ನಂಜನಗೂಡು : ಶೃದ್ಧಾ ಭಕ್ತಿ ಭಾವದಿಂದ ನಂಜನಗೂಡು ಪಂಚಮಹಾರಥೋತ್ಸವ ನಡೆದಿದ್ದು, ಸುಮಾರು 96 ಅಡಿ ಎತ್ತರದ ಬೃಹತ್ ರಥ ಎಳೆದು ಭಕ್ತರು ಪುನೀತರಾದರು.
ನಂಜನಗೂಡು ದೊಡ್ಡಜಾತ್ರೆಯಲ್ಲಿ ಭಕ್ತ ಸಾಗರ ಹರಿದುಬಂದಿದ್ದು, ದಕ್ಷಿಣಕಾಶಿ ನಂಜನಗೂಡಿನಲ್ಲಿ ನಡೆದ ದೊಡ್ಡ ಜಾತ್ರೆ ಪಂಚ ಮಹಾರಥೋತ್ಸವದ ಬೃಹತ್ ರಥಕ್ಕೆ ಭಕ್ತಾಧಿಗಳು ಹಣ್ಣು ಎಸೆದರು. ನಸುಕಿನ ಜಾವ 3.35 ರ ಶುಭ ಮಕರ ಲಗ್ನದಲ್ಲಿ ಮಹೂರ್ತದಲ್ಲಿ ಪಂಚಮಹಾರಥೋತ್ಸವ ನಡೆಯಿತು.
ಶ್ರೀಕಂಠೇಶ್ವರ ಉತ್ಸವಮೂರ್ತಿಯನ್ನ ಹೊತ್ತುಸಾಗಿದ ರಥ ನೆರೆದಿದ್ದ ಭಕ್ತರನ್ನು ಸೆಳೆದಿದ್ದು, 96 ಅಡಿ ಎತ್ತರದ ಬೃಹತ್ ರಥವನ್ನು ಭಕ್ತರು ಎಳೆದರು. ಕಳೆದ ಎರಡು ವರ್ಷಗಳ ನಂತರ ನಡೆದ ಈ ಅದ್ದೂರಿ ಜಾತ್ರೆಗೆ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತಾಧಿಗಳು ರಾಜ್ಯದ ನಾನಾ ಭಾಗದಿಂದ ಆಗಮಿಸಿ, ಇಷ್ಟಾರ್ಥ ಸಿದ್ದಿಗಾಗಿ ಪ್ರಾರ್ಥಿಸಿದರು.

ಕೊರೊನಾ ಹಿನ್ನಲೆಯಲ್ಲಿ ಆರೋಗ್ಯ ಇಲಾಖೆಯಿಂದ ಮುನ್ನೆಚ್ಚಕೆ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿತ್ತು. ದೇವಾಲಯದ ಪ್ರಧಾನ ಅರ್ಚಕರಾದ ನಾಗಚಂದ್ರ ಧೀಕ್ಷಿತ್ ಅವರ ಸಮ್ಮುಖದಲ್ಲಿ ಧಾರ್ಮಿಕ ವಿಧಿವಿಧಾನ ಕಾರ್ಯಕ್ರಮಗಳು ನಡೆದವು.




