ಬೆಂಗಳೂರು : ಅದಾನಿ ಗ್ರೂಪ್ ದೇಶದಲ್ಲಿನ ಅನೇಕ ಬ್ಯಾಂಕ್ ಗಳಿಗೆ, ಸರ್ಕಾರಗಳಿಗೆ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ರಾಷ್ಟ್ರದಲ್ಲಿ ಅತೀ ಹೆಚ್ಚು ಋಣಿಯಾಗಿರಬೇಕಾಗಿದೆ ಎಂದು ಸುಪ್ರೀಂಕೋರ್ಟ್ ಖ್ಯಾತ ವಕೀಲರಾದ ಪ್ರಶಾಂತ್ ಭೂಷಣ್ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಮ್ಮ ಅಧಿಕೃತ ಟ್ವೀಟರ್ ಖಾತೆಯಲ್ಲಿ ಅದಾನಿ ಗ್ರೂಪ್ ಸಂಬಂಧ ಪೋಸ್ಟರ್ ವೊಂದನ್ನು ಪ್ರಕಟಿಸಿ, ಕೇಂದ್ರ ಸರ್ಕಾರ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ಕಿಡಿಕಾರಿದ್ದಾರೆ. ಪೋಸ್ಟರ್ ನಲ್ಲಿ ಅವರು, ಅದಾನಿ ಗ್ರೂಪ್ ನ ಒಟ್ಟು ಬ್ಯಾಂಕ್ ಬ್ಯಾಲೆನ್ಸ್ 26,000 ಕೋಟಿ, ಆದರೆ, ಕಂಪನಿಗಳ ಸಾಲವು ಇದೇ ಮಾರ್ಚ್ ತಿಂಗಳ ಅಂತ್ಯಕ್ಕೆ 2.22 ಶತಕೋಟಿಗೆ ತಲುಪಿದೆ. ಇದು ಸಾಲದ ಹೊಸ ಮೈಲಿಗಲ್ಲು ಎಂದು ಪ್ರಶಾಂತ್ ಭೂಷಣ್ ವಿವರಿಸಿದ್ದಾರೆ.

ಒಂದು ವೇಳೆ ಮುಂದೊಂದು ದಿನ ಈ ಮನುಷ್ಯ(ಗೌತಮ್ ಅದಾನಿ) ಭಾರತ ದೇಶವನ್ನು ಬಿಟ್ಟು ಓಡಿಹೋದರೆ ರಾಷ್ಟ್ರದ ಬ್ಯಾಂಕಿಂಗ್ ವಲಯ ಸಂಪೂರ್ಣವಾಗಿ ಪತನಗೊಳ್ಳಲಿದೆ ಎಂದು ಪ್ರಶಾಂತ್ ಭೂಷಣ್ ಪೋಸ್ಟರ್ ನಲ್ಲಿ ತಿಳಿಸಿದ್ದಾರೆ.





