DEMANDING BRIBE IN GOVERNMENT HOSPITAL: ಮಗನ ಶವವನ್ನು ಸರ್ಕಾರಿ ಆಸ್ಪತ್ರೆಯಿಂದ ಪಡೆಯಲು 50 ಸಾವಿರ ರೂಪಾಯಿ ಬೇಡಿಕೆ: ವೃದ್ಧ ದಂಪತಿಗಳಿಂದ ಭಿಕ್ಷೆ

ಬಿಹಾರ : ಆಸ್ಪತ್ರೆಯಲ್ಲಿ ಅಸುನೀಗಿದ ಮಗನ ಶವ ನೀಡಬೇಕಾದರೆ 50 ಸಾವಿರ ರೂಪಾಯಿ ಲಂಚದ ಬೇಡಿಕೆಯನ್ನು ಆಸ್ಪತ್ರೆ ಸಿಬ್ಬಂದಿ ಇಟ್ಟಿದ್ದರಿಂದ ಆ ಹಣಕ್ಕಾಗಿ ವೃದ್ಧ ದಂಪತಿಗಳು ಬೀದಿ ಬೀದಿಯಲ್ಲಿ ಭಿಕ್ಷೆ ಬೇಡುತ್ತಿರುವ ಕರುಳು ಹಿಂಡುವ ಘಟನೆ ಬಿಹಾರದಲ್ಲಿ ನಡೆದಿದೆ.
ದಂಪತಿಗಳು ಬೀದಿ ಬೀದಿಯಲ್ಲಿ ಅಲೆದು, ಭಿಕ್ಷೆ ಎತ್ತುತ್ತಿರುವ ವಿಡಿಯೋ ಈಗ ವೈರಲ್ ಆಗಿದ್ದು, ಇದುವರೆಗೂ ಸಂಬಂಧಿಸಿದ ಅಧಿಕಾರಿಗಳು, ರಾಜಕಾರಣಿಗಳು ಸ್ಪಂದಿಸದೇ ಇರುವುದು ವಿಪರ್ಯಾಸವಾಗಿದ್ದು, ನಮ್ಮ ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ.

ಕೆಲವು ದಿನಗಳಿಂದ ತಮ್ಮ ಮಗ ನಾಪತ್ತೆಯಾಗಿದ್ದ, ಆದರೆ ಎರಡು ದಿನಗಳ ಹಿಂದೆ ಬಿಹಾರದ ಸಮಷ್ಟಿಪುರ ಸದರ್ ಆಸ್ಪತ್ರೆಯಿಂದ ದೂರವಾಣಿ ಕರೆ ಬಂದಿತ್ತು.

ಆಸ್ಪತ್ರೆಗೆ ತೆರಳಿ ನೋಡಿದಾಗ ಅಲ್ಲಿಯ ಸಿಬ್ಬಂದಿ 50 ಸಾವಿರ ನೀಡಿದರೆ ಶವವನ್ನು ನೀಡುವುದಾಗಿ ತಿಳಿಸಿದರು. ನಾವು ಬಡವರು ಹಣ ಇಲ್ಲ ಎಂದು ಹೇಳಿದರೂ ಕೇಳದೇ ಇದ್ದುದ್ದರಿಂದ ನಾವು ಭಿಕ್ಷೆ ಬೇಡಬೇಕಾಗಿದೆ ಎಂದು ಮಹೇಶ್ ಎಎನ್ ಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

More News