ಬೀದರ್ : ಗಡಿ ಜಿಲ್ಲೆ ಬೀದರ್ ಜಿಲ್ಲೆಯಲ್ಲಿ ಶಿಕ್ಷಕರಿಬ್ಬರು ಸಾರ್ವಜನಿಕವಾಗಿಯೇ ಭ್ರಷ್ಟಾಚಾರದ ಹಣವನ್ನು ಹಂಚಿಕೊಳ್ಳುವ ವಿಷಯದಲ್ಲಿ ಗಲಾಟೆ ಮಾಡಿಕೊಂಡ ಘಟನೆ ನಡೆದಿದೆ.
ತಾವೇ ಶಿಕ್ಷಣ ನೀಡುತ್ತಿರುವ ಶಾಲೆಯ ಮಕ್ಕಳ ಮುಂದೆಯೇ ಬಾಯಿಗೆ ಬಂದಂತೆ ಹೊಲಸು ಪದಗಳನ್ನು ಬಳಸಿ ಜಗಳ ಮಾಡಿಕೊಂಡಿದ್ದಾರೆ. ಇದರಿಂದ ಇಬ್ಬರೂ ಶಿಕ್ಷಕರು ಶಿಕ್ಷಣ ಇಲಾಖೆ ಮರ್ಯಾದೆ ಹಾಳು ಮಾಡಿದ್ದಾರೆ ಎಂದು ಸಾರ್ವಜನಿಕರು ಶಾಪಹಾಕಿದ್ದು ಕಂಡುಬಂದಿತ್ತು.
ರಾಜ್ಯ ಸರ್ಕಾರ ಮಕ್ಕಳಿಗೋಸ್ಕರ ಹಲವು ಹತ್ತು ಹಲವು ಯೋಜನೆಗಳನ್ನು ಜಾರಿಗೆ ತರುತ್ತಿರುತ್ತದೆ. ಶಾಲೆಯಲ್ಲಿ ಮದ್ಯಾಹ್ನದ ಬಿಸಿಊಟ ಕೂಡ ಒಂದು. ಇದರೊಂದಿಗೆ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುವ ಯೋಜನೆಯೋಜನೆ ಇವಾಗ ಭ್ರಷ್ಟಾಚಾರ ತಾಂಡವ ನಡೆಯುತ್ತದೆ.

ಇದಕ್ಕೆ ಈ ಇಬ್ಬರು ಶಿಕ್ಷಕರು ನಡೆಸಿರುವ ಗಲಾಟೆಯೇ ಸಾಕ್ಷಿ. ಕೇವಲ ಆರು ಸಾವಿರ ರೂಪಾಯಿಗೋಸ್ಕರ ಮಕ್ಕಳ ಮುಂದೆ ಗಲಾಟೆ ಮಾಡಿಕೊಂಡಿದ್ದಾರೆ. ಶಿಕ್ಷಕರು ಮಕ್ಕಳಿಗೆ ಬುದ್ದಿ ಹೇಳಿ ವಿದ್ಯಾಭ್ಯಾಸ ಮಾಡುವ ಶಿಕ್ಷಕರು ಈ ರೀತಿ ಮಕ್ಕಳು ಮುಂದೆ ಗಲಾಟೆ ಮಾಡಿಕೊಂಡಿದ್ದ ಎಷ್ಟರಮಟ್ಟಿಗೆ ಸರಿ ಎಂಬ ಪ್ರಶ್ನೆ ಸ್ಥಳೀಯರಲ್ಲಿ ಕಾಡುತ್ತಿದೆ.

ಬೀದರ್ ತಾಲ್ಲೂಕ್ಕಿನ ಮರ್ಜಾಪೂರ ಗ್ರಾಮದ ಸರ್ಕಾರಿ ಹಿರಿಯ ಪ್ರಥಾಮಿಕ ಶಾಲೆಯಲ್ಲಿ ಬಿಸಿ ಊಟದ ಹಣ ಹಂಚಿಕೊಳ್ಳುವ ವಿಷಯದಲ್ಲಿ ಮುಖ್ಯಗುರು ಮಡಯ್ಯಸ್ವಾಮಿ ಮತ್ತು ಶಿಕ್ಷಕ ಶಾಂತಕುಮಾರ್ ಇಬ್ಬರೂ ಶಾಲೆಯಲ್ಲಿ ಜಗಳ ಆಡಿದ್ದಾರೆ.




