MYSORE SANDLE SOAP: ಮೈಸೂರು ಸ್ಯಾಂಡಲ್ ಸೋಪ್ ಕಾರ್ಖಾನೆಯಲ್ಲೂ 40% ಕಮಿಷನ್ ದಂಧೆ: KS&DL ಕಾರ್ಮಿಕ ಒಕ್ಕೂಟ ಆರೋಪ

ಬೆಂಗಳೂರು: ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ಮತ್ತೊಂದು ಕಮಿಷನ್ ದಂಧೆ ವ್ಯವಹಾರ ಬಯಲಾಗಿದೆ. ಅತೀ ಪುರಾತನ ಮತ್ತು ಪ್ರತಿಷ್ಠಿತ ಮೈಸೂರು ಸ್ಯಾಂಡಲ್ ಸೋಪ್ ಕಾರ್ಖಾನೆಯಲ್ಲೂ ಕಮಿಷನ್ ದಂಧೆ ನಡೆದಿದೆ ಎಂದು KS&DL ಕಾರ್ಮಿಕ ಒಕ್ಕೂಟದ ಮುಖಂಡ ಜಿ ಆರ್ ಶಿವಶಂಕರ್ ಗಂಭೀರ ಆರೋಪ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾರ್ಖಾನೆಯಲ್ಲಿ 40% ಕಮಿಷನ್ ದಂಧೆ ನಡೆಯುತ್ತಿದೆ, ಶ್ರೀಗಂಧ ಎಣ್ಣೆ ಖರೀದಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆ ನಿರ್ಮಾಣದಲ್ಲೂ ಗೋಲ್ ಮಾಲ್ ನಡೆದಿದ್ದು, ಕಮಿಷನ್ ದಂಧೆ ನಿರಂತರವಾಗಿ ನಡೆದಿದೆ ಎಂದು ಆರೋಪಿಸಿದ್ದಾರೆ.
ಸರ್ಕಾರದ ಬ್ಲಾಕ್ ಲಿಸ್ಟ್ ನಲ್ಲಿರುವ ಕಂಪನಿಗಳ ಜೊತೆ ಕೋಟಿ ಕೋಟಿ ವ್ಯವಹಾರ ನಡೆಸಿ ಕೋಟಿಗಟ್ಟಲೇ ಅಕ್ರಮ, ಭ್ರಷ್ಟಾಚಾರ ನಡೆಸಿದ್ದಾರೆ ಎಂದು KS&DL ಎಂಪ್ಲಾಯಿಸ್ ಯೂನಿಯನ್ ದಾಖಲೆ ಬಿಡುಗಡೆ ಮಾಡಿದೆ. KS&DL ನ ಎಂ.ಡಿ ಮಹೇಶ್ ಶಿರೂರ ವಿರುದ್ಧ ನೇರವಾಗಿ ಅವರು ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ.
ಕಳೆದ ಎರಡು ವರ್ಷಗಳಿಂದ ಭ್ರಷ್ಟಾಚಾರದಲ್ಲಿ ತೊಡಗಿರುವ ಎಂ.ಡಿ ಶಿರೂರ ಅವರು, ಮಾರುಕಟ್ಟೆ ದರಕ್ಕಿಂತ ಮೂರು ಪಟ್ಟು ಹೆಚ್ಚು ಹಣಕ್ಕೆ ಶ್ರೀಗಂಧ ಎಣ್ಣೆ ಮಾರಾಟ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಬ್ಲಾಕ್ ಲಿಸ್ಟ್ ನಲ್ಲಿರುವ ಕಂಪನಿಗಳ ಜೊತೆಗೂ ಶಿರೂರ ವ್ಯವಹಾರ ಮಾಡಿದ್ದಾರೆಂದು ಆರೋಪಿಸಿದರು.
ಪ್ರತಿಮೆ ನಿರ್ಮಾಣದಲ್ಲೂ ಶೇ.40 ಕ್ಕಿಂತ ಹೆಚ್ಚು ಕಮಿಷನ್ ಪಡೆದಿದ್ದಾರೆ, 1 ಕೆಜಿ ಶ್ರೀಗಂಧಕ್ಕೆ 1 ಲಕ್ಷ ಹಣ ಹೆಚ್ಚುವರಿ ಕೊಟ್ಟು 2 ಸಾವಿರ ಕೆಜಿ ಶ್ರೀಗಂಧ ಎಣ್ಣೆ ಖರೀದಿ ಮಾಡಲಾಗಿದೆ ಎಂದು ಆರೋಪಿಸಿದ ಅವರು, KS&DL ನಲ್ಲಿ ನಡೆದ ಈ ಬೃಹತ್ ಹಗರಣವನ್ನು ಎಸಿಬಿ ತನಿಖೆಗೆ ವಹಿಸಬೇಕೆಂದು ಆಗ್ರಹಿಸಿದರು.

