IPS ಅಧಿಕಾರಿ ವರ್ತಿಕಾ ಕಟಿಯಾರ್ ವಿರುದ್ದ ಪತಿಯಿಂದ ದೂರು

ಬೆಂಗಳೂರು : IPS ಅಧಿಕಾರಿ ವರ್ತಿಕಾ ಕಟಿಯಾರ್ ವಿರುದ್ದ ಅವರ ಪತಿ ನಿತೀನ್ ಸುಭಾಷ್ ರವರು ರಾಜ್ಯ ಮುಖ್ಯ ಕಾರ್ಯದರ್ಶಿ ಅವರಿಗೆ ದೂರು ಸಲ್ಲಿಸಿದ್ದಾರೆ. CS ಪಿ.ರವಿ ಕುಮಾರ್ ಗೆ ಅವರಿಗೆ ಭೇಟಿ ಮಾಡಿ IFS ಅಧಿಕಾರಿ ನಿತೀನ್ ಸುಭಾಷ್ ಯಿಯೋಲಾ ನೀಡಿದ್ದಾರೆ.

ಬರೋಬ್ಬರಿ 10 ಕಾರಣಗಳನ್ನು ನೀಡಿ ಸುಭಾಷ್ ಅವರು ದೂರು ನೀಡಿದ್ದಾರೆ. CCS ರೂಲ್ಸ್ ಉಲ್ಲಂಘನೆ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಹಿರಿಯ ಅಧಿಕಾರಿಗಳ ಅನುಮತಿ ಇಲ್ಲದೇ ವಿದೇಶ ಪ್ರವಾಸ ಮಾಡಿದ್ದಾರೆ. ಕೆಲವೊಮ್ಮೆ ಅನುಮತಿ ಪಡೆದ ದಿನಗಳಿಗಿಂತ ಹೆಚ್ಚು ದಿನ ಉಳಿದುಕೊಂಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ವರ್ತಿಕಾ ಅವರು 10 ಬಾರಿ ವಿವಿಧ ದೇಶಗಳಿಗೆ ಪ್ರವಾಸಕ್ಕೆ ಹೋಗಿದ್ದಾರೆ. ಆಫ್ಘಾನಿಸ್ತಾನ, ಶ್ರೀಲಂಕಾ, ಸ್ವಿಜರ್ ಲ್ಯಾಂಡ್, ಆಸ್ಟ್ರೀಯಾ, ಇಟಲಿ ಸೇರಿದಂತೆ ಅನೇಕ ದೇಶಗಳಿಗೆ ಹೋಗಿದ್ದಾರೆ ಎಂದು ಆರೋಪಿಸಿರುವ ಅವರು 2014 ರಿಂದ 2019 ರಲ್ಲಿ ಅವರು ಪ್ರವಾಸ ಕೈಗೊಂಡಿದ್ದಾರೆ ಎಂಬ ದಾಖಲಾತಿ ಸಲ್ಲಿಸಿದ್ದಾರೆ.

ವರ್ತಿಕಾ ಕಟಿಯಾರ್ ಅವರು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಾರೆ, ಸಿಟ್ಟು ಕಂಟ್ರೋಲ್ ಮಾಡಲಾಗದ ಸ್ಥಿತಿ ತಲುಪಿಸಿದ್ದಾರೆ, ಇದಕ್ಕಾಗಿ 2017 ರಿಂದ ನಿಮಾನ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಅಸ್ವಸ್ಥತೆ ಮತ್ತು ಸ್ಕಿಜೋಫ್ರೇನಿಯಾ ಕಾಯಿಲೆಯಿಂದ ಬಳಲುತ್ತಿರುವ ಅವರು, ತನ್ನ ಅಧೀನದಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಜೀವ ಬೆದರಿಕೆ ಹಾಕಿದ್ದಾರೆ. ಆಕೆಗೆ ಪ್ರಮುಖ ಜವಾಬ್ದಾರಿ ನೀಡುವ ಮುನ್ನ ಒಮ್ಮೆ ಅಲೋಚಿಸಿ ಎಂದು ಮುಖ್ಯಕಾರ್ಯದರ್ಶಿ ಅವರಿಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.

More News