ಕೇರಳದಿಂದ ರಾಜ್ಯಕ್ಕೆ ಆಗಮಿಸುವ ವಿದ್ಯಾರ್ಥಿಗಳಿಗೆ ಒಂದು ವಾರ ಸಾಂಸ್ಥಿಕ ಕ್ವಾರಂಟೈನ್ ಕಡ್ಡಾಯ : ಸಚಿವ.ಆರ್.ಅಶೋಕ್

ಬೆಂಗಳೂರು : ನೆರೆ ರಾಜ್ಯದಿಂದ ಕೊರೋನಾ ಹಾವಳಿ ಹೆಚ್ಚಾಗುವ ಆತಂಕ ಎದುರಾಗಿರುವ ಹಿನ್ನಲೆಯಲ್ಲಿ ಕೇರಳದಿಂದ ರಾಜ್ಯಕ್ಕೆ ಬರುವ ವಿದ್ಯಾರ್ಥಿಗಳಿಗೆ ಒಂದು ವಾರದ ಸಾಂಸ್ಥಿಕ ಕ್ವಾರಂಟೈನ್ ಹಾಗು ಕ್ವಾರಂಟೈನ್ ಮುಗಿದ ನಂತರ ಕೋವಿಡ್ ತಪಾಸಣೆ ಕಡ್ಡಾಯಗೊಳಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಸಚಿವ ಆರ್.ಅಶೋಕ್ ತಿಳಿಸಿದರು.

ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸಭೆಯ ಬಳೀಕ ಸುದ್ದಿಗಾರರೊಂದಿಗೆ ಮಾಹಿತಿ ನೀಡಿದ ಅವರು,ಮೂರನೇ ಅಲೆಯ ಭೀತಿ ಇರುವುದರಿಂದ ಕೋವಿ ಡ್ ವಿಚಾರದಲ್ಲಿ ಮುಂದಿನ ದಿನಗಳಲ್ಲಿ ಸರ್ಕಾರದ ನೀತಿ-ನಿಯಮಗಳು ಹೇಗಿರಬೇಕು ಎನ್ನುವ ಕುರಿತು ತೀರ್ಮಾನ ಕೈಗೊಳ್ಳಲಾಗಿದೆ.ಕೇರಳದಲ್ಲಿ ದಿನ ದಿನ ಕೊರೊನಾ ಪಾಸಿಟಿವ್ ಸಂಖ್ಯೆ ಹೆಚ್ಚಾಗುತ್ತಿದೆ.ಈ ದೃಷ್ಟಿಯಿಂದ ಕೇರಳದಿಂದ ಬರುವ ಎಲ್ಲಾ ವಿದ್ಯಾರ್ಥಿಗಳಿಗೂ ಒಂದು ವಾರ ಕಡ್ಡಾಯ ಸಾಂಸ್ಥಿಕ ಕ್ವಾರಂಟೈನ್ ಗೆ ಒಳಪಡಿಸಲಿದ್ದು,ಕ್ವಾರಂಟೈನ್ ಮುಗಿಸಿದವರಿಗೆ ಕಡ್ಡಾಯ ವಾಗಿ ಕೊರೊನಾ ಪರೀಕ್ಷೆ ಮಾಡಿಸಲಾಗುತ್ತದೆ.ಈ ಎರಡು ಷರತ್ತು ಗಳೊಂದಿಗೆ ಕೇರಳ ವಿದ್ಯಾರ್ಥಿ ಗಳು ರಾಜ್ಯಕ್ಕೆ ಬರಬಹುದಾಗಿದೆ.ಇಂದೇ ಆದೇಶ ಅಧಿಕೃತ ಸರ್ಕಾರಿ ಹೊರಡಿಸುತ್ತೇವೆ ಎಂದರು.

