SWAMIJI ALLIGATION: ಯಾರಿಗೆ ಎಷ್ಟು ಪರ್ಸೆಂಟೇಜ್ ನೀಡಲಾಗಿದೆ ದಾಖಲೆ ಕೊಡಲಿ: ತನಿಖೆ ನಡೆಸಲಾಗುವುದು: ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು : ದಿಂಗಾಲೇಶ್ವರ ಸ್ವಾಮೀಜಿಗಳು ಅತ್ಯಂತ ಉತ್ತಮ ಸ್ವಾಮೀಜಿ, ದೊಡ್ಡ ತಪಸ್ವಿಗಳು, ಒಳ್ಳೆಯ ಹಿನ್ನೆಲೆ ಉಳ್ಳವರು, ಎಲ್ಲಿ, ಯಾರಿಗೆ ಎಷ್ಟು ಪರ್ಸೆಂಟೇಜ್ ಕೊಟ್ಟಿದ್ದಾರೆ ಅಂತ ದಾಖಲೆ ಕೊಡಲಿ, ಸಂಪೂರ್ಣ ತನಿಖೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವರ ಮಾತಿಗೆ ಬೆಲೆ ಕೊಡುತ್ತೇವೆ, ಯಾವ ಮಠಾಧೀಶರು ಯಾರಿಗೆ ಎಲ್ಲಿ ಎಷ್ಟು ಕೊಟ್ಟಿದ್ದಾರೆ ದಾಖಲೆ ಕೊಡಲಿ, ಅದರ ಆಳಕ್ಕೆ ಹೋಗಿ, ಸಂಪೂರ್ಣ ತನಿಖೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಪ್ರತಿಯೊಂದಕ್ಕೂ ಮುಖ್ಯಮಂತ್ರಿ ದಾಖಲೆ ಕೇಳುತ್ತಿದ್ದಾರೆ. ಆದರೆ, ಸರ್ಕಾರದ ಅನೇಕ ಏಜೆನ್ಸಿಗಳು ಏನು ಮಾಡುತ್ತಿವೆ, ಆರೋಪದ ಬಗ್ಗೆ ತನಿಖೆ ನಡೆಸಿ ಸತ್ಯವನ್ನು ಬಯಲು ಮಾಡಬಹುದಲ್ಲ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.
ಈ ವಿಚಾರ ಸಂಬಂಧ ಸಚಿವ ಮುರುಗೇಶ್ ನಿರಾಣಿ ಮಾತನಾಡಿದ, ಯಾರೇ ಏನು ಅಪಾದನೆ ಮಾಡಿದರೂ ಅದಕ್ಕೆ ತಲೆಕಡೆಸಿಕೊಳ್ಳಲು ಆಗೋದಿಲ್ಲ, ಸರಿ ಇತ್ತು ಅಂದ್ರೆ ಅದಕ್ಕೆ ಉತ್ತರ ಹೇಳಬಹುದು, ನಮ್ಮ ಕಣ್ಣಿಗೆ ಕಾಣಿಸೋ ರೀತಿ ಯಾವುದೇ ಪರ್ಸೆಂಟೆಜ್ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶ
ರಾಜ್ಯದ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿ ಸಭೆಯು ಇಂದು ಮುಖ್ಯಮಂತ್ರಿ ನೇತೃತ್ವದಲ್ಲಿ ನಡೆದಿದ್ದು, ಶೀಘ್ರದಲ್ಲೇ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

ಇಂದು ನಡೆದ ಸಭೆಯಲ್ಲಿ 11,500 ಕೋಟಿ ರೂಪಾಯಿ ಯೋಜನೆಗಳಿಗೆ ಮಂಜೂರಾತಿ ನೀಡಲಾಗಿದೆ. ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ ಪೂರ್ವಭಾವಿಯಾಗಿ ಕೆಲಸ ನಡೆಸುತ್ತಿದೆ, ಮೂಲ ಸೌಕರ್ಯಗಳ ಒದಗಿಸುವುದು, ಅಕ್ಕಪಕ್ಕದ ರಾಜ್ಯಗಳಲ್ಲಿ ನೀತಿ ನಿಯಮ ಹೇಗಿದೆ ಎನ್ನುವುದನ್ನು ಚರ್ಚೆ ಮಾಡಲಾಗಿದೆ ಎಂದು ತಿಳಿಸಿದರು.

More News