ನವದೆಹಲಿ : ಮಾನವೀಯತೆಯ ಪ್ರತೀಕ ಪ್ರವಾದಿ ಮೊಹಮ್ಮದ್ ಅವರನ್ನು ನಿಂದಿಸಿದವರಿಗೆ ಕ್ಷಮೆ ಎನ್ನುವುದೇ ಇಲ್ಲ, ಇನ್ನು ಕೇಸರಿ ಭಯೋತ್ಪಾದಕರು ತಮ್ಮ ಅಂತ್ಯಕ್ಕಾಗಿ ಕಾಯಬೇಕು. ಮುಂಬೈ, ದೆಹಲಿ ಮತ್ತು ಉತ್ತರ ಪ್ರದೇಶದಲ್ಲಿ ಆತ್ಮಾಹುತಿ ದಾಳಿ ನಡೆಸುವುದಾಗಿ ಆಲ್ ಖೈದಾ ಉಗ್ರ ಸಂಘಟನೆ ಬೆದರಿಕೆಯೊಡ್ಡಿದೆ.
ಆ ಕುರಿತು ಜೂನ್ 6ರಂದು ಸಾಮಾಜಿಕ ಜಾಲತಾಣದ ಮೂಲಕ ಪತ್ರವೊಂದನ್ನು ಬಿಡುಗಡೆ ಮಾಡಿರುವ ಆಲ್ ಖೈದಾ ಸಂಘಟನೆ, ಪ್ರವಾದಿಯ ಘನತೆಗಾಗಿ ಹೋರಾಡಲು ಮೂರು ಕಡೆ ಆತ್ಮಾಹುತಿ ದಾಳಿ ನಡೆಸುವುದಾಗಿ ತಿಳಿಸಿದೆ ಅಲ್ಲದೆ. ಹಿಂದೂಪರ ಹೋರಾಟಗಾರರನ್ನು ಕೇಸರಿ ಭಯೋತ್ಪಾದಕರು ಎಂದು ಕರೆದಿದೆ.
ನಮ್ಮ ಪ್ರೀತಿಯ ಪ್ರವಾದಿಯನ್ನು ಅವಮಾನಿಸಿದವರ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳದಿದ್ದರೆ ನಮ್ಮ ತಾಯಂದಿರು ನಮ್ಮನ್ನು ಕಳೆದುಕೊಳ್ಳಲಿ ಎಂದು ಪತ್ರದಲ್ಲಿ ತಿಳಿಸಿದ ಸಂಘಟನೆ, ಪ್ರವಾದಿಯನ್ನು ನಿಂದಿಸಿದವರಿಗೆ ಯಾವುದೇ ಕ್ಷಮದಾನ ಇಲ್ಲ ಎಂದು ಹೇಳಿದೆ.

ಇನ್ನೊಂದೆಡೆ ಮುಜಾಹಿದ್ದೀನ್ ಫಜ್ವಾತುಲ್ ಹಿಂದ್ ಉಗ್ರ ಸಂಘಟನೆ ನೂಪುರ್ ಶರ್ಮಾ ಅವರಿಗೂ ಬೆದರಿಕೆಯೊಡ್ಡಿದ್ದು, ತಮ್ಮ ಹೇಳಿಕೆಯನ್ನು ಹಿಂಪಡೆದು, ಇಡೀ ವಿಶ್ವದ ಮುದೆ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ, ಪ್ರವಾದಿಯನ್ನು ಹೀಯಾಳಿಸಿದವರಿಗೆ ಏನು ಮಾಡಲಾಗುತ್ತದೆಯೋ ಅದನ್ನು ನೂಪುರ್ ಅವರಿಗೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದೆ.




