಿ ಅವರು ಯೋಗೇಶ್ವರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಮೆಗಾಸಿಟಿ ಅಂತ ಪ್ರಾಜೆಕ್ಟ್ ಮಾಡಲು ಹೋಗಿ ಸಾವಿರಾರು ಜನರನ್ನ ಬೀದಿ ಪಾಲು ಮಾಡಿದ್ದಾರೆ, ಸಿನಿಮಾ ತೆಗೆದು ಎಲ್ಲರನ್ನೂ ಹಾಳು ಮಾಡಿದ್ದಾರೆ, ಕಂಡೋರ ದುಡ್ಡು ತೆಗೆದುಕೊಂಡು ಹಾಳು ಮಾಡಿದ್ದಾರೆ, ಇವರು ನನ್ನ ವಿರುದ್ಧ ಆರೋಪ ಮಾಡ್ತಾನಾ.? ನಾನು ಯಾವುದೇ ಚರ್ಚೆಗೆ ನಾನು ಸಿದ್ಧ, ಬರಲಿ ಚನ್ನಪಟ್ಟಣದಲ್ಲೇ ಚರ್ಚೆ ಮಾಡೋಣ ಎಂದು ಸವಾಲು ಹಾಕಿದರು.
ಚನ್ನಪಟ್ಟಣದ ನಮ್ಮ ಸಂಬಂಧ ಇವನು ಚಡ್ಡಿ ಹಾಕಿದ್ನೋ ಇಲ್ಲವೋ, ಆಗಲೇ ದೇವೇಗೌಡರ ಕುಟುಂಬಕ್ಕೆ ಚನ್ನಪಟ್ಟಣ ಸಂಬಂಧ ಇತ್ತು. ಓಪನ್ ಚರ್ಚೆಗೆ ನಾನು ಸಿದ್ದ, ಬರಲಿ ಯಾವ ವಿಚಾರ ಚರ್ಚೆ ಮಾಡುತ್ತಾರೆ ನೋಡೋಣ ಎಂದು ನೇರವಾಗಿ ಸವಾಲು ಹಾಕಿದರು.




