CHADDI BJP & CONGRESS WAR: ಸಿದ್ದರಾಮಯ್ಯ ಅವರ ನಿವಾಸಕ್ಕೆ ಚಡ್ಡಿ: ಬಿಜೆಪಿಯಿಂದ ವಿನೂತನ ಪ್ರತಿಭಟನೆ

ಬೆಂಗಳೂರು : RSS ಬಗ್ಗೆ ಅವಹೇಳನವಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ರಾಜ್ಯ ಘಟಕ ವಿನೂತನ ಪ್ರತಿಭಟನೆ ಮಾಡಲು ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಬೆಂಗಳೂರಿನ ನಿವಾಸಕ್ಕೆ ಚಡ್ಡಿಗಳನ್ನು ತಲುಪಿಸೋ ಆಂದೋಲನ ಆರಂಭಿಸಲಿದೆ.
ಸಾರ್ವಜನಿಕರಿಂದ ಸಂಗ್ರಹಿಸಿದ ಚಡ್ಡಿಗಳನ್ನ ಸಿದ್ದರಾಮಯ್ಯ ಮನೆಗೆ ತಲುಪಿಸೋ ಆಂದೋಲನಕ್ಕೆ ಇಂದು ಸಂಜೆ ಬಿಜೆಪಿ ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ನೇತೃತ್ವದಲ್ಲಿ ಆರಂಭವಾಗಲಿದೆ.
ಗಾಂಧಿಭವನದಿಂದ ಸಿದ್ದರಾಮಯ್ಯ ಮನೆವರೆಗೂ ಪಾದಯಾತ್ರೆ ತೆರಳುವ ಬಿಜೆಪಿ ಕಾರ್ಯಕರ್ತರು ಚಡ್ಡಿಗಳನ್ನು ತಲುಪಿಸಲಿದ್ದಾರೆ.
ಸಿದ್ದರಾಮಯ್ಯ ಅವರಿಂದ ಚಡ್ಡಿ ಸುಡುವ ಅಭಿಯಾನ ಹಿನ್ನೆಲೆ‌
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಡ್ಡಿಗಳನ್ನು ಸುಡಲಾಗುವುದು ಎಂದು ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಅವರಿಗೆ ಬಿಜೆಪಿ ಟಕ್ಕರ್ ನೀಡಲು ಮುಂದಾಗಿದೆ.

ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರ ಮನೆಗೆ ಚಡ್ಡಿ ತಲುಪಿಸಲು ಬಿಜೆಪಿ ಮುಂದಾಗಿದೆ. ಈ ಮೂಲಕ ಚಡ್ಡಿ ಪರ ಮತ್ತು ವಿರೋಧಿ ಹೋರಾಟ ಬಿರುಸುಗೊಂಡಿದೆ.

More News