ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ 13,385 ಕೋಟಿ ಸಹಾಯ ಧನ ಬಿಡುಗಡೆ

ನವದೆಹಲಿ : ವೆಚ್ಚಇಲಾಖೆ,ಹಣಕಾಸು ಸಚಿವಾಲಯವು ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ಅನು ದಾನವು ಸಹಾಯಧನವಾಗಿದ್ದು 25 ರಾಜ್ಯಗಳಿಗೆ ರೂ 13,385.70 ಕೋಟಿಯನ್ನು ಬಿಡುಗಡೆ ಮಾ ಡಿದೆ.ಈ ಸಹಾಯ ಧನವು 2021-22 ವರ್ಷ ಅನುದಾನದ 1 ನೇ ಕಂತಾಗಿದೆ.15ನೇ ಹಣಕಾಸು ಆಯೋಗದ ಶಿಫಾರಸಿನಂತೆ ಅನುದಾನ ಬಿಡುಗಡೆ ಮಾಡಲಾಗಿದೆ.

ಎರಡು ಪ್ರಮುಖ ಸೇವೆಗಳನ್ನು ಸುಧಾರಿಸಲು ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ (ಆರ್‌ಎಲ್‌ಬಿ) ಸಹಾಯಾನುಧನ ಬಿಡುಗಡೆ ಮಾಡಲಾಗಿದೆ.(ಎ) ಬಯಲು ಶೌಚ ಮುಕ್ತ (ಒಡಿಎಫ್) ಸ್ಥಿತಿಯ ನೈರ್ಮಲ್ಯ ಮತ್ತು ನಿರ್ವಹಣೆ ಮತ್ತು (ಬಿ)ಕುಡಿಯುವ ನೀರು ಪೂರೈಕೆ,ಮಳೆ ನೀರು ಕೊಯ್ಲು ಮತ್ತು ನೀರಿನ ಮರು ಬಳಕೆ ಪಂಚಾಯತ್ ರಾಜ್ ಸಂಸ್ಥೆಗಳಿಗೆ ಹಂಚಿಕೆಯಾದ ಒಟ್ಟು ಅನುದಾನ ದಲ್ಲಿ, ಶೇಕಡ 60 ಸಹಾಯ ಧನವಾಗಿದೆ.ಕುಡಿಯುವ ನೀರು ಪೂರೈಕೆ,ಮಳೆನೀರು ಕೊಯ್ಲು ಮತ್ತು ನೈರ್ಮಲ್ಯದಂತಹ ರಾಷ್ಟ್ರೀ ಯ ಆದ್ಯತೆಗಳಿಗಾಗಿ ಇದನ್ನು ಮೀಸಲಿಡಲಾಗಿದೆ.ಉಳಿದ ಶೇಕಡ 40 ಸಹಾಯಧವಲ್ಲದ ನಿಧಿಯಿಂದ ಆಗಿದ್ದು.ಸಂಬಳ ಪಾವತಿ ಯನ್ನು ಹೊರತುಪಡಿಸಿ, ನಿರ್ದಿ ಷ್ಟ ಸ್ಥಳದ ಅಗತ್ಯಗಳಿಗಾಗಿ ಪಂಚಾಯಿತ್ ರಾಜ್ ಸಂಸ್ಥೆಗಳ ನಿರ್ಣಯದಂತೆ ಬಳಸಿಕೊಳ್ಳಬೇಕು.