ಉಡುಪಿ,ಚಿಕ್ಕಮಗಳೂರು,ಹಾಸನ,ಶಿವಮೊಗ್ಗ,ಮೈಸೂರು,ಕೋಲಾರ,ಕಲಬುರ್ಗಿಯಲ್ಲಿ ಶೇ.1.5 ಗಿಂತ ಕಡಿಮೆ ಪಾಸಿಟಿವಿಟಿ ದರ ಇರುವ ಕಾರಣ ಈಗಾಗಲೇ ಇರುವ ಕಠಿಣ ನಿರ್ಬಂಧ ಸಡಿಲ ಮಾಡಲು ನಿರ್ಧಾರ ಮಾಡಲಾಗಿದೆ.ಉಳಿದಂತೆ ಕೊಡಗು ಮತ್ತು ದಕ್ಷಿಣ ಕನ್ನಡದಲ್ಲಿ ಕಠಿಣ ನಿರ್ಬಂಧ ಹಾಗೆಯೇ ಮುಂದುವರೆಯಲಿದೆ.ಅದೇ ರೀತಿ ಕೊಡಗು,ಹಾಸನ,ದಕ್ಷಿಣ ಕನ್ನಡ,ಉಡುಪಿ ಹೊರತುಪಡಿಸಿ ಇತರೆ ಜಿಲ್ಲೆಗಳಲ್ಲಿ ವಾರಾಂತ್ಯ ಕರ್ಫ್ಯೂ ಅನ್ನು ಸಡಿಲಿಕೆ ಮಾಡಲಾಗುತ್ತದೆ. ಕೇರಳದಲ್ಲಿ ಪಾಸಿಟಿವಿಟಿ ದರ ಶೇ. 19ಕ್ಕೆ ಏರಿದ್ದು,ಪ್ರತಿ ದಿನ 30,000 ಕೇಸು ದಾಖಲಾಗುತ್ತಿದೆ. ಹಾಗಾಗಿ ಗಡಿ ಜಿಲ್ಲೆ ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಈಗಾಗ ಲೇ ಇರುವ ಎಲ್ಲಾ ನಿರ್ಬಂಧ ಮುಂದುವರಿಯಲಿದೆ.ಕೇರಳದಿಂದ ಈ ಎರಡು ಜಿಲ್ಲೆಗಳಿಗೆ ಬರುವವರ ಸಂಖ್ಯೆ ಹೆಚ್ಚಾಗಿರುವ ಕಾರ ಣ ಕೇರಳದಿಂದ ಕರ್ನಾಟಕಕ್ಕೆ ಕೊರೊನಾ ಸೋಂಕು ತ್ವರಿತವಾಗಿ ಹರಡು ವುದನ್ನು ತಡೆಯುವ ಕಾರಣಕ್ಕಾಗಿ ನಿರ್ಬಂಧಗಳನ್ನು ಮುಂದುವರಿಸಲಾಗುತ್ತಿದೆ ಎಂದು ಅವರು ಹೇಳಿದರು.

ನೈಟ್ ಕರ್ಫ್ಯೂ : ರಾಜ್ಯಾದ್ಯಂತ ಇರುವ ನೈಟ್ ಕರ್ಫ್ಯೂ ವಿಚಾರದಲ್ಲಿ ಯಾವುದೇ ಬದಲಾವಣೆ ಇಲ್ಲ.ಬೆಂಗಳೂರು ಸೇರಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ರಾತ್ರಿ 9 ರಿಂದ ಇರುವ ರಾತ್ರಿ ಕರ್ಫ್ಯೂ ಮುಂದುವರೆಯಲಿದೆ.ಈ ಬಗ್ಗೆ ತಜ್ಞರ ಸಮಿತಿ ನೀಡುವ ಸಲಹೆಗಳನ್ನು ನೋಡಿಕೊಂಡು ಮುಂದಿನ ದಿನಗಳಲ್ಲಿ ಪರಿಷ್ಕರಣೆ ಮಾಡುವ ಯೋಚನೆ ಮಾಡಲಾಗುತ್ತದೆ ಎಂದರು.