ಯಾವುದೆಲ್ಲಾ ಹಗರಣಗಳು ನಡೆದಿದೆ..!?

  • KS&DL ಶ್ರೀಗಂಧ ಎಣ್ಣೆಯನ್ನ ಆಸ್ಟ್ರೇಲಿಯಾದಿಂದ ಮಧ್ಯಮ ವ್ಯಕ್ತಿಗಳಿಂದ ಖರೀದಿ
  • ಆಸ್ಟ್ರೇಲಿಯಾದಿಂದ ಪ್ರತಿ ಕೆಜಿಗೆ 2,49,899 ರೂ. ಗಳಿಗೆ ಅದಿತಿ ಇಂಟರ್ ನ್ಯಾಷನಲ್, ಮುಂಬೈ ಹಾಗೂ ಕರ್ನಾಟಕ ಆರೋಮ ಬೆಂಗಳೂರು ಸಂಸ್ಥೆಯಿಂದ ಖರೀದಿಸಲಾಗಿದೆ
    ಇದ್ರಲ್ಲಿ 100% ಕಮಿಷನ್ ನಡೆದಿದೆ ಎಂದು ಆರೋಪ
  • ಕೃಷ್ಣರಾಜೇಂದ್ರ ಓಡೆಯರ್ ರ ಪ್ರತಿಮೆಯನ್ನ 13 ಲಕ್ಷ ಹಣದಲ್ಲಿ ನಿರ್ಮಾಣಕ್ಕೆ ಅಸ್ತು. ಆದ್ರೆ 13 ಲಕ್ಷಕ್ಕೆ ಕಿಕ್ ಬ್ಯಾಕ್ ಪಡೆಯಲಾಗಿದೆ ಎಂದು ಆರೋಪ
  • ಬ್ಲಾಕ್ ಲಿಸ್ಟ್ ನಲ್ಲಿರುವ ಬೆಂಗಳೂರಿನ ಆರೋಮಾ, ಕರ್ನಾಟಕ ಕೆಮಿಕಲ್ ಇಂಡಸ್ಟ್ರಿ ಕಂಪನಿಯಿಂದಲೇ ಶ್ರೀಗಂಧದ ಎಣ್ಣೆಯನ್ನ ಅಕ್ರಮವಾಗಿ ಕಮಿಷನ್ ಮೂಲಕ ಖರೀದಿ ಮಾಡಲಾಗಿದೆ
    KS&DL ಗೆ ಬೇಕಿರುವ ನ್ಯೂಡಲ್ಸ್, ಶ್ರೀಗಂಧ ಎಣ್ಣೆಯನ್ನ 250 ಕೋಟಿ ಅವ್ಯವಹಾರ
  • ಅನಿವಾರ್ಯ ಇಲ್ಲದಿದ್ದರೂ ಹೊರ ಗುತ್ತಿಗೆ ಆಧಾರದಲ್ಲಿ ಸಿಬ್ಬಂದಿಗಳ ನೇಮಕ ಮಾಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

More News