BJP LEADERS ARRENGED NANGANCH: ಕರಗ ಮಹೋತ್ಸವದಲ್ಲಿ ನಂಗಾನಾಚ್ ಡ್ಯಾನ್ಸ್ ಆಯೋಜನೆ ಮಾಡಿ ಬಿಜೆಪಿ ಮುಖಂಡರು

ಕೋಲಾರ: ಚುನಾವಣೆಗಳು ಹತ್ತಿರವಾಗುತ್ತಿದ್ದಂತೆ ಗ್ರಾಮೀಣ ಪ್ರದೇಶದ ಮತದಾರರನ್ನು ಸೆಳೆಯಲು ರಾಜಕೀಯ ಪಕ್ಷಗಳು ನಾನಾ ತಂತ್ರಗಳನ್ನು ಮಾಡುವುದು ಸಹಜ. ಅದೇ ರೀತಿಯಲ್ಲಿ ಚುನಾವಣೆಗೆ ಇನ್ನೂ ಆರು ತಿಂಗಳ ಇರುವಂತೆ ಬಿಜೆಪಿಯ ಮುಖಂಡರು ಭರ್ಜರಿಯಾಗಿ ಕರಗ ಮಹೋತ್ಸವದಲ್ಲೇ ನಂಗಾನಾಚ್ ಆಯೋಜಿಸಿ, ನೆರೆದಿದ್ದ ಭಕ್ತಾಧಿಗಳ ಮನತಣಿಸಿದ್ದಾರೆ.
ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಮಾಸ್ತಿ ಗ್ರಾಮದಲ್ಲಿ ನಿನ್ನೆ ಕರಗ ಮಹೋತ್ವವ ನಡೆಯುತ್ತಿತ್ತು. ಸಾವಿರಾರು ಭಕ್ತಾಧಿಗಳು ಈ ಮಹೋತ್ಸವದಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆದು ಪುನೀತರಾಗಿದ್ದರು. ಆದರೆ, ಸ್ಥಳೀಯ ಬಿಜೆಪಿ ಮುಖಂಡರಾದ ಹೂಡಿ ವಿಜಯ್ ಕುಮಾರ್ ಎಂಬುವವರು ನಂಗಾನಾಚ್ ಅನ್ನು ಆಯೋಜಿಸಿದ್ದರು.

ಮಾಸ್ತಿ ಗ್ರಾಮದಲ್ಲಿ ಅದ್ದೂರಿ ಕರಗ ಮಹೋತ್ಸವದ ನಂತರ ನಂಗಾನಾಚ್ ನಲ್ಲಿ ಯುವತಿಯೊಬ್ಬಳು ಅರೆಬರೆ ಬಟ್ಟೆತೊಟ್ಟು ಡ್ಯಾನ್ಸ್ ಮಾಡಿದ್ದು, ಅಲ್ಲಿ ನೆರೆದಿದ್ದವರನ್ನು ಆಕರ್ಷಿಸಿತ್ತು. ಆದರೆ, ಅನೇಕರ ಕೋಪಕ್ಕೆ ಗುರಿಯಾಗಿದೆ.

ರಾಜ್ಯ ಹಾಗೂ ರಾಷ್ಟೀಯ ಬಿಜೆಪಿ ನಾಯಕರ ಬ್ಯಾನರ್ ಅನ್ನು ಸ್ಟೇಜ್ ನಲ್ಲಿ ಹಾಕಿ ಅದರ ಮುಂದೆ ಬಿಜೆಪಿ ಶಾಲುಅನ್ನು ಹಾಕಿ ಯುವತಿಯ ಡ್ಯಾನ್ಸ್ ನ ಸವಿಯನ್ನು ಬಿಜೆಪಿ ಮುಖಂಡರು ಸವಿಯುತ್ತಿದ್ದರು, ಇದೀಗ ಈ ಡ್ಯಾನ್ಸ್ ತೀವ್ರ ವೈರಲ್ ಆಗಿದ್ದು, ದೇವರ ಉತ್ಸವ ಸಂದರ್ಭದಲ್ಲಿ ಈ ಡ್ಯಾನ್ಸ್ ನಡೆಸಿರುವುದು ಅನೇಕರ ಕಣ್ಣು ಕೆಂಪಾಗಿದೆ. ಹಾಗೂ ಆಯೋಜಕರಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.

More News