ಕಲ್ಯಾಣ ಮಂಟಪಗಳಿಗೆ ನಿರ್ಬಂಧ ಸಡಿಲಿಕೆ : ಮದುವೆ  ಹಾಗೂ ಇತರೆ ಸಮಾರಂಭಗಳಿಗೆ ಸಂಬಂಧಪಟ್ಟಂತೆ ಕಲ್ಯಾಣ ಮಂಟಪ ದ ಮಾಲೀಕರು ಸಾಕಷ್ಟು ಮನವಿ ಮಾಡಿದ್ದರು. ಅಹವಾಲುಗಳನ್ನು ಹೇಳಿಕೊಂಡಿದ್ದರು.ಅವರ ಕಷ್ಟಗಳನ್ನೂ ದೃಷ್ಟಿಯಲ್ಲಿರಿಸಿ ಕೊಂಡು ಒಂದಷ್ಟು ರಿಯಾಯಿತಿಗಳನ್ನು ಅವರಿಗೆ ಕಲ್ಪಿಸಲಾಗುತ್ತಿದೆ.ಸಿನಿಮಾ ಮಂದಿರಗಳಿಗೆ ಶೇ. 50 ರ ಆಸನ ಭರ್ತಿಗೆ ಅವಕಾಶ ಕಲ್ಪಿಸಿದಂತೆ ಕಲ್ಯಾಣಮಂಟಪಗಳಿಗೂ ನಿರ್ಬಂಧ ಸಡಿಲಿಕೆ ಮಾಡಲು ನಿರ್ಧರಿಸಲಾಗಿದೆ.ಸಣ್ಣಪುಟ್ಟ ಕಲ್ಯಾಣ ಮಂಟಪಗಳಿಂದ ಹಿಡಿದು ದೊಡ್ಡ ದೊಡ್ಡ ಕಲ್ಯಾಣ ಮಂಟಪಗಳಿಗೆ ಇದು ಅನ್ವಯ ಅಗಲಿದೆ.ಆದರೆ ಗರಿಷ್ಠ 400 ಜನರ ಮಿತಿಯೊಂದಿಗೆ ಶೇ.50 ರ ಆಸನ ಭರ್ತಿ ವ್ಯವಸ್ಥೆಯೊಂದಿಗೆ ಮದುವೆ ಸಮಾರಂಭ ನಡೆಸಲು ನಿರ್ಬಂಧ ಸಡಿಲಿಕೆ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.

ಮೂರನೇ ಅಲೆ ಮಾಹಿತಿ ಬಂದಿಲ್ಲ: ಮೂರನೇ ಅಲೆ ಬಂದಿರುವ ಬಗ್ಗೆ ನಿಖರವಾದ ಮಾಹಿತಿ ನಮಗೆ ಇದುವರೆಗೂ ಬಂದಿಲ್ಲ.ಕೇಂ ದ್ರ ಸರ್ಕಾರವು ನಮಗೆ ಈ ಬಗ್ಗೆ ಯಾವುದೇ ಸೂಚನೆಯನ್ನು ಕೊಟ್ಟಿಲ್ಲ.ಕರ್ನಾಟಕ ರಾಜ್ಯ ಕೊರೊನಾ ನಿಯಂತ್ರಣ ಮಾಡುವ ದೃಷ್ಟಿಯಲ್ಲಿ ಸಾಕಷ್ಟು ಮುಂದಿದೆ.ಕೇರಳ ಹಾಗೂ ಮಹಾರಾಷ್ಟ್ರ ರೀತಿ ನಮ್ಮಲ್ಲಿ ಮತ್ತೆ ಕೊರೊನಾ ಹರಡಬಾರದು ಹಾಗಾಗಿ ಈಗಾಗಲೇ ಕೊರೊನಾ ನಿಯಂತ್ರಣದಲ್ಲಿ ದೇಶದಲ್ಲಿ ಒಳ್ಳೆಯ ಹೆಸರನ್ನು ನಾವು ಪಡೆದಿದ್ದೇವೆ.ಅದನ್ನು ಕಾಪಾಡಿಕೊಂಡು ಹೋಗು ವ ಕುರಿತು ಇಂದು ಚರ್ಚೆಯಾಯಿತು. ಮೂರನೆಯ ಅಲೆ ಬಗ್ಗೆಯೂ ಚರ್ಚೆಯಾಯಿತು‌.ಒಂದು ವೇಳೆ ಮೂರನೇ ಅಲೆ ಎದುರಾ ದಲ್ಲಿ ಅದನ್ನು ಹೇಗೆ ನಿಯಂತ್ರಣ ಮಾಡಬೇಕು ಎನ್ನುವ ಕುರಿತು ಚರ್ಚೆ ಮಾಡಿದ್ದೇವೆ ಎಂದರು.

