ಹೈದರಾಬಾದ್ : ಹದಿನೇಳು ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣದ ಆಘಾತದಿಂದ ಹೊರಬರುವ ಮುನ್ನವೇ ಹೈದರಾಬಾದ್ ನಲ್ಲಿ ಮತ್ತೆರಡು ಅತ್ಯಾಚಾರ ಪ್ರಕರಣಗಳು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿವೆ.
ಮೇ 31 ರಂದು ಮೊಘಲ್ ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅತ್ಯಾಚಾರ ಪ್ರಕರಣವೊಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈ ಪ್ರಕರಣ ಸಂಬಂಧ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ಪ್ರಕರಣವನ್ನು ದಾಖಲಿಸಿ, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಕ್ಯಾಬ್ ನಲ್ಲಿ ಬಾಲಕಿಗೆ ಡ್ರಾಪ್ ಕೊಡುವ ನೆಪವೊಡ್ಡಿ ಅಪಹರಿಸಿ, ಹೈದರಾಬಾದ್ ನ ಹೊರವಲಯದಲ್ಲಿರುವ ರಂಗಾರೆಡ್ಡಿ ಜಿಲ್ಲೆಯ ಕೊಂಡೂರ್ಗ್ ನಿರ್ಜನ ಪ್ರದೇಶಕ್ಕೆ ಕರೊದೊಯ್ಡು ದುಷ್ಕೃತ್ಯವೆಸಗಿದ್ದಾರೆ. ಮುರು ದಿನ ಸಂತ್ರಸ್ಥೆಯನ್ನು ರಸ್ತೆಯಲ್ಲಿ ಬಿಟ್ಟು ಪರಾರಿಯಾಗಿದ್ದಾರೆ. ಸಂತ್ರಸ್ಥೆಯನ್ನು ಪೊಲೀಸರು ಕರೆದೊಯ್ದು ದೂರು ದಾಖಲಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಎರಡನೇ ಪ್ರಕರಣ
ಮತ್ತೊಂದು ಪ್ರಕರಣ ಮೇ 30ರಂದು ನಡೆದಿದ್ದು ಚಾರ್ಮಿನಾರ್ ಬಳಿ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಹುಡುಗಿಯ ಮೇಲೆ ಅತ್ಯಾಚಾರವೆಸಗಲಾಗಿದೆ. ಆರೋಪಿಯು ಆಕೆಗೆ ಆಮಿಷವೊಡ್ಡಿ ಲಂಗರ್ ಹೌಜ್ ಪ್ರದೇಶಕ್ಕೆ ಕರೆದೊಯ್ದು ಕೃತ್ಯವೆಸಗಿದ್ದಾರೆ. ಈ ಸಂಬಂಧ ಆರೋಪಿಯನ್ನು ಬಂಧಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.




