ಚಿಕ್ಕಬಳ್ಳಾಪುರ: ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಜಿ ವಿ ಶ್ರೀರಾಮರೆಡ್ಡಿ ನಿಧನರಾಗಿದ್ದಾರೆ, ಪಾರ್ಶ್ವವಾಯು ಪೀಡಿತರಾಗಿರುವ ಇವರು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.
ಬಾಗೇಪಲ್ಲಿ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕಳೆದ ಹಲವಾರು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದು, ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಸಿಪಿಐಎಂ ಪಕ್ಷದಿಂದ ಎರಡು ಬಾರಿ ಶಾಸಕರಾಗಿದ್ದ ಜಿ ವಿ ಶ್ರೀರಾಮರೆಡ್ಡಿ, ಇತ್ತೀಚೆಗೆ ಸಿಪಿಎಂ ಪಕ್ಷ ತೊರೆದು ಪ್ರಜಾ ಸಂಘರ್ಷ ಸಮಿತಿ ಪಕ್ಷ ಕಟ್ಟಿದ್ದರು.
ನೀರಾವರಿ ಹೋರಾಟ ಸೇರಿದಂತೆ ಹಲವಾರು ಬೃಹತ್ ಹೋರಾಟಗಳ ಮೂಲಕ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದಿದ್ದ ಜಿವಿಎಸ್, ಸದಾ ಕಾರ್ಮಿಕರ ಪರವಾದ ಹೋರಾಟಗಳನ್ನು ಮಾಡುತ್ತಿದ್ದರು. ಜಿ ವಿ ಶ್ರೀರಾಮರೆಡ್ಡಿ ನಿಧನದಿಂದ ರಾಜ್ಯ, ರಾಷ್ಟ್ರ ನಾಯಕರ ಕಂಬನಿ ಮಿಡಿದಿದ್ದಾರೆ.





