ನವದೆಹಲಿ: ನಾನಾ ರೀತಿಯಲ್ಲಿ ಬೆಲೆ ಎರಿಕೆಯ ಬಿಸಿಯಿಂದ ತತ್ತರಿಸುತ್ತಿರುವ ಜನಸಾಮಾನ್ಯರಿಗೆ ಇಂದು ಕೇಂದ್ರ ಸರ್ಕಾರ ಮತ್ತೊಂದು ಶಾಕ್ ನೀಡಿದೆ. ಅಡುಗೆ ಅನಿಲ ಸಿಲಿಂಡರ್(Domestic gas) ಬೆಲೆಯನ್ನು 50 ರೂಪಾಯಿ ಹೆಚ್ಚಳ ಮಾಡಲಾಗಿದ್ದು, ಈ ಹೊಸ ದರ ಇಂದಿನಿಂದಲೇ ಜಾರಿಯಾಗಲಿದೆ.
ಪ್ರಸ್ತುತ ಇಂದಿನಿಂದ 14.2 ಕೆ ಜಿ ಪ್ರತಿ ಗ್ಯಾಸ್ ಸಿಲಿಂಡರ್ ವೊಂದಕ್ಕೆ 999.50 ರೂಪಾಯಿ ಏರಿಕೆಯಾಗಲಿದೆ. ಈ ಮೂಲಕ ಕಳೆದ ಎರಡು ತಿಂಗಳಲ್ಲಿ ಎರಡನೇ ಬಾರಿ ಬೆಲೆ ಏರಿಕೆಯಾದಂತಾಗಿದೆ. ಕಳೆದ ವಾರ ವಾಣಿಜ್ಯ ಎಲ್ ಪಿ ಪಿ ಗ್ಯಾಸ್ ಬೆಲೆ 102.50 ಏರಿಕೆ ಕಂಡಿತ್ತು.
ಕಳೆದ ಮಾರ್ಚ್ ನಲ್ಲಿ ಗೃಹ ಬಳಕೆ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಕಂಡಿತ್ತು. ನಂತರ ಏಪ್ರಿಲ್ ನಲ್ಲಿ ಯಾವುದೇ ಬದಲಾವಣೆಯಾಗಲಿಲ್ಲ.

ಈಗ ಇದು ಬೆಲೆ ಏರಿಕೆ ಕಂಡಿದ್ದು, ಜನಸಾಮಾನ್ಯರ ಬದುಕು ದುಸ್ಥರವಾಗಲಿದೆ. ಕಳೆದ ವಾರ ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆ ಏರಿಕೆಯಾಗಿದ್ದರಿಂದ ಹೊಟೇಲ್ ಗಳಲ್ಲಿ ತಿಂಡಿ ಊಟದ ಬೆಲೆಯೂ ಏರಿಕೆ ಕಂಡಿತ್ತು.




