POLICE TOPPANGUCHI DANCE: ಕಿಕ್ಕೇರಿಸುವ ಹಾಡಿಗೆ ಟಪ್ಪಾಂಗುಚ್ಚಿ ಸ್ಟೆಪ್ಸ್… ಕೊಳ್ಳೇಗಾಲ ಪೊಲೀಸರ ಮಸ್ತ್-ಮಸ್ತ್ ಡ್ಯಾನ್ಸ್ ವೈರಲ್

ಚಾಮರಾಜನಗರ: ಕಿಕ್ಕೇರಿಸುವ ಹಾಡಿಗೆ ಪೊಲೀಸರು ಮಸ್ತ್ ಮಸ್ತ್ ಸ್ಟೆಪ್ಸ್ ಹಾಕಿರುವ ಘಟನೆ ಕಳೆದ ಒಂದು ವಾರದ ಹಿಂದೆ ನಡೆದಿದ್ದು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ಲಾಗಿದೆ.
ಹೌದು‌‌‌…ಕೊಳ್ಳೇಗಾಲ ಠಾಣೆಗಳಲ್ಲಿ ಇತ್ತೀಚೆಗೆ ವರ್ಗಾವಣೆಗೊಂಡಿದ್ದ ಸಿಪಿಐ ಶ್ರೀಕಾಂತ್, ಪಿಎಸ್ಐಗಳಾದ ತಾಜುದ್ದೀನ್ ಹಾಗೂ ಅಶೋಕ್ ಅವರಿಗೆ ಗುಂಡಾಲ್ ನಲ್ಲಿ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಕೊಳ್ಳೇಗಾಲ ಡಿವೈಎಸ್ಪಿ ಸೇರಿದಂತೆ ಆ ಭಾಗದ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ.

ಖಾಸಗಿಯಾಗಿ ನಡೆದಿದ್ದ ಈ ಕಾರ್ಯಕ್ರಮದಲ್ಲಿ ಪೊಲೀಸ್ ಸಿಬ್ಬಂದಿ, ಆಪ್ತ ಬಳಗ ಪಾಲ್ಗೊಂಡಿತ್ತು ಎಂದು ತಿಳಿದುಬಂದಿದ್ದು ಸಮಾರಂಭದಲ್ಲಿ ಭಾಗಿಯಾಗಿದ್ದವರೊಬ್ವರೇ ವೀಡಿಯೋ ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಂಚಿ ವೈರಲ್ ಮಾಡಿದ್ದಾರೆ.

ಇನ್ನು, ಸಂಬಂಧ ಪೊಲೀಸ್ ವರಿಷ್ಠಾಧಿಕಾರಿ ಟಿ.ಪಿ.ಶಿವಕುಮಾರ್ ವಿಡಿಯೋಗಳನ್ನು ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

More News