UP CM ORDER: ಯುಪಿ ಸಿಎಂ ಯೋಗಿ ಆದಿತ್ಯನಾಥ್ ಆದೇಶ: ದೇಗುಲ ಮಸೀದಿಗಳಲ್ಲಿನ ಧ್ವನಿವರ್ಧಕಗಳನ್ನು ತೆಗೆಯುತ್ತಿರುವ ಪೊಲೀಸರು

ಉತ್ತರಪ್ರದೇಶ : ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕ್ರಾಂತಿಕಾರಿ ಹೆಜ್ಜೆಯನ್ನಿಟ್ಟಿದ್ದಾರೆ. ಅವರು ನೀಡಿರುವ ಆದೇಶದ ಮೇರೆಗೆ ರಾಜ್ಯಾದ್ಯಂತ ಧಾರ್ಮಿಕ ಪ್ರದೇಶಗಳಲ್ಲಿ ಹಾಕಲಾಗಿದ್ದ ನೂರಾರು ಸಂಖ್ಯೆಯ ಧ್ವನಿವರ್ಧಕಗಳನ್ನು ಮತ್ತು ಲೌಡ್ ಸ್ವೀಕರ್ ಗಳನ್ನು ಪೊಲೀಸರು ತೆಗೆದುಹಾಕುತ್ತಿದ್ದಾರೆ.
ಉತ್ತರಪ್ರದೇಶ ರಾಜ್ಯದ ಪೊಲೀಸರು ಇದನ್ನು ತಿಳಿಸಿದ್ದು, ದೇಗುಲ ಮತ್ತು ಮಸೀದಿಗಳಲ್ಲಿನ ಮುಖಂಡರ ಮನವೊಲಿಸಿ ಅಲ್ಲಿನ ಲೌಡ್ ಸ್ವೀಕರ್ ಗಳನ್ನು ಪೊಲೀಸರ ಸರ್ಪಗಾವಲಿನಲ್ಲಿ ಅವುಗಳನ್ನು ತೆಗೆದುಹಾಕಲಾಗುತ್ತಿದೆ.
ಜಹಾಂಗೀರ್ ಪುರಿಯಲ್ಲಿ ಹನುಮಜಯಂತಿ ಕಾರ್ಯಕ್ರಮ ಸಂದರ್ಭದಲ್ಲಿ ನಡೆದ ಗಲಭೆ ನಂತರ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದರಿಂದ ಪೊಲೀಸರು ಇವುಗಳನ್ನು ತೆಗೆಯುತ್ತಿದ್ದಾರೆ. ಅನುಮತಿ ಪಡೆದು ಹಾಕಲಾಗಿತ್ತಾದರೂ ಅವು ನ್ಯಾಯಾಲಯದ ತೀರ್ಪಿನ ವಿರುದ್ಧವಾಗಿದ್ದರಿಂದ ಅವುಗಳನ್ನು ತೆಗೆದುಹಾಕಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹೊಸದಾಗಿ ಮೈಕ್ ಅಳವಡಿಸಲು ಯಾರಿಗೂ ಅವಕಾಶ ನೀಡಬಾರದು ಎಂದು ಮುಖ್ಯಮಂತ್ರಿ ಆದೇಶ ನೀಡಿದ್ದರು. ಮುಂಬರುವ ದಿನಗಳಲ್ಲಿ ಈದ್ ಹಾಗೂ ಅಕ್ಷಯ ತೃತೀಯಾ ಹಬ್ಬಗಳು ಬರುತ್ತಿರುವ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಗಲಭೆಗೆ ಅವಕಾಶ ನೀಡಬಾರದು ಎಂಬ ಉದ್ದೇಶ ಇದರದ್ದಾಗಿದೆ ಎಂದು ಹೇಳಲಾಗಿದೆ.

ಉತ್ತರಪ್ರದೇಶ ಪೊಲೀಸರ ಈ ಕ್ರಮಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದ್ದು, ಧಾರ್ಮಿಕ ಮುಖಂಡರು ಕೂಡ ಇದನ್ನು ಸ್ವಾಗತಿಸಿದ್ದಾರೆ. ಮದುವೆ ಮುಂತಾದ ಸಮಾರಂಭಗಳಲ್ಲಿ ಧವ್ನಿವರ್ಧಕಗಳ ಶಬ್ಧ ಎಷ್ಟಿರಬೇಕು ಎನ್ನುವುದನ್ನು ಪೊಲೀಸರು ನಿರ್ಧರಿಸಿ ಈ ಸಂಬಂಧ ಅವರು ಕರಪತ್ರವನ್ನು ಹಂಚುತ್ತಿದ್ದಾರೆ.

More News