ಬೆಂಗಳೂರು : ಹಿಜಾಬ್ ಕುರಿತು ರಾಜ್ಯ ಹೈಕೋರ್ಟ್ ನೀಡಿರುವ ತೀರ್ಪಿನ ವಿರುದ್ಧ ಸುಪ್ರೀಂಕೋರ್ಟ್ ನಲ್ಲಿ ಪ್ರಶ್ನಿಸಲು ಸಮಾಜದ ಮುಖಂಡರು ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ ಎಂದು ಸಿಎಂ ಇಬ್ರಾಹಿಂಂ, ತನ್ವೀರ್ ಸೇಠ್ ಸೇರಿದಂತೆ ಅನೇಕ ಮುಖಂಡರು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಈ ಮುಖಂಡರು ಸುದ್ದಿಗಾರರಿಗೆ ಈ ವಿಚಾರ ತಿಳಿಸಿದ ಅವರು, ನ್ಯಾಯಾಲಯದಲ್ಲಿ ಹೋರಾಟ ಮಾಡಲು ಸಶಕ್ತವಾಗಿದ್ದೇವೆ, ಭಾರತದ ನ್ಯಾಯಾಲಯದ ಮೇಲೆ ನಮಗೆ ವಿಶ್ವಾಸವಿದೆ, ಸುಪ್ರೀಂ ಕೋರ್ಟ್ ಗೆ ಒಬ್ಬೋಬ್ಬರೆ ಲಾಯರ್ ಹೋಗಬೇಡಿ, ಎಲ್ಲಾ ಒಟ್ಟಗೆ ಸುಪ್ರೀಂ ಕೋರ್ಟ್ ಗೆ ಹೋಗಿ ಎಂದು ಸಿಎಂ ಇಬ್ರಾಹಿ ತಿಳಿಸಿದರು.
ಹೈಕೋರ್ಟ್ ತೀರ್ಪುನ್ನು ನಾವು ಒಪ್ಪೋದಿಲ್ಲ, ಇದರ ವಿರುದ್ಧ ನಾವು ಸುಪ್ರೀಂ ಕೋರ್ಟ್ ಗೆ ಹೋಗುತ್ತೇವೆ, ಸುಪ್ರೀಂ ಕೊರ್ಟ್ ಗೆ ಹೋಗಬೇಡಿ ಅಂತ ಹೈಕೋರ್ಟ್ ಹೇಳಿಲ್ಲ ಎಂದು ಅವರು ತಿಳಿಸಿದರು. ಇದನ್ನ ಧರ್ಮದ ದೃಷ್ಠಿಯ ಬದಲು ಸಂವಿಧಾನದ ದೃಷ್ಟಿಯಿಂದ ನೋಡಬೇಕು, ಇಂದು ತಿಲಕ, ವಿಭೂತಿ, ಬಿಂದಿ ಇಟ್ಟುಕೊಳ್ಳೋದು ಆಯ್ಕೆಯ ವಿಚಾರವಾಗಿರುವುದರಿಂದ ಅದೇ ರೀತಿ ಹಿಜಾಬ್ ಕೂಡ ಎಂದು ಇಬ್ರಾಹಿಂ ತಿಳಿಸಿದರು.
ನಮ್ಮ ತಾಯಂದಿರು ಸೆರಗು ಹಾಕುತ್ತಾರೆ, ನಾಳೇ ಕೋರ್ಟ್ ಸೆರಗು ಹಾಕಿಕೊಳ್ಳೋದು ಬೇಡ ಎಂದು ನ್ಯಾಯಾಲಯ ಹೇಳಿದರೆ ಅದನ್ನ ಸುಪ್ರಿಂಕೋರ್ಟ್ ನಲ್ಲಿ ನಿರ್ಧರಿಸಬೇಕಾಗುತ್ತದೆ, ಅದೇ ರೀತಿ ಈ ಹಿಜಾಬ್ ವಿಚಾರ, ಯಾರು ಕೂಡ ಬೀದಿಗೆ ಇಳಿಯುವ ಅವಶ್ಯಕತೆ ಇಲ್ಲ ಎಂದು ಇದೇ ಸಂದರ್ಭದಲ್ಲಿ ಮನವಿ ಮಾಡಿದರು.
ಮುಂಬೈನ ಖ್ಯಾತ ವಕೀಲರ ಜೊತೆ ಕೂಡ ನಾನು ಮಾತನಾಡಿದ್ದೇನೆ, ಇದು ಇಲ್ಲಿಗೆ ನಿಲ್ಲೋದಿಲ್ಲ, ನಾಳೆ ಜೀನ್ಸ್ ಪ್ಯಾಂಟ್ ಹಾಕಬಾರದು ಅಂತಾರೆ, ಕೂಡಲೇ ಈ ವಿಚಾರದ ಬಗ್ಗೆ ಸರ್ಕಾರ ಮಧ್ಯಪ್ರವೇಶಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಹೈಕೋರ್ಟ್ ತೀರ್ಪು ಪ್ರಶ್ನಿಸಿ ನಾವು ಸುಪ್ರೀಂಕೋರ್ಟ್ ಗೆ ಹೋಗಲು ತೀರ್ಮಾನಿಸಿದ್ದೇವೆ ಎಂದು ಕಾಂಗ್ರೆಸ್ ಮುಖಂಡ ತನ್ವೀರ್ ಸೇಠ್ ತಿಳಿಸಿದ್ದಾರೆ. ಧರ್ಮ ರಕ್ಷಣೆ ಎಂಬುದು ಸಂವಿಧಾನದಲ್ಲಿ ಮೂಲಭೂತ ಹಕ್ಕು ಆದ್ದರಿಂದ ನಾವು ಇದನ್ನು ಉಚ್ಛನ್ಯಾಯಾಲಯದಲ್ಲಿ ಪ್ರಶ್ನಿಸುತ್ತೇವೆ ಎಂದು ತಿಳಿಸಿದ್ದಾರೆ.

ವಿದ್ಯಾರ್ಥಿ ದೆಸೆಯಿಲ್ಲಿ ಇದೆನ್ನಲ್ಲ ತಂದಿದ್ದು ತಪ್ಪು, ದೇಶವನ್ನ ಪ್ರಗತಿ ಪರವಾಗಿ ಬೆಳಸಬೇಕಾದವರು ನಾವು, ಮಕ್ಕಳಲ್ಲಿ ತಾರತಮ್ಯ ತಂದು ಐಕತ್ಯತೆಗೆ ಧಕ್ಕೆ ತರುತ್ತಿದ್ದೇವೆ, ಇದು ಆಗಬಾರದು ಎಂದು ಮನವಿ ಮಾಡಿದರು.
ಸಂಪ್ರದಾಯಗಳು ಯಾವ ಯಾವಾಗ ಬಂತು ಅಂತ ಹೇಳೋಕೆ ಆಗೋದಿಲ್ಲ, ನಿರಂತರವಾಗಿ ತ್ರಿಬಲ್ ತಲಾಖ್, ಮತಾಂತರ ಕಾಯಿದೆ, ಗೋ ಹತ್ಯೆ ನಿಷೇಧ ಇರಬಹುದು ಇವೆಲ್ಲ ಕಸಬು ಮತ್ತು ಜನಾಂಗದವರನ್ನ ಟಾರ್ಗೆಟ್ ಮಾಡಿ ಜಾರಿ ಮಾಡಿದೆ ಎಂದು ಆರೋಪಿಸಿದರು.




