ನಾಗಪುರ: ಜ್ಞಾನವಾಪಿ ಮಸೀದಿ ವಿವಿದವು ನಂಬಿಕೆಗೆ ಸಂಬಂಧಿಸಿದ ವಿಷಯವಾಗಿದ್ದು, ಈ ಬಗ್ಗೆ ನ್ಯಾಯಾಲಯದ ತೀರ್ಮಾನವನ್ನು ಪ್ರತಿಯೊಬ್ಬರೂ ಒಪ್ಪಲೇಬೇಕು ಎಂದು ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ತಿಳಿಸಿದ್ದಾರೆ.
ನಾಗಪುರದಲ್ಲಿ ಆರ್ ಎಸ್ ಎಸ್ ನ ಮೂರನೇ ಅಧಿಕಾರಿ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈ ಹಿನ್ನೆಲೆಯಲ್ಲಿ ಪ್ರತಿಯೊಂದು ಮಸೀದಿಯಲ್ಲಿ ಶಿವಲಿಂಗವನ್ನು ಹುಡುಕುವ ಅವಶ್ಯವಿಲ್ಲ, ಹಾಗೂ ಇದರಿಂದ ಹೊಸ ವಿವಾದವನ್ನು ಹುಟ್ಟುಹಾಕುವ ಅಗತ್ಯವಿಲ್ಲ ಎಂದು ಅವರು ತಿಳಿಸಿದರು.
ಈಗಾಗಲೇ ಅಯೋಧ್ಯೆ ಆಂದೋಲನದಲ್ಲಿ ಫಭಾಗವಹಿಸಿದ್ದು ಒಂದು ಅಪವಾದವಾಗಿದೆ, ಭವಿಷ್ಯದಲ್ಲಿ ಇಂತಹ ಆಂದೋಲನವನ್ನು ಕೈಗೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಇತಿಹಾಸವನ್ನು ಈಗಿನ ಹಿಂದೂಗಳು ಮತ್ತು ಮುಸ್ಲಿಂರು ಸೃಷ್ಟಿಸಲು ಅಥವಾ ತಿರುಚಲು ಸಾಧ್ಯವಿಲ್ಲ ಎಂದರು.

ಆಕ್ರಮಣಕಾರಿ ಮುಸ್ಲಿಂರು ಭಾರತ ದೇಶಕ್ಕೆ ಆಗಮಿಸಿದಾಗ ಇವೆಲ್ಲವೂ ಸಂಭವಿಸಿದೆ. ಇಂತಹ ಸಾವಿರಾರು ದೇವಸ್ಥಾನಗಳಿವೆ. ಆ ಬಗ್ಗೆ ಸಂಘವು ಯಾವುದೇ ರೀತಿಯಲ್ಲಿ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ತಿಳಿಸಿದರು.