30% COMMISSION ALLIGATION: 30% ಕಮಿಷನ್ ಆರೋಪ: ದಿಂಗಾಲೇಶ್ವರ ಸ್ವಾಮೀಜಿ ವಿರುದ್ಧ ಸಿಡಿದೆದ್ದ ದಲಿತ ಮಠಾಧೀಶರು: ಸರ್ಕಾರ ಪರ ಬ್ಯಾಟಿಂಗ್

ಚಿತ್ರದುರ್ಗ : ರಾಜ್ಯ ಸರ್ಕಾರ ಮಠಗಳಿಗೆ ನೀಡಿರುವ ದೇಣಿಗೆಯಲ್ಲಿ ಶೇಕಡಾ 30% ರಷ್ಟು ಕಮಿಷನ್ ಪಡೆದಿದೆ ಎಂಬ ದಿಂಗಾಲೇಶ್ವರ ಸ್ವಾಮೀಜಿ ಅವರ ಆರೋಪದ ವಿರುದ್ದ ಹಿಂದುಳಿದ ದಲಿತ ಮಠಾಧೀಶರ ಒಕ್ಕೂಟ ಸಿಡಿದೆದ್ದಿದ್ದು, ರಾಜ್ಯ ಸರ್ಕಾರದ ಪರವಾಗಿ ಬ್ಯಾಟಿಂಗ್ ನಡೆಸಿದೆ.
ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹಿಂದುಳಿದ ದಲಿತ ಮಠಾಧೀಶರ ಒಕ್ಕೂಟದ ಅಧ್ಯಕ್ಷರಾದ ಕಾಗಿನೆಲೆ ನಿರಂಜನಾನಂದಪುರಿ ಸ್ವಾಮೀಜಿ, ಸರ್ಕಾರ ನಮಗೆ ಅನುದಾನ ಕೊಟ್ಟಿದೆ. ದಾಖಲೆ ಕೊಟ್ಟರೆ ಮಾತ್ರ ಅನುದಾನ ಕೊಡೋದು. ಸುಖಾ ಸುಮ್ಮನೆ ಅನುದಾನ ಕೊಡಲ್ಲ. ಅಧಿಕಾರಿಗಳಾಗಲಿ, ರಾಜರಕಾರಣಿಗಳಾಗಲಿ ನಮ್ಮ ಬಳಿ ಕಮಿಷನ್ ಕೇಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ನಾವು ಯಾವುದೇ ಕಾರಣಕ್ಕೂ ಯಾರಿಗೂ ಹಣ ಕೊಟ್ಟಿಲ್ಲ. ಕೊಡುವುದು ಇಲ್ಲ. ದಿಂಗಾಲೇಶ್ವರ ಸ್ವಾಮೀಜಿ ಅವರು ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದ್ದು ಎಂದು ಸುದ್ದಿಗೋಷ್ಟಿಯಲ್ಲಿ ಹಾಜರಿದ್ದ ಭಗೀರಥ ಶ್ರೀ ಕಾಗಿನೆಲೆ ಶ್ರೀ, ಮಾದಾರ ಶ್ರೀ, ಬೋವಿ ಶ್ರೀ, ಕುಂಚಿಟಿಗ ಶ್ರೀ, ಗಾಣಿಗ ಶ್ರೀ, ಕುಂಬಾರ ಶ್ರೀ, ಅಂಬಿಗರ ಶ್ರೀ ಹೇಳಿದ್ದಾರೆ.

ಯಾವುದೇ ಮುಖ್ಯಮಂತ್ರಿಗಳು, ಅಧಿಕಾರಿಗಳು, ರಾಜಕಾರಣಿಗಳು ನಯಾಪೈಸೆ ಕಮಿಷನ್ ಅಥವಾ ಲಂಚ ಪಡೆದಿಲ್ಲ.

ಅಂತಹ ಪ್ರಮೇಯ ಬಂದರೆ ಅನುದಾನ ವಾಪಾಸ್ ನೀಡುತ್ತೇವೆ, ಇಲ್ಲ ಭಕ್ತರ ಮನೆಗೆ ಹೋಗಿ ಭಿಕ್ಷೆ ಎತ್ತಿ ಮಠ ಕಟ್ಟುತ್ತೇವೆ ಎಂದು ಸ್ವಾಮೀಜಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

More News