ಶಿವಮೊಗ್ಗ : ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಕೆ.ಎಸ್ ಈಶ್ವರಪ್ಪನವರ ಶಿವಮೊಗ್ಗದ ನಿವಾಸಕ್ಕೆ ಹಿಂದುಳಿದ ದಲಿತ ಮಠಾಧೀಶರ ಒಕ್ಕೂಟದ ನಿಯೋಗ ಭೇಟಿ ಮಾಡಿ ಸುದೀರ್ಘವಾಗಿ ಚರ್ಚೆ ನಡೆಸಿದರು.
ನಿಯೋಗದಲ್ಲಿ ಅನೇಕ ಸ್ವಾಮೀಜಿಗಳು ಭಾಗವಹಿಸಿದ್ದರಲ್ಲದೆ, ಈಶ್ವರಪ್ಪ ಅವರಿಗೆ ಸಮಾಧಾನದ ಮಾತುಗಳನ್ನು ಆಡಿದರು. ಹಾಗೆಯೇ ಮುಂದಿನ ವಿಚಾರಗಳ ಕುರಿತು ಮತ್ತು ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ಕುರಿತು ಸುದೀರ್ಘವಾಗಿ ಚರ್ಚೆ ನಡೆಸಿದರು.

ಹಿಂದುಳಿದ ದಲಿತ ಮಠಾಧೀಶರ ಒಕ್ಕೂಟ (ರಿ) ಚಿತ್ರದುರ್ಗ, ಜಗದ್ಗುರು ಶ್ರೀ ನಿರಂಜನಾನಂದಪುರಿ ಮಹಾಸ್ವಾಮೀಜಿ ಕನಕಗುರುಪೀಠ, ಜಗದ್ಗುರು ಡಾ.ಶ್ರೀ ಶಾಂತವೀರ ಮಹಾಸ್ವಾಮಿಜಿ ಶ್ರೀ ಜಗದ್ಗುರು ಕುಂಚಿಟಿಗ ಮಹಾಸಂಸ್ಥಾನ ಮಠ ಹೊಸದುರ್ಗ, ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಮಹಾಸ್ವಾಮಿಜಿ ಭೋವಿಗುರುಪೀಠ ಚಿತ್ರದುರ್ಗ, ಜಗದ್ಗುರು ಶ್ರೀ ಮಾದರಚನ್ನಯ್ಯ ಮಹಾಸ್ವಾಮಿಜಿ ಮಾದರ ಚನ್ನಯ್ಯ ಗುರುಪೀಠ ಚಿತ್ರದುರ್ಗ, ಜಗದ್ಗುರು ಶ್ರೀ ಪುರುಷೋತ್ತಮನಾಂದಪುರಿ ಮಹಾಸ್ವಾಮಿಜಿ ಭಗೀರಥ ಪೀಠ, ಪರಮಪೂಜ್ಯ ಶ್ರೀ ಈಶ್ವರಾನಂದಪುರಿ ಮಹಾಸ್ವಾಮಿಜಿ ಕನಕಗುರುಪೀಠ ಹೊಸದುರ್ಗ, ಜಗದ್ಗುರು ಶ್ರೀ ರೇಣುಕಾನಂದ ಮಹಾಸ್ವಾಮಿಜಿ ನಾರಾಯಣ ಗುರುಪೀಠ ಶಿವಮೊಗ್ಗ, ಜಗದ್ಗುರು ಶ್ರೀ ಬಸವಮಾಚಿದೇವ ಮಹಾಸ್ವಾಮಿಜಿ ಮಡಿವಾಳ ಗುರುಪೀಠ ಚಿತ್ರದುರ್ಗ ಪಾಲ್ಗೊಂಡಿದ್ದರು.






