ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲುರಿ ಸೀತಾರಾಮ ರಾಜು ಮತ್ತು ಕೋಮರಾಮ್ ಭೀಮ್ ಅವರುಗಳ ಜೀವನಚರಿತೆಯನ್ನು ಸ್ಪೂರ್ತಿಯಾಗಿ ಸಿದ್ದಗೊಂಡಿರುವ ‘ಆರ್ ಆರ್ ಆರ್’ ಸಿನಿಮಾ ಸಿದ್ದಗೊಂಡಿದ್ದು, ಮಾರ್ಚ್ 25ರಂದು ತೆರೆ ಮೇಲೆ ಬರೋದಕ್ಕೆ ಸಕಲ ಸಿದ್ದತೆ ಪೂರ್ಣಗೊಂಡಿವೆ.
ಎಸ್ ಎಸ್ ರಾಜಮೌಳಿ(S S RAJAMOULI) ನಿರ್ದೇಶನದ ‘RRR’ ಸಿನಿಮಾ ಎಲ್ಲಾ ಬಾಕ್ಸ್ ಆಫೀಸ್ ನಲ್ಲಿ ಅಬ್ಬರಿಸಲಿದೆ ಸೂಚನೆ ನೀಡಿದೆ. ವಿಶ್ವದಾದ್ಯಂತ 8 ಸಾವಿರ ಚಿತ್ರಮಂದಿರಗಳಲ್ಲಿ ಚಿತ್ರ ರಿಲೀಸ್ ಆಗಲಿದ್ದು, ಒಂದೇ ದಿನ 32ಸಾವಿರ ಪ್ರದರ್ಶನಗೊಳ್ಳಲಿದೆ. ಇದರಿಂದ ಸುಮಾರು 125 ಕೋಟಿ ಚಿತ್ರದ ಕಲೆಕ್ಷನ್ ಆಗುವ ಸಾಧ್ಯತೆಗಳು ಹೆಚ್ಚಾಗಿವೆ.

ಸಿನಿಮಾ ಸೃಷ್ಟಿ ಮಾಡಿರುವ ಅಬ್ಬರವನ್ನು ನೋಡಿದರೆ ಬಾಹುಬಲಿ 2 ಚಿತ್ರದ ದಾಖಲೆಯನ್ನು ಮುರಿಯುವ ಎಲ್ಲಾ ಸಾಧ್ಯತೆಗಳಿವೆ ಎನ್ನುತ್ತಿವೆ ತೆಲುಗು ಚಿತ್ರೋದ್ಯಮ.

ಕಾಲ್ಪನಿಕ ಕಥೆಯ ಈ ಚಿತ್ರದಲ್ಲಿ ಜ್ಯೂನಿಯರ್ ಎನ್ ಟಿ ಆರ್ ಕೋಮರಾಮ್ ಭೀಮ್ ಆಗಿ ಕಾಣಿಸಿಕೊಂಡರೆ, ಅಲ್ಲುರಿ ಸೀತಾರಾಮ ಪಾತ್ರದಲ್ಲಿ ರಾಮ್ ಚರಣ್ ನಟಿಸಿದ್ದಾರೆ.