ಮಾಸ್ ಲಸಿಕೆ : ಕೊರೊನಾ ಲಸಿಕೆ ವಿಚಾರದಲ್ಲಿ ಸಾಕಷ್ಟು ಚರ್ಚೆ ಮಾಡಿದ್ದೇವೆ.ಸಾಮೂಹಿಕ ರೀತಿಯಲ್ಲಿ ಕೆಲವು ಕ್ಷೇತ್ರಗಳಲ್ಲಿ ಲಸಿಕೆ ನೀಡುವ ಯೋಜನೆ ಹಾಕಿಕೊಳ್ಳಲು ನಿರ್ಧರಿಸಲಾಗಿದೆ. 5 ಸಾವಿರ,10 ಸಾವಿರ ಲಸಿಕೆ ಕೊಡಬೇಕು ಎನ್ನುವ ಯೋಚನೆ ಮಾಡುತ್ತಿದ್ದೇವೆ.ಕೇಂದ್ರ ಸರ್ಕಾರ ನಮಗೆ ಅಗತ್ಯ ಪ್ರಮಾಣದ ಲಸಿಕೆ ನೀಡಲು ಒಪ್ಪಿಕೊಂಡಿದೆ.ಹಾಗಾಗಿ ನಾವು ಲಸಿಕೆ ನೀಡುವುಕ್ಕೆ ವೇಗ ನೀಡಬೇಕು ಎಂದು ನಿರ್ಧರಿಸಿದ್ದೇವೆ ಎಂದರು.

ಸಂಕಷ್ಟ ಮುಗಿದಿದೆ : ಸಂಕಷ್ಟ ಮೊನ್ನೆ ಮುಗಿದಿದೆ.ಸಂಕಷ್ಟಹರ ಗಣಪತಿ ಬಂದ ಮೇಲೆ ನಮಗೆಲ್ಲ ಒಳ್ಳೆಯದಾಗಿದೆ.ಹಾಗಾಗಿ ಗಣಪತಿ ಹಬ್ಬಕ್ಕೆ ಎಲ್ಲ ಸಂಕಷ್ಟಗಳು ನಿವಾರಣೆಯಾಗಲಿ ಎಂದು ನಾನು ಭಾವಿಸಿದ್ದೇನೆ ಎಂದು ಹೊಸ ಸರ್ಕಾರ ರಚನೆಯಾದ ಬಗ್ಗೆ ಸಚಿವ ಅಶೋಕ್ ಪರೋಕ್ಷವಾಗಿ ವ್ಯಂಗ್ಯ ಮಾತನಾಡಿದರು.

ಜನಾಶೀರ್ವಾದ ಯಾತ್ರೆಗೆ ಇಲ್ಲದ ನಿರ್ಬಂಧ ಗಣಪತಿ ಹಬ್ಬದ ಬಗೆಗೆ ಯಾಕೆ ಎನ್ನುವ ಪ್ರಶ್ನೆಗೆ ಹಾರಿಕೆ ಉತ್ತರ ನೀಡಿದ ಸಚಿವ ಅಶೋಕ್,ನನಗೆ ತಪ್ಪು ಪ್ರಶ್ನೆಯನ್ನು ಕೇಳಿದ್ದೀರಾ? ನೀವು ಕೇಳಿರುವ ಪ್ರಶ್ನೆಯ ಪರವಾಗಿಯೇ ನಾನಿದ್ದೇನೆ.ಗಣಪತಿ ಹಬ್ಬದ ಬಗ್ಗೆ ನಮಗೆ ಬದ್ಧತೆಯಿದೆ ಗಣೇಶ ಹಬ್ಬದ ಆಚರಣೆಗೆ ಕೊರೊನಾವನ್ನು ಗಮನದಲ್ಲಿರಿಸಿಕೊಂಡು,ಕೇರಳವನ್ನು ಗಮನ ದಲ್ಲಿರಿಸಿ ಕೊಂಡು ಯಾವ ರೀತಿ ಅನುಮತಿ ಕೊಡಬಹುದು ಎಂದು ಧನಾತ್ಮಕವಾಗಿ ನಾವು ಯೋಚನೆ ಮಾಡುತ್ತಿದ್ದೇವೆ ಎಂದು ಹೇಳುವ ಮೂಲಕ ರಾಜಕೀಯ ಸಭೆ,ಸಮಾರಂಭ,ಚುನಾ ವಣಾ ಪ್ರಚಾರವನ್ನು ಅವರು ಸಮರ್ಥಿಸಿಕೊಂಡರು.

More News