ಕೇಂದ್ರ ಪ್ರಾಯೋಜಿತ ಯೋಜನೆಗಳ ಅಡಿಯಲ್ಲಿ ನೈರ್ಮಲ್ಯ ಮತ್ತು ಕುಡಿಯುವ ನೀರಿಗಾಗಿ ಕೇಂದ್ರ ಮತ್ತು ರಾಜ್ಯದಿಂದ ಮಂಜೂರಾದ ನಿಧಿಯ ಮೇಲೆ ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ಹೆಚ್ಚುವರಿ ನಿಧಿಯ ಲಭ್ಯತೆಯನ್ನು ಖಾತ್ರಿಪಡಿಸುವುದು ಸಹಾಯ ಧನದ ಉದ್ದೇಶವಾಗಿದೆ.ರಾಜ್ಯಗಳು ಕೇಂದ್ರ ಸರ್ಕಾರದಿಂದ ಸ್ವೀಕರಿಸಿದ 10 ಕೆಲಸದ ದಿನಗಳಲ್ಲಿ ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ಅನುದಾನವನ್ನು ವರ್ಗಾಯಿಸಬೇಕಾಗುತ್ತದೆ.10 ಕೆಲಸದ ದಿನಗಳನ್ನು ಮೀರಿದ ಯಾವುದೇ ವಿಳಂಬಕ್ಕೆ ರಾಜ್ಯ ಸರ್ಕಾರಗಳು ಬಡ್ಡಿಯೊಂದಿಗೆ ಅನುದಾನವನ್ನು ಬಿಡುಗಡೆ ಮಾಡಬೇಕಾಗುತ್ತದೆ.

ರಾಜ್ಯವಾರು ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಅನುದಾನದ ವಿವರ :

ಸಂಖ್ಯೆ ರಾಜ್ಯದ ಹೆಸರು 31-08-2021 ರಂದು ಬಿಡು ಗಡೆಯಾದ ಆರ್‌ಎಲ್‌ಬಿ ಅನುದಾನದ ಮೊತ್ತ (ಕೋಟಿ ರೂ.) 2021-22 ರಲ್ಲಿ ಇಲ್ಲಿಯವರೆಗೆ ಬಿಡುಗಡೆಯಾದ ಒಟ್ಟು ಆರ್‌ಎಲ್‌ಬಿ ಅನುದಾನ (ಕೋಟಿ ರೂ.)

ರಾಜ್ಯವಾರು ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಅನುದಾನದ ವಿವರ :

ಸಂಖ್ಯೆರಾಜ್ಯದ ಹೆಸರು31-08-2021 ರಂದು ಬಿಡು ಗಡೆಯಾದ ಆರ್‌ಎಲ್‌ಬಿ ಅನುದಾನದ ಮೊತ್ತ (ಕೋಟಿ ರೂ.)2021-22 ರಲ್ಲಿ ಇಲ್ಲಿಯವರೆಗೆ  ಬಿಡುಗಡೆಯಾದ ಒಟ್ಟು  ಆರ್‌ಎಲ್‌ಬಿ ಅನುದಾನ (ಕೋಟಿ ರೂ.)
1ಆಂಧ್ರಪ್ರದೇಶ581.7969.50
2ಅರುಣಾಚಲ ಪ್ರದೇಶ51142.75
3ಅಸ್ಸಾಂ355.8593.00
4ಬಿಹಾರ1112.71854.50
5ಛತ್ತೀಸ್‌ಗಢ322.5537.50
6ಗುಜರಾತ್708.61181.00
7ಹರಿಯಾಣ280.5467.50
8ಹಿಮಾಚಲ ಪ್ರದೇಶ95.1158.50
9ಜಾರ್ಖಂಡ್374.7624.50
10ಕರ್ನಾಟಕ713.11188.50
11ಕೇರಳ360.9601.50
12ಮಧ್ಯಪ್ರದೇಶ883.21472.00
13ಮಹಾರಾಷ್ಟ್ರ1292.12153.50
14ಮಣಿಪುರ39.365.50
15ಮಿಜೋರಾಂ20.734.50
16ಒರಿಸ್ಸಾ500.7834.50
17ಪಂಜಾಬ್307.8860.00
18ರಾಜಸ್ಥಾನ856.22392.50
19ಸಿಕ್ಕಿಂ9.315.50
20ತಮಿಳುನಾಡು799.82783.23
21ತೆಲಂಗಾಣ409.5682.50
22ತ್ರಿಪುರ42.370.50
23ಉತ್ತರ ಪ್ರದೇಶ2162.43604.00
24ಉತ್ತರಾಖಂಡ127.5212.50
25ಪಶ್ಚಿಮ ಬಂಗಾಳ978.31630.50
 Total13,385.7025,129.98

More News

You cannot copy content of this page