POLITICIAN BECOME SPIRITUAL LEADER: ಬ್ರಹ್ಮಚರ್ಯ ದೀಕ್ಷೆ ಪಡೆದ ಬಿಎಸ್ ಯಡಿಯೂರಪ್ಪ ಪರಮಾಪ್ತ ಮಾಜಿ ಸಚಿವ ಬಿ ಜೆ ಪುಟ್ಟಸ್ವಾಮಿ

ಬೆಂಗಳೂರು : ಲೌಖಿಕ ಜೀವನ‌ತೊರೆದು ಸನ್ಯಾಸದತ್ತ ಪಾದವಿರಿಸಿದ ಬಿಜೆಪಿ ನಾಯಕ, ಮಾಜಿ ಸಚಿವ ಬಿ ಜೆ ಪುಟ್ಟಸ್ವಾಮಿ. ಅವರು ಗಾಣಿಗ ಗುರುಪೀಠದ ಮೊದಲ ಪೀಠಾಧಿಪತಿಯಾಗಿ ಇದೇ ತಿಂಗಳ 15ರಂದು ಅಧಿಕಾರ ಸ್ವೀಕಾರ ಮಾಡಲಿದ್ದಾರೆ.
ಬೆಂಗಳೂರಿನ ರಾಜಾರಾಜೇಶ್ವರಿ ದೇಗುಲದಲ್ಲಿ ಬ್ರಹ್ಮಚರ್ಯ ದೀಕ್ಷೆ ಪಡೆದ ಬಿ.ಜೆ.ಪುಟ್ಟಸ್ವಾಮಿ ಅವರು, ಕೈಲಾಸ ಆಶ್ರಮದಲ್ಲಿ ಬ್ರಹ್ಮಚರ್ಯ ದೀಕ್ಷೆ ಪಡೆದರು. ಶ್ರೀ ಜಯೇಂದ್ರ ತೀರ್ಥಪುರಿ ಶ್ರೀಗಳಿಂದ ಬ್ರಹ್ಮೋಪದೇಶ ಪಡೆದ ಅವರು, ಇದೇ ೧೫ ರಂದು ಸನ್ಯಾಸದೀಕ್ಷೆ ಸ್ವೀಕರಿಸಲಿದ್ದಾರೆ.
ಬಿ ಜೆ ಪುಟ್ಟಸ್ವಾಮಿ ಅವರು ಇನ್ನು ಮುಂದೆ ಪುಣ್ಯಾನಂದಪುರಿಗಳಾಗಿ ಪದಗ್ರಹಣ ಮಾಡಲಿದ್ದು, ಕಳೆದ ೪ ದಶಕಗಳಿಂದ ಸಕ್ರೀಯ ರಾಜಕಾರಣದಲ್ಲಿದ್ದರು. ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ ಪರಮಾಪ್ತರಾಗಿದ್ದ ಇವರು, ಸಚಿವರು, ಯೋಜನಾ ಆಯೋಗದ ಉಪಾಧ್ಯಕ್ಷರು ಆಗಿದ್ದರು.

ಪ್ಲೀಸ್ ಲೈಕ್, ಶೇರ್ ಮತ್ತು ಸಬ್ಸ್ ಕ್ರೈಬ್ ಆಗಿ….

ಕಳೆದ ಮೂರು ದಿನಗಳ ಹಿಂದೆಯಷ್ಟೇ ಅವರು ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಇದೀಗ ಪುಟ್ಟಸ್ವಾಮಿ ಅವರು ಗಾಣಿಗ ಗುರುಪೀಠದ ಮೊದಲ ಪೀಠಾಧಿಪತಿಯಾಗಲಿದ್ದಾರೆ.

More News