PSI RECRITMENT SCAM DETAINED LIST: ಪಿಎಸ್‌ಐ ಪರೀಕ್ಷೆ ನೇಮಕಾತಿ ಪ್ರಕರಣ: ಇದುವರೆಗೂ ಬಂಧನಕ್ಕೊಳಗಾದವರ ವಿವರ ಹೀಗಿದೆ

ಬೆಂಗಳೂರು: PSI ನೇಮಕಾತಿ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿತ್ತು. ನಿನ್ನೆಯವರೆಗೆ ತಲೆಮರೆಸಿಕೊಂಡಿದ್ದ, ಕಿಂಗ್ ಪಿನ್ ಹಾಗೂ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ವಶಕ್ಕೆ ಪಡೆಯುವುದರ ಮೂಲಕ ಒಟ್ಟು 23 ಜನರನ್ನು ಬಂಧಿಸಲಾಗಿದೆ.
ಸುಮಾರು 55 ಸಾವಿರ ಜನರು ಪರೀಕ್ಷೆ ಬರೆದಿದ್ದು, ಇಷ್ಟೊಂದು ದೊಡ್ಡ ಮಟ್ಟದ ಹಗರಣವನ್ನು ಪೊಲೀಸರು ಕೊನೆಗೂ ಭೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದರಿಂದ ಇನ್ನು ಅನೇಕ ಅಧಿಕಾರಿಗಳು ಮತ್ತು ರಾಜಕಾರಣಿಗಳ ಎದೆಬಡಿತ ಹೆಚ್ಚಾಗಿದೆ.
ಈ ಪ್ರಕರಣದಲ್ಲಿ ಇನ್ನು ಹಲವಾರು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಭಾಗಿಯಾಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ. ಜನಸಾಮಾನ್ಯರ ಬದುಕಿನೊಡನೆ ಚೆಲ್ಲಾಟವಾಡಿದ ಪ್ರತಿಯೊಬ್ಬರನ್ನು ಕಂಬಿ ಹಿಂದೆ ಕಳುಹಿಸಬೇಕೆಂಬುದು ಸಾರ್ವಜನಿಕರ ವಾದವಾಗಿದೆ.
ಬಂಧಿತರಾದ ಆರೋಪಿಗಳ ಪಟ್ಟಿ ಈ ರೀತಿ ಇದೆ.
1 ಆರ್ ಡಿ ಪಾಟೀಲ್ ಕಿಂಗ್‌ಪಿನ್ ಆರೋಪ
2 ಮಹಾಂತೇಶ್ ಪಾಟೀಲ್ ಕಿಂಗ್‌ಪಿನ್ ಆರೋಪ
3 ದಿವ್ಯಾ ಹಾಗರಗಿ ಜ್ಞಾನಜ್ಯೋತಿ ಶಾಲೆಯ ಒಡೆತಿ & ಬಿಜೆಪಿ ನಾಯಕಿ, ಕಿಂಗ್ ಪಿನ್ ಆರೋಪ
4 ರಾಜೇಶ್ ಹಾಗರಗಿ ದಿವ್ಯಾ ಪತಿ ಹಾಗೂ ಜ್ಞಾನಜ್ಯೋತಿ ಶಾಲೆ ಅಧ್ಯಕ್ಷ
5 ವೀರೇಶ್ ಅಭ್ಯರ್ಥಿ
6 ಹಯ್ಯಾಳಿ ದೇಸಾಯಿ ಅಭ್ಯರ್ಥಿ
7 ವಿಶಾಲ್ ಅಭ್ಯರ್ಥಿ
8 ಎನ್ ವಿ ಸುನೀಲ್ ಅಭ್ಯಾರ್ಥಿ
9 ಪ್ರವೀಣ್ ಅಭ್ಯರ್ಥಿ
10 ಅರುಣ್ ಅಭ್ಯರ್ಥಿ
11 ಚೇತನ್ ನಂದಗಾಂವ್ ಅಭ್ಯರ್ಥಿ
12 ಅರ್ಚನಾ ಜ್ಞಾನಜ್ಯೋತಿ ಶಾಲೆ ಶಿಕ್ಷಕಿ
13 ಸುನೀತಾ ಜ್ಞಾನಜ್ಯೋತಿ ಶಾಲೆ ಶಿಕ್ಷಕಿ
14 ಮಲ್ಲಿಕಾರ್ಜುನ ಪಾಟೀಲ್ ಸಹಾಯ ಮಾಡಿದವನು
15 ರುದ್ರಗೌಡ ಪಾಟೀಲ್ ಸಿಆರ್ ಪೇದೆ ಹಾಗೂ ಮಧ್ಯವರ್ತಿ
16 ಶರಣಬಸಪ್ಪ ಅಭ್ಯರ್ಥಿಗಳಿಗೆ ಸಹಾಯ ಮಾಡಿದವನು
17 ಜ್ಯೋತಿ ಪಾಟೀಲ್ ಮಧ್ಯವರ್ತಿ
18 ಸುಮಾ ಪರೀಕ್ಷಾ ಮೇಲ್ವಿಚಾರಕಿ
19 ಸಿದ್ದಮ್ಮ ಪರೀಕ್ಷಾ ಮೇಲ್ವಿಚಾರಕಿ
20 ಸಾವಿತ್ರಿ ಪರಿಕ್ಷಾ ಮೇಲ್ವಿಚಾರಕಿ
21 ಸುರೇಶ್ ಕಾಟೇಗಾಂವ್ ದಿವ್ಯಾ ಹಾಗರಗಿಗೆ ರಕ್ಷಣೆ ನೀಡಿದವ
22 ಕಾಳಿದಾಸ ಸುರೇಶ್ ಕಾಟೇಗಾಂವ್ ಸಹಚರ ದಿವ್ಯಾಗೆ ಸಹಾಯ ಮಾಡಿದವ
23 ಸದ್ದಾ ಹುಸೇನ್ ದಿವ್ಯಾ ಹಾಗರಗಿ ಕಾರು ಚಾಲಕ

More News