Rakesh Tikait: ರಾಕೇಶ್ ಸಿಂಗ್ ಟಿಕಾಯತ್ ಮೇಲೆ ಮಸಿ ಬಳಿದು ಹಲ್ಲೆ ನಡೆಸಿದ ಯುವಕ: ಜೈ ಮೋದಿ ಎಂದ ಯುವಕ: ಕುರ್ಚಿಯಲ್ಲಿ ಹೊಡೆದಾಡಿದ ಗುಂಪು

ಬೆಂಗಳೂರು : ಕಿಡಿಗೇಡಿ ಯುವಕನೊಬ್ಬ ರೈತ ಮುಖಂಡ ರಾಕೇಶ್ ಟಿಕಾಯತ್ ಮುಖಕ್ಕೆ ಮಸಿ ಬಳಿದು ಹಲ್ಲೆ ನಡೆಸಿದ್ದರಿಂದ ಇಡೀ ಗಾಂಧಿ ಭವನ ಇಂದು ಅಕ್ಷರಶಹ ರಣಾರಂಗವಾಗಿತ್ತು.
ಬೆಂಗಳೂರಿನ ಗಾಂಧಿ ಭವನದಲ್ಲಿ ಇಂದು ರೈತ ಸಂಘದ ವತಿಯಿಂದ ಕಾರ್ಯಕ್ರಮ ನಡೆಯುತ್ತಿತ್ತು. ಈ ಕಾರ್ಯಕ್ರಮಕ್ಕೆ ರೈತ ಮುಖಂಡ ರಾಕೇಶ್ ಸಿಂಗ್ ಟಿಕಾಯತ್, ಯದುವೀರ್ ಸಿಂಗ್, ಪ್ರೊ.ರವಿವರ್ಮ ಕುಮಾರ್, ಚುಕ್ಕಿ ನಂಜುಂಡಸ್ವಾಮಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಏಕಾಏಕಿಯಾಗಿ ನುಗ್ಗಿದ ಯುವಕನೊಬ್ಬ ಟಿವಿ ಮೈಕ್ ಕಿತ್ತುಕೊಂಡು ಟಿಕಾಯತ್ ಮೇಲೆ ಹಲ್ಲೆ ನಡೆಸಿದ್ದಾನೆ ಅಲ್ಲದೆ, ಟಿಕಾಯತ್ ಮುಖದ ಮೇಲೆ ಕಪ್ಪು ಬಣ್ಣ ಎರಚಿದ್ದಾನೆ. ತಕ್ಷಣವೇ ಸ್ಥಳದಲ್ಲಿದ್ದವರಿಂದ ಟಿಕಾಯತ್ ಅವರ ರಕ್ಷಣೆ ಮಾಡಿದರು. ಈ ಸಂದರ್ಭದಲ್ಲಿ ಯುವಕ ಮೋದಿ, ಮೋದಿ ಎಂಬ ಘೋಷಣೆ ಕೂಗುತ್ತಿದ್ದ ಎಂದು ಸ್ಥಳದಲ್ಲಿದ್ದವರು ತಿಳಿಸಿದ್ದಾರೆ.

ಕೋಡಿಹಳ್ಳಿ ಚಂದ್ರಶೇಖರ್ ಕಿಕ್ ಬ್ಯಾಂಕ್ ಆರೋಪ ಪ್ರಕರಣದ ಹಿನ್ನೆಲೆಯಲ್ಲಿ ರೈತ ನಾಯಕ ರಾಕೇಶ್ ಟಿಕಾಯತ್ ಹೆಸರು ತಳುಕು ಹಾಕಿಕೊಂಡಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಲು ಬೆಂಗಳೂರಿಗೆ ಆಗಮಿಸಿದ ರಾಕೇಶ್ ಟಿಕಾಯತ್, ಈ ವೇಳೆ ಪತ್ರಕರ್ತರ ಹಿಂಬದಿಯಲ್ಲಿ ಕುಳಿತಿದ್ದ ವ್ಯಕ್ತಿ ಗಣ್ಯರಿದ್ದ ವೇದಿಕೆಯ ಮೇಟ್ಟಿಲೇರಿ ಟಿವಿ ಮೈಕ್ ನಿಂದ ಯದುವೀರ್ ಸಿಂಗ್ ಮೇಲೆ ಹಲ್ಲೆ ನಡೆಸಿದ್ದಾನೆ.

ಜತೆಗೆ ಹಿಂಬಾಲಿಸಿದ ಗುಂಪು ರೈತ ನಾಯಕರಿಗೆ ಮಸಿ ಬಳಿದಿದೆ. ಕೂಡಲೇ ಸ್ಥಳದಲ್ಲಿದ್ದ ರೈತರು ಹಲ್ಲೆಕೋರರನ್ನು ಹಿಡಿದು ಥಳಿಸಿ ಪೋಲಿಸರಿಗೆ ಒಪ್ಪಿಸಿದರು. ಈ ಸಂದರ್ಭದಲ್ಲಿ ಗಾಂಧಿಭವನದಲ್ಲಿ ಕುರ್ಚಿಯನ್ನು ಹಿಡಿದುಕೊಂಡು ಹೊಡೆದಾಡಿದ ಘಟನೆ ನಡೆದಿದೆ.

ನಂತರ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರಲ್ಲದೆ, ಗಲಭೆಕೋರರನ್ನು ಬಂಧಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.

More News