ಬೆಂಗಳೂರು : PSI ಪರೀಕ್ಷೆ ಅಕ್ರಮ ಪ್ರಕರಣದಲ್ಲಿ ಭಾಗಿಯಾಗಿರುವ ಬಿಜೆಪಿ ಮುಖಂಡರಾದ ದಿವ್ಯಾ ಹಾಗರಗಿಯನ್ನು ಬಿಜೆಪಿಯ ಹಿರಿಯ ಮುಖಂಡರು ಕಾಪಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಅಜಯ್ ಸಿಂಗ್ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗ ಮಾತನಾಡಿದ ಅವರು, ಆರೋಪಿ ದಿವ್ಯಾ ಹಾಗರಗಿ ಬಿಜೆಪಿಯ ಮಹಿಳಾ ಘಟಕದ ಕಲಬುರಗಿ ಮುಖಂಡರಾಗಿದ್ದಾರೆ, ಅವರು ಈಗಾಗಲೇ ನಾಪತ್ತೆಯಾಗಿದ್ದು, ಆಕೆಯ ಪತಿಯನ್ನು ಬಂಧಿಸಿದ್ದಾರೆ. ಆದರೂ ಕೂಡ ನಾಪತ್ತೆಯಾಗಿರುವ ದಿವ್ಯಾಳನ್ನು ಪತ್ತೆ ಹಚ್ಚುವ ಕೆಲಸ ತುರ್ತಾಗಿ ನಡೆಯುತ್ತಿಲ್ಲ ಎಂದು ಆರೋಪಿಸಿದರು.
ಕಲಬುರಗಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಮುಂದಾಗಿರುವ ದಿವ್ಯಾಳನ್ನು ಸರ್ಕಾರ ಪ್ರೊಟೆಕ್ಟ್ ಮಾಡುತ್ತಿದೆ ಎಂದು ಕಿಡಿಕಾರಿದರು. ಇಡೀ ದೇಶದಲ್ಲಿ ಬೆಂಗಳೂರು ಅಂದರೆ ಸಿಲಿಕಾನ್ ಸಿಟಿ ಅಂತ ಖ್ಯಾತಿ ಪಡೆದಿತ್ತು. ಈ ಬಿಜೆಪಿ ಸರ್ಕಾರದಿಂದ ಕರೆಪ್ಸನ್ ಕ್ಯಾಪಿಟಲ್ ಆಫ್ ಇಂಡಿಯಾ ಅಂತ ಬಿರುದು ಪಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
40% ಕಮಿಷನ್ ನಿಂದ ಗುತ್ತಿಗೆದಾರರೊಬ್ಬರ ಪ್ರಾಣ ಹೊಯಿತು, ಮಠಕ್ಕೆ ಕೊಡುವ ಅನುದಾನಲ್ಲೂ ಕಮಿಷನ್ ತಗೋತಾರೆ ಅಂದರೆ ಯಾವ ಮಟ್ಟದಲ್ಲಿ ಸರ್ಕಾರ ಆಡಳಿತ ನಡೆಸುತ್ತಿದೆ ಎನ್ನುವುದಕ್ಕೆ ಸಾಕ್ಷಿ ಎಂದು ಆರೋಪಿಸಿದರು.

ಜನ ಸಾಮಾನ್ಯರು ಈ ಭ್ರಷ್ಟ ಸರ್ಕಾರವನ್ನು ಕಿತ್ತು ಒಗೆಯಲು ಕಾಯುತ್ತಿದ್ದು, ದಿವ್ಯಾ ಹಾಗರಗಿ ಸಂಬಂಧಿಸಿದಂತೆ ಪೊಲೀಸರ ಬಳಿ ಸಂಪೂರ್ಣ ಮಾಹಿತಿ ಇದೆ, ಹೀಗಾಗಿ ದಿವ್ಯಾಳನ್ನು ಅರೆಸ್ಟ್ ಮಾಡಲೇ ಬೇಕು, ಇಲ್ಲ ಅಂದ್ರೆ ರಾಜ್ಯದಲ್ಲಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದರು.

ಈಗಾಗಲೇ 10 ದಿನ ಆಗಿದೆ ದಿವ್ಯಾಳನ್ನು ಪತ್ತಹಚ್ಚಿಲ್ಲ, ಬಿಜೆಪಿ ಮುಖಂಡರು ಆಗಿರುವುದಕ್ಕೆ ಹಿಡಿಯುತ್ತಿಲ್ಲ ಎಂದು ಆರೋಪಿಸಿದ ಅವರು, ಇದರಲ್ಲಿ ಇನ್ನು ಯಾವ ಬಿಜೆಪಿ ನಾಯಕರ ಕೈವಾಡ ಇದೆ ಎನ್ನುವುದು ತನಿಖೆಯಿಂದ ಹೊರಬರಬೇಕಾಗಿದೆ, ಹಾಗೆಯೇ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.




