ತುಮಕೂರು: ಜೆಡಿಎಸ್ ನ ಗುಬ್ಬಿ ಕ್ಷೇತ್ರದ ಶಾಸಕ ಎಸ್ ಆರ್ ಶ್ರೀನಿವಾಸ್ ಮತ್ತು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರ ನಡುವಿನ ಸೋಶಿಯಲ್ ಮೀಡಿಯಾ ವಾರ್ ಜೋರಾಗಿ ನಡೆಯುತ್ತಿದೆ. ಕುಮಾರಸ್ವಾಮಿ ಅವರು ವಿರುದ್ಧ ಶ್ರೀನಿವಾಸ್ ಬೆಂಬಲಿಗರು ಫೇನ್ ಬುಕ್ ನಲ್ಲಿ ನಡೆಸುತ್ತಿರುವ ಸಮರ ತಾರಕ್ಕೇರಿದೆ.
ಶಾಸಕ ಶ್ರೀನಿವಾಸ್ ಬೆಂಬಲಿಗರು ನಿನ್ನೆಯಷ್ಟೇ ಕುಮಾರಸ್ವಾಮಿ ಅವರ ತಿಥಿ ಕಾರ್ಡ್ ಅನ್ನು ಅಪ್ ಲೋಡ್ ಮಾಡಿದ್ದರು. ಇದೀಗ ಕಾಣಿಯಾಗಿದ್ದಾರೆ ಎಂಬ ಪೋಸ್ಟರ್ ಅನ್ನು ಅಪ್ ಲೋಡ್ ಮಾಡಿದ್ದಾರೆ. ಇವೆರೆಡು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಸಾಕಷ್ಟು ವೈರಲ್ ಆಗಿವೆ.
ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರ ಫೋಟೋ ಬಳಸಿ, ‘ಯು ಟರ್ನ್ ಕುಮಾರ ಕಾಣಿಯಾಗಿದ್ದಾರೆ’ ಎಂದು ಎಸ್ ಆರ್ ಶ್ರೀನಿವಾಸ್ ಅವರ ಫ್ಯಾನ್ಸ್ ಕ್ಲಬ್ ಫೇಸ್ ಬುಕ್ನಲ್ಲಿ ಪೋಸ್ಟ ಮಾಡಿ, ಕುಮಾರಸ್ವಾಮಿ ಅವರ ವಿರುದ್ದ ಇದ್ದ ಆಕ್ರೋಶವನ್ನು ಅವರು ಹೊರಹಾಕಿದ್ದಾರೆ.

ಹಾಗೆಯೇ ಎಲ್ಲೋ ಕುತ್ಕೂಂಡು ಮಾತನಾಡೋದ್ದಲ್ಲ, ತಾಕತ್ ಇದ್ದರೆ ನಮ್ಮ ಕ್ಷೇತ್ರಕ್ಕೆ ಬಂದು ಗೆದ್ದು ತೋರಿಸಿ ಎಂದು ಕುಮಾರಸ್ವಾಮಿ ಅವರಿಗೆ ಫೇಸ್ ಬುಕ್ ನಲ್ಲಿ ಬಹಿರಂಗ ಸವಾಲ್ ಹಾಕಿದ್ದಾರೆ.
#hdkumaraswamy, #gubbisrinivas, #jds, #uturnkumar, #Socialmedia




